IPL 2024: ಈ ಸಲ ಕಪ್ SRH ತಂಡಕ್ಕೆ, ಹೀಗೊಂದು ಲೆಕ್ಕಾಚಾರ..!

|

Updated on: May 25, 2024 | 1:32 PM

IPL 2024 KKR vs SRH: ಐಪಿಎಲ್​ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಚೆನ್ನೈನ ಎಂಎ ಚಿದಂಬರಂ (ಚೆಪಾಕ್) ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕೆಕೆಆರ್ ಹಾಗೂ ಎಸ್​ಆರ್​ಹೆಚ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಿದರೆ, ಎಸ್​ಆರ್​ಹೆಚ್ ತಂಡ ಪ್ಯಾಟ್ ಕಮಿನ್ಸ್ ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ.

1 / 7
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್​ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ (ಮೇ 26) ನಡೆಯಲಿರುವ ಈ ಪಂದ್ಯದೊಂದಿಗೆ ಐಪಿಎಲ್ ಸೀಸನ್-17 ಕ್ಕೆ ತೆರೆ ಬೀಳಲಿದೆ.

2 / 7
ಈ ನಿರ್ಣಾಯಕ ಪಂದ್ಯದಲ್ಲಿ ಕೆಕೆಆರ್ ಹಾಗೂ ಎಸ್​ಆರ್​ಹೆಚ್ ತಂಡಗಳು ಮುಖಾಮುಖಿಯಾಗುತ್ತಿರುವುದರಿಂದ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಏಕೆಂದರೆ ಈ ಬಾರಿಯ ಪಾಯಿಂಟ್ಸ್​ ಟೇಬಲ್​ನಲ್ಲಿ ಕೆಕೆಆರ್ ಅಗ್ರಸ್ಥಾನ ಅಲಂಕರಿಸಿದ್ದರೆ, ಎಸ್​ಆರ್​ಹೆಚ್ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

3 / 7
ಈ ರಣರೋಚಕ ಪಂದ್ಯಕ್ಕೂ ಮುನ್ನ ಈ ಸಲ ಕಪ್ ಸನ್​ರೈಸರ್ಸ್ ಹೈದರಾಬಾದ್ ಪಾಲಾಗಲಿದೆ ಎಂಬ ಲೆಕ್ಕಾಚಾರ ಕೂಡ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಹೈದರಾಬಾದ್ ತಂಡವನ್ನು ಆಸ್ಟ್ರೇಲಿಯಾ ಆಟಗಾರ ಮುನ್ನಡೆಸುತ್ತಿರುವುದು. ಅಂದರೆ ಐಪಿಎಲ್ ಇತಿಹಾಸದಲ್ಲಿ ಹೈದರಾಬಾದ್ ಫ್ರಾಂಚೈಸಿಯನ್ನು ಆಸ್ಟ್ರೇಲಿಯಾ ಆಟಗಾರ ಮುನ್ನಡೆಸಿದಾಗ ಟ್ರೋಫಿ ಗೆದ್ದ ಇತಿಹಾಸವಿದೆ.

4 / 7
2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ (ಈಗಿನ ಸನ್​ರೈಸರ್ಸ್ ಹೈದರಾಬಾದ್) ತಂಡವನ್ನು ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಆ್ಯಡಂ ಗಿಲ್​ಕ್ರಿಸ್ಟ್​ ಮುನ್ನಡೆಸಿದ್ದರು. ಆ ಸೀಸನ್​ನಲ್ಲಿ ಆರ್​ಸಿಬಿ ವಿರುದ್ಧ 6 ರನ್​ಗಳ ರೋಚಕ ಜಯ ಸಾಧಿಸಿ ಡೆಕ್ಕನ್ ಚಾರ್ಜರ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

5 / 7
ಇದಾದ ಬಳಿಕ ಹೈದರಾಬಾದ್ ಫ್ರಾಂಚೈಸಿ ಫೈನಲ್ ಪ್ರವೇಶಿಸಿದ್ದು 2016 ರಲ್ಲಿ. ಅಂದು ಎಸ್​ಆರ್​ಹೆಚ್ ತಂಡವನ್ನು ಮುನ್ನಡೆಸಿದವರು ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್. ಫೈನಲ್ ಪಂದ್ಯದಲ್ಲಿ ಆರ್​ಸಿಬಿ ತಂಡವನ್ನು 8 ರನ್​ಗಳಿಂದ ಸೋಲಿಸಿ ಸನ್​ರೈಸರ್ಸ್ ಹೈದರಾಬಾದ್ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು.

6 / 7
ಇದೀಗ ಮತ್ತೊಮ್ಮೆ ಆಸ್ಟ್ರೇಲಿಯಾ ನಾಯಕನ ಮುಂದಾಳತ್ವದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಫೈನಲ್​ಗೆ ಪ್ರವೇಶಿಸಿದೆ. ಈ ಬಾರಿ ಎಸ್​ಆರ್​ಹೆಚ್ ತಂಡದ ನಾಯಕನಾಗಿ ಸೈಲೆಂಸರ್ ಖ್ಯಾತಿಯ ಪ್ಯಾಟ್ ಕಮಿನ್ಸ್ ಇದ್ದಾರೆ. ಹೀಗಾಗಿ ಆಸ್ಟ್ರೇಲಿಯನ್ ನಾಯಕ ಸಾರಥ್ಯದಲ್ಲಿ ಈ ಬಾರಿ ಸನ್​ರೈಸರ್ಸ್ ಹೈದರಾಬಾದ್ ಕಪ್ ಗೆಲ್ಲಲಿದೆ ಎಂಬ ವಾದಗಳು ಶುರುವಾಗಿದೆ.

7 / 7
ಈ ವಾದಗಳನ್ನು ತಲೆಕೆಳಗಾಗಿಸಿದ ಶ್ರೇಯಸ್ ಅಯ್ಯರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 3ನೇ ಬಾರಿ ಚಾಂಪಿಯನ್ ಪಟ್ಟ ತಂದುಕೊಡಲಿದ್ದಾರಾ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಎರಡು ಬಲಿಷ್ಠ ತಂಡಗಳು ಫೈನಲ್​ಗೆ ಎಂಟ್ರಿ ಕೊಟ್ಟಿರುವುದರಿಂದ ಅಂತಿಮ ಹಣಾಹಣಿಯಲ್ಲಿ ಭರ್ಜರಿ ಪೈಪೋಟಿಯನ್ನಂತು ನಿರೀಕ್ಷಿಸಬಹುದು.

Published On - 1:31 pm, Sat, 25 May 24