IPL 2024: RCB ನೇರವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು..!

| Updated By: ಝಾಹಿರ್ ಯೂಸುಫ್

Updated on: Apr 17, 2024 | 9:22 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ಆರ್​ಸಿಬಿ ಆಡಿದ 7 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 1 ಮ್ಯಾಚ್ ಮಾತ್ರ. ಸಿಎಸ್​ಕೆ ವಿರುದ್ಧದ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ ಆರ್​ಸಿಬಿ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಮಾತ್ರ ಜಯ ಸಾಧಿಸಿದೆ. ಇನ್ನುಳಿದ ಎಲ್ಲಾ ಪಂದ್ಯಗಳಲ್ಲೂ ಸೋಲನುಭವಿದೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರ ಮೊದಲಾರ್ಧದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇದೀಗ ದ್ವಿತೀಯಾರ್ಧದ ಪಂದ್ಯಗಳಿಗಾಗಿ ಸಜ್ಜಾಗುತ್ತಿದೆ. ಏಪ್ರಿಲ್ 21 ರಂದು ನಡೆಯಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಮೂಲಕ ಆರ್​ಸಿಬಿ ದ್ವಿತೀಯಾರ್ಧವನ್ನು ಆರಂಭಿಸಲಿದೆ.

2 / 6
ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಪ್ಲೇಆಫ್​ಗೇರಲು ಆರ್​ಸಿಬಿ ಮೊದಲ ಹೆಜ್ಜೆಯನ್ನಿಡುವ ವಿಶ್ವಾಸದಲ್ಲಿದೆ. ಏಕೆಂದರೆ ಮೊದಲಾರ್ಧದಲ್ಲಿ ಆರ್​ಸಿಬಿ ಒಂದು ಪಂದ್ಯವನ್ನು ಗೆದ್ದಿದ್ದರೂ, ದ್ವಿತೀಯಾರ್ಧದ ಮೂಲಕ ನೇರವಾಗಿ ಪ್ಲೇಆಫ್​ಗೆ ಪ್ರವೇಶಿಸುವ ಅವಕಾಶ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿದೆ.

3 / 6
ಅಂದರೆ ಮುಂದಿನ 7 ಪಂದ್ಯಗಳಲ್ಲಿ ಆರ್​ಸಿಬಿ ಜಯ ಸಾಧಿಸಿದರೆ, 8 ಗೆಲುವುಗಳೊಂದಿಗೆ ಒಟ್ಟು 16 ಅಂಕಗಳನ್ನು ಪಡೆದುಕೊಳ್ಳಲಿದೆ. ಸಾಮಾನ್ಯವಾಗಿ 16 ಅಂಕಗಳನ್ನು ಪಡೆಯುವ ತಂಡಗಳು ಅಂಕಪಟ್ಟಿಯಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವುದು ವಾಡಿಕೆ. ಅದರಂತೆ ಆರ್​ಸಿಬಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದು ನೇರವಾಗಿ ಪ್ಲೇಆಫ್ ಹಂತಕ್ಕೇರಬಹುದು.

4 / 6
ಇನ್ನು 7 ಪಂದ್ಯಗಳಲ್ಲಿ ಆರ್​ಸಿಬಿ ಒಂದು ಪಂದ್ಯವನ್ನು ಸೋತರೂ 14 ಅಂಕಗಳನ್ನು ಕಲೆಹಾಕಲು ಅವಕಾಶವಿದೆ. ಇಲ್ಲಿ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರ 2 ತಂಡಗಳು 18 ಅಥವಾ 20 ಅಂಕಗಳನ್ನು ಪಡೆದುಕೊಂಡರೆ, ನಾಲ್ಕನೇ ಸ್ಥಾನ ಪಡೆಯುವ ತಂಡವೊಂದು 14 ಅಂಕಗಳನ್ನು ಗಳಿಸುವ ಸಾಧ್ಯತೆ ಹೆಚ್ಚು. ಅದರಂತೆ ಆರ್​ಸಿಬಿ 14 ಅಂಕಳಗಳೊಂದಿಗೆ ಉತ್ತಮ ನೆಟ್​ ರನ್ ರೇಟ್ ಸಹಾಯದಿಂದ ಪ್ಲೇಆಫ್ ಹಂತಕ್ಕೇರಬಹುದು.

5 / 6
ಹೀಗಾಗಿ ಮೊದಲಾರ್ಧದಲ್ಲಿ ಒಂದು ಗೆಲುವು ಸಾಧಿಸಿರುವ ಆರ್​ಸಿಬಿ, ದ್ವಿತೀಯಾರ್ಧದಲ್ಲಿ ಸೋಲಿಲ್ಲದ ಸರದಾರನಾಗಿ ಮುಂದುವರೆದರೆ ನೇರವಾಗಿ ಪ್ಲೇಆಫ್ ಪ್ರವೇಶಿಸುವುದನ್ನು ಎದುರು ನೋಡಬಹುದು. ಅದರಂತೆ ಫಾಫ್ ಡುಪ್ಲೆಸಿಸ್ ಪಡೆ ದ್ವಿತೀಯಾರ್ಧದಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಲಿದೆಯಾ ಕಾದು ನೋಡಬೇಕಿದೆ.

6 / 6
ಆರ್​ಸಿಬಿ ತನ್ನ ಮುಂದಿನ ಪಂದ್ಯಗಳನ್ನು ಕೊಲ್ಕತ್ತಾ ನೈಟ್ ರೈಡರ್ಸ್, ಸನ್​ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್ (2 ಪಂದ್ಯಗಳು), ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಆರ್​ಸಿಬಿ ಪ್ಲೇಆಫ್ ಹಂತಕ್ಕೇರುವ ವಿಶ್ವಾಸದಲ್ಲಿದೆ.