IPL 2024: ಹೀಗಾದ್ರೆ RCB ತಂಡ ಪ್ಲೇಆಫ್ ಪ್ರವೇಶಿಸುವುದು ಖಚಿತ..!
TV9 Web | Updated By: ಝಾಹಿರ್ ಯೂಸುಫ್
Updated on:
May 05, 2024 | 9:52 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈವರೆಗೆ 11 ಪಂದ್ಯಗಳನ್ನಾಡಿದೆ. ಇದರಲ್ಲಿ 4 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 7 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಇದೀಗ ಒಟ್ಟು 8 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 7ನೇ ಸ್ಥಾನ ಅಲಂಕರಿಸಿರುವ ಆರ್ಸಿಬಿ ಪ್ಲೇಆಫ್ ಅವಕಾಶವನ್ನು ಎದುರು ನೋಡುತ್ತಿದೆ.
1 / 8
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ದ್ವಿತೀಯಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಈವರೆಗೆ ಆಡಿರುವ 11 ಪಂದ್ಯಗಳಲ್ಲಿ 4 ಗೆಲುವುಗಳೊಂದಿಗೆ ಇದೀಗ ಆರ್ಸಿಬಿ ಅಂಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ. ಈ ಮೂಲಕ ಪ್ಲೇಆಫ್ ಪ್ರವೇಶಿಸುವ ಆಸೆಯನ್ನು ಜೀವಂತವಿರಿಸಿಕೊಂಡಿದೆ.
2 / 8
ಅಂದರೆ ಆರ್ಸಿಬಿ ತಂಡಕ್ಕೆ ಪ್ಲೇಆಫ್ ಪ್ರವೇಶಿಸಲು ಇನ್ನೂ ಅವಕಾಶವಿದೆ. ಆದರೆ ಇದು ನಿರ್ಧಾರವಾಗುವುದು ಉಳಿದ ತಂಡಗಳ ಫಲಿತಾಂಶಗಳ ಆಧಾರದ ಮೇಲೆ. ಇಲ್ಲಿ ಆರ್ಸಿಬಿ ತಂಡವು ತನ್ನ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದರೆ ಒಟ್ಟು 14 ಅಂಕಗಳನ್ನು ಕಲೆಹಾಕಲಿದೆ.
3 / 8
ಅತ್ತ ಅಂಕ ಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸುವ ತಂಡವು 14 ಪಾಯಿಂಟ್ಸ್ ಪಡೆದುಕೊಂಡರೆ ನೆಟ್ ರನ್ ರೇಟ್ ನೆರವಿನೊಂದಿಗೆ ಆರ್ಸಿಬಿ ತಂಡವು ಪ್ಲೇಆಫ್ ಹಂತಕ್ಕೇರಬಹುದು. ಆದರೆ ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ 3ನೇ ಮತ್ತು 4ನೇ ಸ್ಥಾನಗಳಲ್ಲಿರುವ ಎಸ್ಆರ್ಹೆಚ್ ಮತ್ತು ಎಲ್ಎಸ್ಜಿ ತಂಡಗಳು ಈಗಾಗಲೇ 12 ಅಂಕಗಳನ್ನು ಗಳಿಸಿದೆ.
4 / 8
ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ಅಥವಾ ಸನ್ರೈಸರ್ಸ್ ಹೈದರಾಬಾದ್ ತಂಡಗಳ ಪಾಯಿಂಟ್ಸ್ 14 ದಾಟಬಾರದು. ಈ ಎರಡು ತಂಡಗಳಲ್ಲಿ ಒಂದು ಟೀಮ್ 14 ಅಂಕಗಳೊಂದಿಗೆ 4ನೇ ಸ್ಥಾನ ಅಲಂಕರಿಸಿದರೆ ಆರ್ಸಿಬಿ ತಂಡಕ್ಕೆ ನೆಟ್ ರನ್ ರೇಟ್ ನೆರವಿನೊಂದಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಸಿಗಲಿದೆ.
5 / 8
ಇದರ ನಡುವೆ 10 ಅಂಕಗಳನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಂದಿನ ಪಂದ್ಯಗಳಲ್ಲಿ ಎರಡಕ್ಕಿಂತ ಹೆಚ್ಚು ಗೆಲುವುಗಳನ್ನು ಪಡೆಯಬಾರದು. ಹಾಗೆಯೇ ಪಂಜಾಬ್ ಕಿಂಗ್ಸ್ ಮುಂದಿನ 4 ಪಂದ್ಯಗಳಲ್ಲಿ ಎರಡಲ್ಲಿ ಸೋಲನುಭವಿಸುವುದನ್ನು ಎದುರು ನೋಡಬೇಕು.
6 / 8
ಅಂದರೆ ಇಲ್ಲಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸುವ ತಂಡವು ಯಾವುದೇ ಕಾರಣಕ್ಕೂ 16 ಅಂಕಗಳನ್ನು ಗಳಿಸಬಾರದು. ಒಂದು ವೇಳೆ ಅಂಕ ಪಟ್ಟಿಯಲ್ಲಿರುವ ಮೊದಲ 4 ತಂಡಗಳು 14ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡರೆ ಆರ್ಸಿಬಿ ತಂಡ ಪ್ಲೇಆಫ್ನಿಂದ ಹೊರಬೀಳಲಿದೆ.
7 / 8
ಹೀಗಾಗಿ ಆರ್ಸಿಬಿ ತಂಡವು ಪ್ಲೇಆಫ್ ಪ್ರವೇಶಿಸುವುದು ಉಳಿದ ತಂಡಗಳ ಫಲಿತಾಂಶದ ಮೇಲೆ ನಿರ್ಧರಿತವಾಗಿರಲಿದೆ. ಅದರಂತೆ ಸನ್ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಂದಿನ 4 ಪಂದ್ಯಗಳಲ್ಲಿ ಕೇವಲ 1 ಜಯ ಮಾತ್ರ ಸಾಧಿಸಬೇಕು. ಇದರಿಂದ ಉಭಯ ತಂಡಗಳು ಒಟ್ಟು ಅಂಕಗಳು ತಲಾ 14 ಆಗಿರಲಿದೆ.
8 / 8
ಹಾಗೆಯೇ ಸಿಎಸ್ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ 4 ಮ್ಯಾಚ್ಗಳಲ್ಲಿ ಎರಡಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಗೆಲ್ಲಬಾರದು. ಹಾಗೆಯೇ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮುಂದಿನ ಪಂದ್ಯಗಳಲ್ಲಿ 2 ಸೋಲನುಭವಿಸಬೇಕು. ಹೀಗಾದ್ರೆ ಆರ್ಸಿಬಿ ತಂಡವು 14 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಲಿದೆ.