CSK ಯನ್ನು ಸೋಲಿಸಿದ ಮಾತ್ರಕ್ಕೆ RCBಗೆ ಟ್ರೋಫಿ ಸಿಗಲ್ಲ: ರಾಯುಡು ವ್ಯಂಗ್ಯ

| Updated By: ಝಾಹಿರ್ ಯೂಸುಫ್

Updated on: May 23, 2024 | 8:51 AM

IPL 2024 RCB vs RR: ಐಪಿಎಲ್ ಸೀಸನ್ 17ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್​ಸಿಬಿ ಸೋಲನುಭವಿಸಿದೆ. ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ 172 ರನ್​ ಕಲೆಹಾಕಿತು. ಈ ಗುರಿಯನ್ನು 19 ಓವರ್​ಗಳಲ್ಲಿ ಚೇಸ್ ಮಾಡಿ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

1 / 5
IPL 2024: ಐಪಿಎಲ್​ನ 17ನೇ ಆವೃತ್ತಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮುಗ್ಗರಿಸಿದೆ. ಕಳೆದ 16 ಸೀಸನ್​ಗಳಿಂದ ಪ್ರಶಸ್ತಿ ಕನಸು ಹೊಂದಿದ್ದ ಆರ್​ಸಿಬಿ ಈ ಬಾರಿ ಕೂಡ ನಿರ್ಣಾಯಕ ಪಂದ್ಯದಲ್ಲಿ ​ಸೋಲನುಭವಿಸಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಸೋಲಿನೊಂದಿಗೆ ಆರ್​ಸಿಬಿ ತಂಡದ ಐಪಿಎಲ್ ಅಭಿಯಾನವನ್ನು ಅಂತ್ಯವಾಗಿದೆ.

2 / 5
ಈ ಸೋಲಿನ ಬೆನ್ನಲ್ಲೇ ಸಿಎಸ್​ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ನೀಡಿದ ಹೇಳಿಕೆಗಳು ವೈರಲ್ ಆಗುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದ ಮಾತ್ರಕ್ಕೆ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ ಎಂದು ರಾಯುಡು ವ್ಯಂಗ್ಯವಾಡಿದ್ದಾರೆ.

3 / 5
ಯಾರೂ ಸಹ ಐಪಿಎಲ್ ಟ್ರೋಫಿಯನ್ನು ಕೇವಲ ಸಂಭ್ರಮಾಚರಣೆ ಮತ್ತು ಆಕ್ರಮಣಕಾರಿ ವರ್ತನೆಯಿಂದ ಗೆದ್ದಿಲ್ಲ. ಅಥವಾ ಸಿಎಸ್​ಕೆ ತಂಡವನ್ನು ಸೋಲಿಸಿದ್ದರಿಂದ ಯಾರೂ ಸಹ ಐಪಿಎಲ್​ ಟ್ರೋಫಿ ಗೆದ್ದಿಲ್ಲ. ನೀವು ಟ್ರೋಫಿ ಗೆಲ್ಲಬೇಕಿದ್ದರೆ ಪ್ಲೇಆಫ್​ನಲ್ಲಿ ಚೆನ್ನಾಗಿ ಆಡಬೇಕಾಗುತ್ತದೆ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

4 / 5
ಇಲ್ಲಿ ರಾಯುಡು, ಸಂಭ್ರಮಾಚರಣೆ ಮತ್ತು ಆಕ್ರಮಣಕಾರಿ ವರ್ತನೆಯ ವಿಷಯಗಳನ್ನು ಪ್ರಸ್ತಾಪಿಸಿದ್ದು, ಸಿಎಸ್​ಕೆ ವಿರುದ್ಧದ ಆರ್​ಸಿಬಿ ತಂಡ ಗೆಲುವಿನ ಸಂಭ್ರಮವನ್ನು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಬಗ್ಗು ಬಡಿದು ಆರ್​ಸಿಬಿ ಭರ್ಜರಿಯಾಗಿ ಸಂಭ್ರಮಿಸಿದ್ದರು. ಹಾಗೆಯೇ ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಸಂಭ್ರಮವನ್ನು ತಮ್ಮ ಹೇಳಿಕೆಯಲ್ಲಿ ಪರೋಕ್ಷವಾಗಿ ರಾಯುಡು ಪ್ರಸ್ತಾಪಿಸಿದ್ದಾರೆ.

5 / 5
ಈ ಮೂಲಕ ಕೇವಲ ಸಂಭ್ರಮಾಚರಣೆ ಅಥವಾ ಆಕ್ರಮಣಕಾರಿಯಾಗಿ ವರ್ತನೆಯಿಂದ ಆರ್​ಸಿಬಿ ಮತ್ತು ವಿರಾಟ್ ಕೊಹ್ಲಿ ಟ್ರೋಫಿ ಗೆಲ್ಲಲ್ಲ ಎಂದು ಅಂಬಾಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಮುನ್ನ ಆರ್​ಸಿಬಿ ತಂಡ ಈ ಸಲ ಟ್ರೋಫಿ ಎತ್ತಿ ಹಿಡಿಯಲ್ಲ ಎಂದು ರಾಯುಡು ಭವಿಷ್ಯ ನುಡಿದಿದ್ದರು. ಅದರಂತೆ ಇದೀಗ ಸೋಲಿನೊಂದಿಗೆ ಆರ್​ಸಿಬಿ ತಂಡದ ಐಪಿಎಲ್ ಅಭಿಯಾನ ಅಂತ್ಯವಾಗಿದೆ.