IPL 2024: ಐಪಿಎಲ್​ನಲ್ಲಿ ಅಪರೂಪದ ದಾಖಲೆ ಬರೆದ ರವೀಂದ್ರ ಜಡೇಜಾ

| Updated By: ಝಾಹಿರ್ ಯೂಸುಫ್

Updated on: Apr 09, 2024 | 3:55 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಇತಿಹಾಸದಲ್ಲಿ ಯಾರೂ ಬರೆಯದ ವಿಶೇಷ ದಾಖಲೆಯೊಂದನ್ನು ರವೀಂದ್ರ ಜಡೇಜಾ ನಿರ್ಮಿಸಿದ್ದಾರೆ. ಅದು ಕೂಡ ತಮ್ಮ ಆಲ್​ರೌಂಡರ್​ ಆಟದೊಂದಿಗೆ ಎಂಬುದು ವಿಶೇಷ. ಐಪಿಎಲ್​ನಲ್ಲಿ ಸಿಎಸ್​ಕೆ ಆಲ್​ರೌಂಡರ್ ಬರೆದ ಅಪರೂಪದ ದಾಖಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ...

1 / 5
ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 22ನೇ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ರವೀಂದ್ರ ಜಡೇಜಾ (Ravindra Jadeja) ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಐಪಿಎಲ್​ನಲ್ಲಿ ಇದುವರೆಗೆ ಯಾರೂ ಸಹ ಬರೆಯದ ದಾಖಲೆ ನಿರ್ಮಿಸುವ ಮೂಲಕ ಎಂಬುದು ವಿಶೇಷ. ಕೆಕೆಆರ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ತಂಡವು ಮೊದಲು ಬೌಲಿಂಗ್ ಮಾಡಿತು.

2 / 5
ಅದರಂತೆ ಅತ್ಯುತ್ತಮ ಸ್ಪಿನ್ ದಾಳಿ ಸಂಘಟಿಸಿದ ರವೀಂದ್ರ ಜಡೇಜಾ 4 ಓವರ್​ಗಳಲ್ಲಿ 18 ರನ್ ನೀಡಿ 3 ವಿಕೆಟ್ ಕಬಳಿಸಿದರು. ಹಾಗೆಯೇ ಈ ಪಂದ್ಯದಲ್ಲಿ ಜಡೇಜಾ 2 ಅತ್ಯುತ್ತಮ ಕ್ಯಾಚ್​ಗಳನ್ನು ಸಹ ಹಿಡಿದಿದ್ದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 100 ಕ್ಯಾಚ್​ಗಳನ್ನು ಹಿಡಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾದರು.

3 / 5
ಅಲ್ಲದೆ ಐಪಿಎಲ್​ನಲ್ಲಿ 1000+ ರನ್, 100 ಕ್ಯಾಚ್ ಹಾಗೂ 100+ ವಿಕೆಟ್ ಪಡೆದ ಮೊದಲ ಆಟಗಾರ ಎಂಬ ದಾಖಲೆಯನ್ನು ರವೀಂದ್ರ ಜಡೇಜಾ ತಮ್ಮದಾಗಿಸಿಕೊಂಡರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಯಾರು ಮಾಡದ ವಿಶೇಷ ಸಾಧನೆಯನ್ನು ಮಾಡಿದರು.

4 / 5
ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್, ಗುಜರಾತ್ ಲಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿರುವ ಜಡೇಜಾ 156 ವಿಕೆಟ್ಸ್​, 2776 ರನ್ಸ್​ ಹಾಗೂ 100 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಈ ಮೂಲಕ ಐಪಿಎಲ್​ನ ಅತ್ಯಂತ ಬೆಸ್ಟ್ ಆಲ್​ರೌಂಡರ್ ಎನಿಸಿಕೊಂಡಿದ್ದಾರೆ.

5 / 5
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆ ತಂಡವು 17.4 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 141 ರನ್​ಗಳಿಸಿ, 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.