IPL 2024: ಸಿಕ್ಸ್ಗಳ ಸುರಿಮಳೆ: ಹೊಸ ದಾಖಲೆ
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಮೊದಲ ಸೀಸನ್ನಲ್ಲಿ ಮೂಡಿಬಂದ ಒಟ್ಟು ಸಿಕ್ಸ್ಗಳ ಸಂಖ್ಯೆ 622. ಇದಾದ ಬಳಿಕ ಐಪಿಎಲ್ 2022 ರಲ್ಲಿ ಮೊದಲ ಬಾರಿಗೆ ಒಟ್ಟು ಸಿಕ್ಸ್ಗಳ ಸಂಖ್ಯೆಯು ಸಾವಿರದ ಗಡಿದಾಟಿತ್ತು. ಇನ್ನು ಐಪಿಎಲ್ 2023 ರಲ್ಲಿ 1124 ಸಿಕ್ಸ್ಗಳು ಸಿಡಿಯುವುದರೊಂದಿಗೆ ಹೊಸ ಇತಿಹಾಸ ಕೂಡ ನಿರ್ಮಾಣವಾಯಿತು. ಈ ದಾಖಲೆ ಈ ಬಾರಿ ಧೂಳೀಪಟವಾಗುವುದನ್ನು ಎದುರು ನೋಡಬಹುದು.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಸಿಕ್ಸರ್ಗಳ ಸುರಿಮಳೆಯಾಗಿದೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು. ಅಂದರೆ ಈ ಬಾರಿಯ ಐಪಿಎಲ್ನಲ್ಲಿ ಅತೀ ವೇಗವಾಗಿ ಸಾವಿರ ಸಿಕ್ಸ್ಗಳು ಪೂರ್ಣಗೊಂಡಿವೆ.
2 / 6
ಐಪಿಎಲ್ 2023 ರಲ್ಲಿ 67 ಪಂದ್ಯಗಳಲ್ಲಿ 1000 ಸಿಕ್ಸ್ಗಳು ಮೂಡಿಬಂದಿದ್ದವು. ಆದರೆ ಈ ಬಾರಿಯ ಐಪಿಎಲ್ನಲ್ಲಿ ಕೇವಲ 57 ಮ್ಯಾಚ್ಗಳಲ್ಲೇ 1000 ಸಿಕ್ಸ್ಗಳು ಪೂರ್ಣಗೊಂಡಿದೆ.
3 / 6
ಹಾಗೆಯೇ ಐಪಿಎಲ್ 2023 ರಲ್ಲಿ 1000 ಸಿಕ್ಸರ್ಗಳನ್ನು ಪೂರ್ಣಗೊಳಿಸಲು ಬ್ಯಾಟರ್ಗಳು ತೆಗೆದುಕೊಂಡ ಒಟ್ಟು ಎಸೆತ 15,391. ಆದರೆ ಈ ಬಾರಿ 13,079 ಎಸೆತಗಳಲ್ಲಿಯೇ 1000 ಸಿಕ್ಸ್ಗಳು ಮೂಡಿಬಂದಿವೆ.
4 / 6
ಅಂದರೆ ಐಪಿಎಲ್ 2023 ರ ಮತ್ತು ಐಪಿಎಲ್ 2024 ರ ಸಿಕ್ಸರ್ಗಳ ಅಂಕಿ ಅಂಶಗಳಲ್ಲಿ ಮ್ಯಾಚ್ಗಳ ಸಂಖ್ಯೆಯಲ್ಲೂ ಮತ್ತು ಬಾಲ್ಗಳ ಸಂಖ್ಯೆಗಳಲ್ಲೂ ಭಾರೀ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗುವ ಸಾಧ್ಯತೆಯಿದೆ.
5 / 6
ಏಕೆಂದರೆ 2023 ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸ್ಗಳು ಮೂಡಿಬಂದ ಸೀಸನ್ ಆಗಿತ್ತು. ಕಳೆದ ಬಾರಿಯ ಐಪಿಎಲ್ನಲ್ಲಿ 74 ಪಂದ್ಯಗಳಲ್ಲಿ ಸಿಡಿದ ಒಟ್ಟು ಸಿಕ್ಸ್ಗಳ ಸಂಖ್ಯೆ ಬರೋಬ್ಬರಿ 1124 ಸಿಕ್ಸರ್ಗಳು.
6 / 6
ಆದರೆ ಈ ಬಾರಿಯ ಐಪಿಎಲ್ನ 60 ಪಂದ್ಯಗಳ ಮುಕ್ತಾಯದ ವೇಳೆಗೆ ಒಟ್ಟು 1078 ಸಿಕ್ಸ್ಗಳು ಮೂಡಿಬಂದಿವೆ. ಹೀಗಾಗಿ ಫೈನಲ್ ಪಂದ್ಯದ ಮುಕ್ತಾಯದ ವೇಳೆ 1124 ಸಿಕ್ಸ್ಗಳ ಸಂಖ್ಯೆಯನ್ನು ದಾಟಿ, ಐಪಿಎಲ್ 2024 ಹೊಸ ಸಿಕ್ಸರ್ ಸೀಸನ್ ಆಗುವುದರಲ್ಲಿ ಅನುಮಾನವೇ ಇಲ್ಲ.
Published On - 1:29 pm, Sun, 12 May 24