IPL 2024: ಚಾನ್ಸ್​ ಕೇಳಿದ್ರೂ ಕೊಡಲಿಲ್ಲ: ಯುವರಾಜ್ ಸಿಂಗ್ ಬೇಸರ..!

Edited By:

Updated on: Jan 16, 2024 | 1:31 PM

Yuvraj Singh: ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​, ಪುಣೆ ವಾರಿಯರ್ಸ್​, ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಸನ್​ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್​ ಪರ ಒಟ್ಟು 132 ಪಂದ್ಯಗಳನ್ನಾಡಿಯುವ ಯುವರಾಜ್ ಸಿಂಗ್ 2750 ರನ್ಸ್​ ಹಾಗೂ 36 ವಿಕೆಟ್​ಗಳನ್ನು ಪಡೆದಿದ್ದಾರೆ.

1 / 6
ಟಿ20 ಕ್ರಿಕೆಟ್​ನ ಸ್ಪೆಷಲಿಸ್ಟ್​, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ (Yuvraj Singh) ಐಪಿಎಲ್​ಗೆ ಮರಳಲಿದ್ದಾರಾ? ಈ ಪ್ರಶ್ನೆಗೆ ಉತ್ತರ ಖಂಡಿತವಾಗಿಯೂ ಇಲ್ಲ. ಏಕೆಂದರೆ ಯುವಿ ಈಗಾಗಲೇ ಐಪಿಎಲ್​ಗೆ ನಿವೃತ್ತಿ ಘೋಷಿಸಿ ಎನ್​ಒಸಿ ಪಡೆದಿದ್ದಾರೆ. ಹೀಗಾಗಿ ಐಪಿಎಲ್​ನಲ್ಲಿ ಆಟಗಾರನಾಗಿ ಕಾಣಿಸಿಕೊಳ್ಳಲು ಯುವರಾಜ್ ಸಿಂಗ್​ಗೆ ಅವಕಾಶವಿಲ್ಲ.

ಟಿ20 ಕ್ರಿಕೆಟ್​ನ ಸ್ಪೆಷಲಿಸ್ಟ್​, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ (Yuvraj Singh) ಐಪಿಎಲ್​ಗೆ ಮರಳಲಿದ್ದಾರಾ? ಈ ಪ್ರಶ್ನೆಗೆ ಉತ್ತರ ಖಂಡಿತವಾಗಿಯೂ ಇಲ್ಲ. ಏಕೆಂದರೆ ಯುವಿ ಈಗಾಗಲೇ ಐಪಿಎಲ್​ಗೆ ನಿವೃತ್ತಿ ಘೋಷಿಸಿ ಎನ್​ಒಸಿ ಪಡೆದಿದ್ದಾರೆ. ಹೀಗಾಗಿ ಐಪಿಎಲ್​ನಲ್ಲಿ ಆಟಗಾರನಾಗಿ ಕಾಣಿಸಿಕೊಳ್ಳಲು ಯುವರಾಜ್ ಸಿಂಗ್​ಗೆ ಅವಕಾಶವಿಲ್ಲ.

2 / 6

ಇದಾಗ್ಯೂ ಐಪಿಎಲ್​ನಲ್ಲಿ ಹೊಸ ಜವಾಬ್ದಾರಿಯೊಂದಿಗೆ ಕಾಣಿಸಿಕೊಳ್ಳಲು ಯುವರಾಜ್ ಸಿಂಗ್ ಬಯಸಿದ್ದಾರೆ. ಅಂದರೆ ಯಾವುದಾದರೂ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಲು ಇಚ್ಛಿಸಿದ್ದಾರೆ. ಇದಕ್ಕಾಗಿ ತೆರೆಮರೆಯಲ್ಲೇ ಪ್ರಯತ್ನವನ್ನೂ ಕೂಡ ನಡೆಸಿದ್ದಾರೆ. ಆದರೆ ಪ್ರತಿಫಲ ಮಾತ್ರ ಶೂನ್ಯ.

3 / 6

ಇದನ್ನು ಖುದ್ದು ಯುವರಾಜ್ ಸಿಂಗ್ ಅವರೇ ಹೇಳಿಕೊಂಡಿದ್ದಾರೆ. ಗುಜರಾತ್ ಟೈಟಾನ್ಸ್​ ತಂಡದಲ್ಲಿನ ಕೆಲಸಕ್ಕಾಗಿ ನಾನು ಕೋಚ್ ಆಶಿಶ್ ನೆಹ್ರಾ ಅವರನ್ನು ಸಂಪರ್ಕಿಸಿದ್ದೆ. ಆದರೆ ಅವರು ಅದನ್ನು ನಿರಾಕರಿಸಿದರು. ಹೀಗಾಗಿ ಐಪಿಎಲ್​ನಲ್ಲಿ ಹೊಸ ಇನಿಂಗ್ಸ್​ ಆರಂಭಿಸಲು ಸಾಧ್ಯವಾಗಿಲ್ಲ ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.

4 / 6

ಇದೀಗ ನನ್ನ ಆದ್ಯತೆ ನನ್ನ ಮಕ್ಕಳು. ಅವರು ಶಾಲೆಗೆ ಹೋಗಲು ಶುರು ಮಾಡಿದಾಗ ನನಗೆ ಹೆಚ್ಚಿನ ಸಮಯ ದೊರೆಯಲಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ನಾನು ಮತ್ತೆ ಕ್ರಿಕೆಟ್​ಗೆ ಹಿಂತಿರುಗಲಿದ್ದೇನೆ. ವಿಶೇಷವಾಗಿ ನನ್ನ ರಾಜ್ಯದ ಹುಡುಗರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಅವರಿಗೆ ಮಾರ್ಗದರ್ಶನ ನೀಡಿ ಅತ್ಯುತ್ತಮ ಕ್ರಿಕೆಟಿಗರನ್ನಾಗಿಸುವುದು ನನ್ನ ಮುಂದಿರುವ ಗುರಿ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

5 / 6

ಐಪಿಎಲ್​ ತಂಡಗಳ ಪರ ಕೂಡ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮೆಂಟರ್ ಸ್ಥಾನದಲ್ಲೂ ನಾನು ಕಾಣಿಸಿಕೊಳ್ಳಬಹುದು ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ. ಹೀಗಾಗಿ ಸಿಕ್ಸರ್ ಕಿಂಗ್ ಹೊಸ ಜವಾಬ್ದಾರಿಯೊಂದಿಗೆ ಮತ್ತೆ ಐಪಿಎಲ್​ನಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

6 / 6

ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​, ಪುಣೆ ವಾರಿಯರ್ಸ್​, ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಸನ್​ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್​ ಪರ ಒಟ್ಟು 132 ಪಂದ್ಯಗಳನ್ನಾಡಿಯುವ ಯುವರಾಜ್ ಸಿಂಗ್ 2750 ರನ್ಸ್​ ಹಾಗೂ 36 ವಿಕೆಟ್​ಗಳನ್ನು ಪಡೆದಿದ್ದಾರೆ.

Published On - 1:30 pm, Tue, 16 January 24

Loading...
Unable to load recommendations.
Follow Us