IPL 2024: ಐಪಿಎಲ್​ಗೆ ಬಿರ್ಲಾ ಗ್ರೂಪ್ ಎಂಟ್ರಿ: ಬರೋಬ್ಬರಿ 500 ಕೋಟಿ ರೂ. ಬಿಡ್..!

| Updated By: ಝಾಹಿರ್ ಯೂಸುಫ್

Updated on: Jan 15, 2024 | 1:21 PM

IPL 2024: ಈ ಬಾರಿಯ ಐಪಿಎಲ್ ಟೂರ್ನಿಯು ಮಾರ್ಚ್ 22 ರಿಂದ ಶುರುವಾಗುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ವುಮೆನ್ಸ್ ಪ್ರೀಮಿಯರ್ ಲೀಗ್ ನಡೆಯಲಿದ್ದು, ಇದರ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಗೆ ಚಾಲನೆ ನೀಡಲಿದೆ.

1 / 5
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಆದಿತ್ಯ ಬಿರ್ಲಾ ಗ್ರೂಪ್ ಬರೋಬ್ಬರಿ 500 ಕೋಟಿ ರೂ.ಗೆ ಬಿಡ್ ಮಾಡಿದೆ ಎಂದು ವರದಿಯಾಗಿದೆ. ಈ ಬಾರಿಯ ಶೀರ್ಷಿಕೆ ಪ್ರಾಯೋಜಕತ್ವದ ಮೂಲ ಬೆಲೆಯನ್ನು ವರ್ಷಕ್ಕೆ 360 ಕೋಟಿ ರೂ. ಇದೀಗ ಆದಿತ್ಯ ಬಿರ್ಲಾ ಗ್ರೂಪ್ ವಾರ್ಷಿಕ ಐನೂರು ಕೋಟಿ ರೂ. ಪಾವತಿಸಲು ಮುಂದಾಗಿರುವುದು ವಿಶೇಷ.

2 / 5
ಐಪಿಎಲ್ 2022 ರ ಮತ್ತು 2023 ಶೀರ್ಷಿಕೆ ಪ್ರಯೋಜಕತ್ವವನ್ನು ಟಾಟಾ ಗ್ರೂಪ್ ವಹಿಸಿಕೊಂಡಿತ್ತು. ಎರಡು ವರ್ಷಗಳ ಟೈಟಲ್ ಪ್ರಾಯೋಜಕತ್ವಕ್ಕಾಗಿ ಟಾಟಾ ಗ್ರೂಪ್ ಬರೋಬ್ಬರಿ 670 ಕೋಟಿ ರೂ. ಪಾವತಿಸಿತ್ತು. ಐಪಿಎಲ್ 2023ರ ಮುಕ್ತಾಯದೊಂದಿಗೆ ಈ ಒಪ್ಪಂದ ಕೂಡ ಕೊನೆಗೊಂಡಿದೆ.

3 / 5
ಇದೀಗ ಐಪಿಎಲ್​ 2023 ರಿಂದ 2028 ರವರೆಗಿನ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬಿಡ್ಡಿಂಗ್ ನಡೆಯುತ್ತಿದೆ. 5 ವರ್ಷಗಳ ಕಾಲದ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆಯಲು ಬಿರ್ಲಾ ಗ್ರೂಪ್ ಆಸಕ್ತಿ ತೋರಿಸಿದ್ದು, ಅದರಂತೆ ವಾರ್ಷಿಕ 500 ಕೋಟಿ ರೂ.ನಂತೆ ಒಟ್ಟು 2500 ಕೋಟಿ ರೂ. ಪಾವತಿಸಲು ಮುಂದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

4 / 5
ಒಂದು ವೇಳೆ ಬೇರೆ ಯಾವುದೇ ಕಂಪೆನಿ ಅಥವಾ ಸಂಸ್ಥೆಯು 500 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡದಿದ್ದರೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವು ಆದಿತ್ಯ ಬಿರ್ಲಾ ಗ್ರೂಪ್ ಪಾಲಾಗಲಿದೆ. ಸದ್ಯ ಬಿಡ್ ಪ್ರಕ್ರಿಯೆಯು ಚಾಲನೆಯಲ್ಲಿದ್ದು, ಅಂತಿಮವಾಗಿ ಐಪಿಎಲ್ ಟೈಟಲ್ ಸ್ಪೋನ್ಸರ್ ಯಾರ ಪಾಲಾಗಲಿದೆ ಎಂಬುದೇ ಈಗ ಕುತೂಹಲ.

5 / 5
ಈ ಬಾರಿಯ ಐಪಿಎಲ್ ಟೂರ್ನಿಯು ಮಾರ್ಚ್ 22 ರಿಂದ ಶುರುವಾಗುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ವುಮೆನ್ಸ್ ಪ್ರೀಮಿಯರ್ ಲೀಗ್ ನಡೆಯಲಿದ್ದು, ಇದರ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಚಾಲನೆ ನೀಡಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.