IPL 2024: RCB ತಂಡದ 18ರ ಲೆಕ್ಕಾಚಾರ: ಈ ಸಲ ಗೆಲುವು ನಮ್ದೆ

Updated on: May 15, 2024 | 2:49 PM

IPL 2024 RCB vs CSK: ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ (ಐಪಿಎಲ್) RCB ಮತ್ತು CSK ತಂಡಗಳು ಈವರೆಗೆ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಆರ್​ಸಿಬಿ ತಂಡ 10 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಸಿಎಸ್​ಕೆ 21 ಮ್ಯಾಚ್​ಗಳನ್ನು ಗೆದ್ದುಕೊಂಡಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು. ವಿಶೇಷ ಎಂದರೆ ಈ 32 ಪಂದ್ಯಗಳಲ್ಲಿ ಮೇ 18 ರಂದು 2 ಮ್ಯಾಚ್​ಗಳು ನಡೆದಿದೆ. ಈ ಎರಡೂ ಪಂದ್ಯಗಳಲ್ಲೂ ಆರ್​ಸಿಬಿ ಜಯಭೇರಿ ಬಾರಿಸಿದೆ.

1 / 7
ಐಪಿಎಲ್​ನ (IPL 2024) 68ನೇ ಪಂದ್ಯದಲ್ಲಿ ಆರ್​ಸಿಬಿ (RCB) ಮತ್ತು ಸಿಎಸ್​ಕೆ (CSK) ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೇ 18 ರಂದು ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಅಂದರೆ ಪ್ಲೇಆಫ್ ರೇಸ್​ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕು. ಹೀಗಾಗಿಯೇ ಉಭಯ ತಂಡಗಳ ಅಭಿಮಾನಿಗಳು ನಾನಾ ಲೆಕ್ಕಾಚಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

2 / 7
ಈ ಲೆಕ್ಕಾಚಾರಗಳ ನಡುವೆ ಈ ಸಲ ಗೆಲುವು ಆರ್​ಸಿಬಿ ತಂಡದ್ದೇ ಎಂಬ ವಾದವನ್ನು ಮುಂದಿಡಲಾಗುತ್ತಿದೆ. ಇದಕ್ಕೆ ಕಾರಣ ಪಂದ್ಯ ನಡೆಯುತ್ತಿರುವುದು ಮೇ 18 ರಂದು. ಅಂದರೆ ಮೇ 18 ರಂದು ಆರ್​ಸಿಬಿ ಈವರೆಗೆ 4 ಪಂದ್ಯಗಳನ್ನಾಡಿದೆ.

3 / 7
2013 ರ ಮೇ 18 ರಂದು ಸಿಎಸ್​ಕೆ ವಿರುದ್ಧ ಆರ್​ಸಿಬಿ ಜಯ ಸಾಧಿಸಿತ್ತು. ಇದಾದ ಬಳಿಕ 2014 ರಲ್ಲೂ ಮೇ 18 ರಂದು ಸಿಎಸ್​ಕೆ ತಂಡಕ್ಕೆ ಸೋಲುಣಿಸುವಲ್ಲಿ ಆರ್​ಸಿಬಿ ಯಶಸ್ವಿಯಾಗಿತ್ತು. ಇನ್ನು 2016 ರ ಮೇ 18 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆರ್​ಸಿಬಿ ಜಯ ಸಾಧಿಸಿತ್ತು. 2023 ರ ಮೇ 18 ರಂದು ಎಸ್​ಆರ್​ಹೆಚ್​ ವಿರುದ್ಧ ಆರ್​ಸಿಬಿ ಗೆದ್ದು ಬೀಗಿತ್ತು.

4 / 7
ಇದೀಗ ಮೇ 18ರಂದೇ ಆರ್​ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಈ ಹಿಂದೆ ಇದೇ ದಿನಾಂಕದಂದು ಸಿಎಸ್​ಕೆಗೆ ಆರ್​ಸಿಬಿ ಎರಡು ಬಾರಿ ಸೋಲುಣಿಸಿತ್ತು. ಹೀಗಾಗಿ ಈ ಬಾರಿ ಕೂಡ ಗೆಲುವು ಆರ್​ಸಿಬಿ ತಂಡದ್ದೇ ಎಂಬ ವಾದವನ್ನು ಅಭಿಮಾನಿಗಳು ಮುಂದಿಡುತ್ತಿದ್ದಾರೆ.

5 / 7
ಇನ್ನು ಮೇ 18 ರಂದು ವಿರಾಟ್ ಕೊಹ್ಲಿ ಕೂಡ ಭರ್ಜರಿ ಪ್ರದರ್ಶನ ನೀಡಿದ ಇತಿಹಾಸವಿದೆ. ಐಪಿಎಲ್​ನಲ್ಲಿ ಕಿಂಗ್ ಕೊಹ್ಲಿ ಮೇ 18 ರಂದು 4 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಸಿಎಸ್​ಕೆ ವಿರುದ್ಧ 56* (29), 27 (29) ರನ್ ಕಲೆಹಾಕಿದರೆ, ಪಂಜಾಬ್ ಕಿಂಗ್ಸ್ ವಿರುದ್ಧ 113 (50) ರನ್ ಬಾರಿಸಿದ್ದರು. ಹಾಗೆಯೇ ಕಳೆದ ಸೀಸನ್​ನಲ್ಲಿ ಎಸ್​ಆರ್​ಹೆಚ್​ 100 (63) ರನ್ ಬಾರಿಸಿ ಅಬ್ಬರಿಸಿದ್ದರು. ಹೀಗಾಗಿ ಮೇ 18 ರಂದು ಮತ್ತೊಮ್ಮೆ ಕಿಂಗ್ ಕೊಹ್ಲಿ ಬ್ಯಾಟ್​ನಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು.

6 / 7
ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ, ಈ ಪಂದ್ಯದಲ್ಲಿ ಆರ್​ಸಿಬಿ ಕನಿಷ್ಠ 18 ರನ್​ಗಳ ಅಂತರದಿಂದ ಗೆದ್ದರೆ ಸಿಎಸ್​ಕೆ ತಂಡದ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಬಹುದು. ಒಂದು ವೇಳೆ ಆರ್​ಸಿಬಿ ಚೇಸ್ ಮಾಡಿದರೆ 18.1 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ ಸಿಎಸ್​ಕೆ ತಂಡವನ್ನು ಅಂಕ ಪಟ್ಟಿಯಲ್ಲಿ ಹಿಂದಿಕ್ಕಬಹುದು. ಕಾಕತಾಳೀಯ ಎಂಬಂತೆ ಇಲ್ಲೂ ಕೂಡ 18ರ ಲೆಕ್ಕಾಚಾರ ಕಾಣಿಸಿಕೊಂಡಿದೆ.

7 / 7
ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುವ ನಿರೀಕ್ಷೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಈ ನಿರೀಕ್ಷೆಯೊಂದಿಗೆ ಆರ್​ಸಿಬಿ ಈ ಬಾರಿ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆಯಾ ಕಾದು ನೋಡಬೇಕಿದೆ.

Published On - 1:07 pm, Tue, 14 May 24