IPL 2024: ಇವರು ಐಪಿಎಲ್ ಇತಿಹಾಸದ ಟಾಪ್-5 ಘಾತಕ ವೇಗಿಗಳು..!

| Updated By: ಝಾಹಿರ್ ಯೂಸುಫ್

Updated on: Mar 31, 2024 | 12:53 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಚೊಚ್ಚಲ ಪಂದ್ಯದಲ್ಲಿ ಅತೀ ವೇಗವಾಗಿ ಚೆಂಡೆಸೆದ ವಿಶೇಷ ದಾಖಲೆಯೊಂದು ಮಯಾಂಕ್ ಯಾದವ್ ಪಾಲಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಪಾದಾರ್ಪಣೆ ಮಾಡಿದ 21ರ ಹರೆಯ ಮಯಾಂಕ್ 155.8 ಕಿ.ಮೀ ವೇಗದಲ್ಲಿ ಚೆಂಡೆಸೆದು ಈ ದಾಖಲೆ ನಿರ್ಮಿಸಿದ್ದಾರೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಶುರುವಾಗಿ ಹದಿನಾರು ವರ್ಷಗಳೇ ಕಳೆದಿವೆ. ಇದೀಗ 17ನೇ ಸೀಸನ್​ನ ಆರಂಭದಲ್ಲಿದ್ದೇವೆ. ಇದರ ನಡುವೆ ಅನೇಕ ವೇಗಿಗಳು ಬಂದಿದ್ದಾರೆ, ಹೋಗಿದ್ದಾರೆ... ಇನ್ನು ಕೆಲವರು ಈಗಲೂ ಆಡುತ್ತಿದ್ದಾರೆ. ಇವರಲ್ಲಿ ಕೇವಲ ಐವರು ಬೌಲರ್​ಗಳು ಮಾತ್ರ ಗಂಟೆಗೆ 155 ಕಿ.ಮೀ ವೇಗದಲ್ಲಿ ಚೆಂಡೆಸೆದಿದ್ದಾರೆ. ಆ ಬೌಲರ್​ಗಳು ಯಾರೆಂದರೆ...

2 / 6
ಶಾನ್ ಟೈಟ್: ಐಪಿಎಲ್​ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಚೆಂಡೆಸೆದ ದಾಖಲೆ ಆಸ್ಟ್ರೇಲಿಯಾದ ಶಾನ್ ಟೈಟ್ ಹೆಸರಿನಲ್ಲಿದೆ. 2011 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಟೈಟ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 157.71 Kmph ವೇಗದಲ್ಲಿ ಚೆಂಡೆಸೆದು ದಾಖಲೆ ನಿರ್ಮಿಸಿದ್ದಾರೆ.

3 / 6
ಲಾಕಿ ಫರ್ಗುಸನ್: ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ನ್ಯೂಝಿಲೆಂಡ್ ವೇಗಿ ಲಾಕಿ ಫರ್ಗುಸನ್. ಐಪಿಎಲ್ 2022 ರ ಫೈನಲ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದಿದ್ದ ಫರ್ಗುಸನ್ ರಾಜಸ್ಥಾನ್ ರಾಯಲ್ಸ್ ವಿರುದ್ಧ 157.3 kmph ವೇಗದಲ್ಲಿ ಚೆಂಡೆಸೆದಿದ್ದರು.

4 / 6
ಉಮ್ರಾನ್ ಮಲಿಕ್: ಐಪಿಎಲ್​ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಚೆಂಡೆಸೆದ ಭಾರತೀಯ ಬೌಲರ್ ಎಂಬ ದಾಖಲೆ ಉಮ್ರಾನ್ ಮಲಿಕ್ ಹೆಸರಿನಲ್ಲಿದೆ. ಐಪಿಎಲ್ 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವೇಗಿ ಉಮ್ರಾನ್ ಮಲಿಕ್ 157 kmph ವೇಗದಲ್ಲಿ ಬೌಲಿಂಗ್ ಮಾಡಿದ್ದರು.

5 / 6
ಅನ್ರಿಕ್ ನೋಕಿಯಾ: ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವುದು ಸೌತ್ ಆಫ್ರಿಕಾ ವೇಗಿ ಅನ್ರಿಕ್ ನೋಕಿಯಾ. ಐಪಿಎಲ್ 2020 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದ ನೋಕಿಯಾ 156.2 kmph ವೇಗದಲ್ಲಿ ಚೆಂಡೆಸೆದಿದ್ದರು.

6 / 6
ಮಯಾಂಕ್ ಯಾದವ್: ಐಪಿಎಲ್ ಇತಿಹಾಸದಲ್ಲಿ ಅತೀ ವೇಗವಾಗಿ ಚೆಂಡೆಸೆದ 2ನೇ ಭಾರತೀಯ ವೇಗಿ ಮಯಾಂಕ್ ಯಾದವ್. ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಯಾದವ್ ಬರೋಬ್ಬರಿ 155.8 kmph ವೇಗದಲ್ಲಿ ಚೆಂಡೆಸೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.