IPL 2024 Car Winner: ಡೆಲ್ಲಿ ಕ್ಯಾಪಿಟಲ್ಸ್​ ಆಟಗಾರನ ಪಾಲಾದ ಟಾಟಾ ಕಾರ್

|

Updated on: May 27, 2024 | 7:52 AM

IPL 2024 Car Winner: ಈ ಬಾರಿಯ ಐಪಿಎಲ್​ನಲ್ಲಿ ಬ್ಯಾಟರ್​ಗಳದ್ದೇ ಅಬ್ಬರ. ಈ ಸಿಡಿಲಬ್ಬರಗಳ ನಡುವೆ ಎಲ್ಲರ ಗಮನ ಸೆಳೆದಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ಆರಂಭಿಕ ಆಟಗಾರ. ಲುಂಗಿ ಎನ್​ಗಿಡಿ ಬದಲಿ ಆಟಗಾರನಾಗಿ ಐಪಿಎಲ್​ಗೆ ಎಂಟ್ರಿ ಕೊಟ್ಟಿದ್ದ ಆಸೀಸ್ ದಾಂಡಿಗ ಇದೀಗ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

1 / 7
IPL 2024 Car Winner: ಐಪಿಎಲ್ ಸೀಸನ್​ 17 ಗೆ ತೆರೆ ಬಿದ್ದಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಬಗ್ಗು ಬಡಿದು ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.

2 / 7
ಈ ಬಾರಿಯ ಸೀಸನ್​ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ 741 ರನ್​ಗಳೊಂದಿಗೆ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡರೆ, 24 ವಿಕೆಟ್ ಕಬಳಿಸಿದ ಹರ್ಷಲ್ ಪರ್ಪಲ್​ ಕ್ಯಾಪ್ ಪಡೆದಿದ್ದಾರೆ.

3 / 7
ಹಾಗೆಯೇ ಐಪಿಎಲ್ ಸೀಸನ್​ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ ಟಾಟಾ ಕಾರ್ (or 10 ಲಕ್ಷ ರೂ.)​ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ದಾಂಡಿಗನ ಪಾಲಾಗಿದ್ದು ವಿಶೇಷ. (PC; sportzpics)

4 / 7
ಹೌದು, ಸೂಪರ್ ಸ್ಟ್ರೈಕರ್​ಗೆ ಘೋಷಿಸಲಾಗಿದ್ದ ಟಾಟಾ ಪಂಚ್ ಇವಿ ಕಾರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕನಾಗಿ ಕಣಕ್ಕಿಳಿದಿದ್ದ ಆಸ್ಟ್ರೇಲಿಯಾದ ಯುವ ಬ್ಯಾಟರ್​ ಜೇಕ್ ಫ್ರೇಸರ್ ಮೆಕ್​ಗುರ್ಕ್​ ಪಾಲಾಗಿದೆ.

5 / 7
ಡೆಲ್ಲಿ ಕ್ಯಾಪಿಟಲ್ಸ್ ಪರ 9 ಇನಿಂಗ್ಸ್​ಗಳಲ್ಲಿ ಆರಂಭಿಕನಾಗಿ ಬ್ಯಾಟ್ ಬೀಸಿದ್ದ ಜೇಕ್ ಫ್ರೇಸರ್ 141 ಎಸೆತಗಳನ್ನು ಎದುರಿಸಿ 330 ರನ್ ಬಾರಿಸಿದ್ದರು. ಅದು ಕೂಡ 234.04 ರ ಸ್ಟ್ರೈಕ್ ರೇಟ್​ನಲ್ಲಿ ಎಂಬುದು ವಿಶೇಷ.

6 / 7
ಈ ಮೂಲಕ ಐಪಿಎಲ್ ಸೀಸನ್ 17ರ  ಸೂಪರ್ ಸ್ಟ್ರೈಕರ್ ಆಗಿ ಜೇಕ್ ಫ್ರೇಸರ್ ಮೆಕ್​ಗುರ್ಕ್​ ಹೊರಹೊಮ್ಮಿದ್ದಾರೆ. ಅದರಂತೆ ಟಾಟಾ ಪಂಚ್ ಇವಿ ಕಾರ್ ಅನ್ನು​ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ತಮ್ಮದಾಗಿಸಿಕೊಂಡಿದ್ದಾರೆ.

7 / 7
ವಿಶೇಷ ಎಂದರೆ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಜೇಕ್ ಫ್ರೇಸರ್ ಅವರನ್ನು ಯಾವುದೇ ಫ್ರಾಂಚೈಸಿ ಆಯ್ಕೆ ಮಾಡಿರಲಿಲ್ಲ. ಆದರೆ ಐಪಿಎಲ್ ಆರಂಭದ ವೇಳೆ ಲುಂಗಿ ಎನ್​ಗಿಡಿ ಗಾಯಗೊಂಡಿದ್ದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಜೇಕ್ ಫ್ರೇಸರ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿದ್ದರು. ಇದೀಗ ಬದಲಿ ಆಟಗಾರನಾಗಿ ಬಂದ ಜೇಕ್ ಫ್ರೇಸರ್​ ಮೆಕ್​ಗುರ್ಕ್ ಸೂಪರ್ ಸ್ಟ್ರೈಕರ್​ ಪ್ರಶಸ್ತಿಯನ್ನು ಪಡೆದಿರುವುದು ವಿಶೇಷ.