IPL 2024: ಲೆಕ್ಕ ಚುಕ್ತಾ ಮಾಡಲು RCB ರೆಡಿ: ಅವೇಶ್ ಖಾನ್ಗೆ ಗಢಗಢ
TV9 Web | Updated By: ಝಾಹಿರ್ ಯೂಸುಫ್
Updated on:
May 22, 2024 | 1:23 PM
IPL 2024 RR vs RCB: ಆರ್ಸಿಬಿ ಮತ್ತು ಆರ್ಆರ್ ಈವರೆಗೆ ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದಿರುವುದು ಕೇವಲ 13 ಬಾರಿ ಮಾತ್ರ. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15 ಬಾರಿ ಗೆಲುವು ದಾಖಲಿಸಿದೆ. ಇನ್ನು ಮೂರು ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿತ್ತು.
1 / 5
IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಎಲಿಮಿನೇಟರ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಈ ಪಂದ್ಯವು RCB vs RR ಎನ್ನುವುದಕ್ಕಿಂತ ಇದೀಗ ಕೊಹ್ಲಿ ಪಡೆದ vs ಅವೇಶ್ ಖಾನ್ ಆಗಿ ಮಾರ್ಪಟ್ಟಿದೆ. ಇದಕ್ಕೆ ಮುಖ್ಯ ಕಾರಣ ಹಳೆಯ ಚುಕ್ತಾ ಬಾಕಿ ಇರುವುದು.
2 / 5
ಹೌದು, ಐಪಿಎಲ್ 2023 ರಲ್ಲಿ ನಡೆದ ಆರ್ಸಿಬಿ vs ಎಲ್ಎಸ್ಜಿ ನಡುವಣ ಪಂದ್ಯವನ್ನು ಕೂಡ ಮರೆಯಲು ಸಾಧ್ಯವಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು 1 ರನ್ಗಳ ಜಯ ಸಾಧಿಸಿತ್ತು.
3 / 5
ಈ ಗೆಲುವಿನ ಬಳಿಕ ಎಲ್ಎಸ್ಜಿ ಆಟಗಾರ ಅವೇಶ್ ಖಾನ್ ಹೆಲ್ಮೆಟ್ ಎಸೆದ ಸಂಭ್ರಮಿಸಿದ್ದರು. ಈ ಅತಿರೇಕದ ಸಂಭ್ರಮ, ಆ ಬಳಿಕ ನಡೆದ ಗೌತಮ್ ಗಂಭೀರ್ ಅವರ ದುರ್ವತನೆ... ಇವೆಲ್ಲವೂ ಅಂದು ವಿರಾಟ್ ಕೊಹ್ಲಿಯನ್ನು ರೊಚ್ಚಿಗೆಬ್ಬಿಸಿತ್ತು. ಹೀಗಾಗಿಯೇ ಎಲ್ಎಸ್ಜಿ ವಿರುದ್ಧದ 2ನೇ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಲೆಕ್ಕ ಚುಕ್ತಾ ಮಾಡಿದ್ದರು.
4 / 5
ಆದರೆ 2ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಅವೇಶ್ ಖಾನ್ ಕಣಕ್ಕಿಳಿದಿರಲಿಲ್ಲ. ಇದೀಗ ಅವೇಶ್ ಖಾನ್ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದಾರೆ. ಹೀಗಾಗಿ ಈ ಬಾರಿ ಕೂಡ ಅವೇಶ್ ಖಾನ್ ಆರ್ಸಿಬಿ ದಂಡನೆಗೆ ಗುರಿಯಾಗಲಿರುವುದು ಖಚಿತ ಎಂದೇ ಹೇಳಬಹುದು.
5 / 5
ಅಹಮದಾಬಾದ್ನಲ್ಲಿ ನಡೆಯಲಿರುವ ಪ್ಲೇಆಫ್ ಹಂತದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಇಂದು ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ 2ನೇ ಕ್ವಾಲಿಫೈಯರ್ ಹಂತಕ್ಕೇರಿದರೆ, ಸೋಲುವ ತಂಡ ಐಪಿಎಲ್ನಿಂದ ಹೊರಬೀಳಲಿದೆ.
Published On - 1:22 pm, Wed, 22 May 24