IPL 2024: ಬಟ್ಲರ್ ಫಾರ್ಮ್​ ಕಂಡುಕೊಳ್ಳಲು ನೆರವಾದ ಆರ್​ಸಿಬಿ ವೇಗಿಗಳು

|

Updated on: Apr 06, 2024 | 11:29 PM

IPL 2024: ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಲಯ ಕಂಡುಕೊಂಡ ಸಂಜು ಸ್ಯಾಮ್ಸನ್ ಹಾಗೂ ಜೋಶ್ ಬಟ್ಲರ್ ಆರ್​ಸಿಬಿ ವೇಗಿಗಳ ಬೆವರಿಳಿಸಿದರು. ಅದರಲ್ಲೂ ಕಳೆದ ಮೂರು ಪಂದ್ಯಗಳಲ್ಲಿ ಒಂದಕ್ಕಿ ದಾಟಲು ಕಷ್ಟಪಡುತ್ತಿದ್ದ ಬಟ್ಲರ್ ಆರ್​ಸಿಬಿ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು.

1 / 8
ಆರ್​ಸಿಬಿ ವಿರುದ್ಧದ ಪಂದ್ಯವನ್ನೂ ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಲೀಗ್​ನಲ್ಲಿ ಸತತ ಮೂರನೇ ಜಯ ದಾಖಲಿಸಿದೆ. ಈ ಮೂಲಕ ರಾಜಸ್ಥಾನ ತನ್ನ ತವರು ನೆಲದಲ್ಲಿ ಅಜೇಯ ಓಟವನ್ನು ಮುಂದುವರೆಸಿದೆ.

2 / 8
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು. ತಂಡದ ಪರ ಶತಕ ಸಿಡಿಸಿ ಮಿಂಚಿದ ಕೊಹ್ಲಿ ಅಜೇಯ 113 ರನ್ ಬಾರಿಸಿದರು.

3 / 8
ಇನ್ನು ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ ಓವರ್​ನ ಮೂರನೇ ಎಸೆತದಲ್ಲಿ ಶೂನ್ಯಕ್ಕೆ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಆರಂಭದಲ್ಲೇ ಆರ್​ಸಿಬಿ ವಿಕೆಟ್ ಪಡೆದುಕೊಂಡಿದ್ದರಿಂದ ಈ ಪಂದ್ಯ ಆರ್​ಸಿಬಿ ಪರ ವಾಲುತ್ತೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.

4 / 8
ಅದಕ್ಕೆ ಪೂರಕವಾಗಿ ಪವರ್ ಪ್ಲೇಯ ಮೊದಲ ಐದು ಓವರ್​ಗಳಲ್ಲಿ ಆರ್​ಸಿಬಿ ವೇಗಿಗಳು ರಾಜಸ್ಥಾನ್ ಬ್ಯಾಟರ್​ಗಳನ್ನು ಕಟ್ಟಿಹಾಕಿದ್ದರು. ಆದರೆ 6ನೇ ಓವರ್​ಲ್ಲಿ ಮಯಾಂಕ್ ದಾಗರ್ ಬೌಲ್ ಮಾಡಿದ ಓವರ್​ ಪಂದ್ಯದ ಗತಿಯನ್ನೇ ಬದಲಿಸಿತು. ಈ ಓವರ್​ನಲ್ಲಿ ಬರೋಬ್ಬರಿ 20 ರನ್ ಬಂತು.

5 / 8
ಇಲ್ಲಿಂದ ಲಯ ಕಂಡುಕೊಂಡ ಸಂಜು ಸ್ಯಾಮ್ಸನ್ ಹಾಗೂ ಜೋಶ್ ಬಟ್ಲರ್ ಆರ್​ಸಿಬಿ ವೇಗಿಗಳ ಬೆವರಿಳಿಸಿದರು. ಅದರಲ್ಲೂ ಕಳೆದ ಮೂರು ಪಂದ್ಯಗಳಲ್ಲಿ ಒಂದಕ್ಕಿ ದಾಟಲು ಕಷ್ಟಪಡುತ್ತಿದ್ದ ಬಟ್ಲರ್ ಆರ್​ಸಿಬಿ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು.

6 / 8
ಕಳೆದ ಮೂರು ಪಂದ್ಯಗಳಲ್ಲಿ ಬಟ್ಲರ್ ಕ್ರಮವಾಗಿ 11, 11, 13 ರನ್ ಬಾರಿಸಿದ್ದರು. ಆದರೆ ಆರ್​ಸಿಬಿ ವಿರುದ್ಧ ತನ್ನ ಹಳೆಯ ಫಾರ್ಮ್​ ಕಂಡುಕೊಂಡ ಬಟ್ಲರ್ ಸಿಕ್ಸರ್​ ಹಾಗೂ ಬೌಂಡರಿಗಳ ಮಳೆಗರೆದರು.

7 / 8
ಅಂತಿಮವಾಗಿ ಆರಂಭಿಕರಾಗಿ ಕಣಕ್ಕಿಳಿದು ಕೊನೆಯವರೆಗೂ ಅಜೇಯರಾಗಿ ಉಳಿದ ಬಟ್ಲರ್ 20ನೇ ಓವರ್​ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಶತಕ ಕೂಡ ಪೂರ್ಣಗೊಳಿಸಿದರು. ಬಟ್ಲರ್ ತಮ್ಮ ಇನ್ನಿಂಗ್ಸ್​ನಲ್ಲಿ 58 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದರು.

8 / 8
ಇವರಲ್ಲದೆ ಜವಬ್ದಾರಿಯುತ ಇನ್ನಿಂಗ್ಸ್ ಆಡಿದ ನಾಯಕ ಸಂಜು ಸ್ಯಾಮ್ಸನ್ ಕೂಡ ಈ ಪಂದ್ಯದಲ್ಲಿ 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 69 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು.