David Warner: ಪವರ್ಪ್ಲೇನಲ್ಲಿ ಪವರ್ಫುಲ್ ದಾಖಲೆ ಬರೆದ ವಾರ್ನರ್
TV9 Web | Updated By: ಝಾಹಿರ್ ಯೂಸುಫ್
Updated on:
Mar 30, 2024 | 10:07 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪವರ್ಪ್ಲೇ ಓವರ್ಗಳಲ್ಲಿ ನೂರಕ್ಕಿಂತ ಅಧಿಕ ಸಿಕ್ಸ್ ಬಾರಿಸಿರುವುದು ಇಬ್ಬರೇ ಇಬ್ಬರು ಬ್ಯಾಟರ್ಗಳು. ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಮೂಲಕ ವಾರ್ನರ್ ಐಪಿಎಲ್ನಲ್ಲಿ ಈ ವಿಶೇಷ ಸಾಧನೆ ಮಾಡಿದ್ದಾರೆ.
1 / 5
ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ (IPL 2024) 9ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ (David Warner) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವಾರ್ನರ್ 34 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 49 ರನ್ ಬಾರಿಸಿ ಔಟಾಗಿದ್ದರು.
2 / 5
ಈ ವೇಳೆ ಸಿಡಿಸಿದ 3 ಸಿಕ್ಸ್ಗಳೊಂದಿಗೆ ಡೇವಿಡ್ ವಾರ್ನರ್ ಹೊಸ ಮೈಲುಗಲ್ಲು ದಾಟಿದ್ದಾರೆ. ಅದು ಕೂಡ ಪವರ್ಪ್ಲೇನಲ್ಲಿ ಸಿಕ್ಸ್ ಸಿಡಿಸುವ ಮೂಲಕ ಎಂಬುದು ವಿಶೇಷ. ಅಂದರೆ ಐಪಿಎಲ್ ಇತಿಹಾಸದಲ್ಲಿ ಪವರ್ಪ್ಲೇನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ವಾರ್ನರ್ 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
3 / 5
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್. ಐಪಿಎಲ್ನಲ್ಲಿ 142 ಪಂದ್ಯಗಳನ್ನಾಡಿರುವ ಗೇಲ್ ಪವರ್ಪ್ಲೇನಲ್ಲಿ ಒಟ್ಟು 143 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಐಪಿಎಲ್ ಪಂದ್ಯಗಳ ಮೊದಲ 6 ಓವರ್ಗಳಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
4 / 5
ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 3 ಸಿಕ್ಸ್ ಸಿಡಿಸುವುದರೊಂದಿಗೆ ಡೇವಿಡ್ ವಾರ್ನರ್ ಐಪಿಎಲ್ ಪವರ್ಪ್ಲೇನಲ್ಲಿ 100 ಕ್ಕಿಂತ ಅಧಿಕ ಸಿಕ್ಸ್ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. 178 ಐಪಿಎಲ್ ಇನಿಂಗ್ಸ್ ಆಡಿರುವ ವಾರ್ನರ್ ಪವರ್ಪ್ಲೇನಲ್ಲಿ ಇದುವರೆಗೆ 101 ಸಿಕ್ಸ್ಗಳನ್ನು ಬಾರಿಸಿದ್ದಾರೆ.
5 / 5
ಈ ಮೂಲಕ ಕ್ರಿಸ್ ಗೇಲ್ ನಂತರ ಐಪಿಎಲ್ ಇತಿಹಾಸದಲ್ಲಿ ಪವರ್ಪ್ಲೇನಲ್ಲಿ ನೂರು ಸಿಕ್ಸರ್ಗಳನ್ನು ಸಿಡಿಸಿದ 2ನೇ ಬ್ಯಾಟರ್ ಎಂಬ ವಿಶೇಷ ದಾಖಲೆಯನ್ನು ಡೇವಿಡ್ ವಾರ್ನರ್ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಐಪಿಎಲ್ನಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ದಾಖಲೆ ಕೂಡ ವಾರ್ನರ್ ಹೆಸರಿನಲ್ಲಿದೆ. ಡೇವಿಡ್ ವಾರ್ನರ್ ಇದುವರೆಗೆ 61 ಅರ್ಧಶತಕ ಬಾರಿಸಿದ್ದು, ಈ ದಾಖಲೆಯನ್ನು ಯಾರು ಮುರಿಯಲಿದ್ದಾರೆ ಕಾದು ನೋಡಬೇಕಿದೆ.