IPL 2024: RCB ಆಡುವ ಬಳಗದಲ್ಲಿ 1 ಬದಲಾವಣೆ ಬಹುತೇಕ ಖಚಿತ

| Updated By: ಝಾಹಿರ್ ಯೂಸುಫ್

Updated on: Apr 14, 2024 | 12:07 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ಇದುವರೆಗೆ 6 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಿರುವುದು ಕೇವಲ 1 ಮ್ಯಾಚ್ ಮಾತ್ರ. ಉಳಿದ 5 ಪಂದ್ಯಗಳಲ್ಲಿ ಸೋತಿರುವ ಆರ್​ಸಿಬಿ ತಂಡ ಇದೀಗ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿದೆ.

1 / 15
ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 30ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್​ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ. ಸೋಮವಾರ (ಏ.15) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆರ್​ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಮಾಡಿಕೊಳ್ಳುವುದು ಬಹುತೇಕ ಖಚಿತ.

2 / 15
ಏಕೆಂದರೆ ಕಳೆದ ಆರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ​ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅಲ್ಲದೆ ಇದೀಗ ಅವರು ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಿಂದ ಮ್ಯಾಕ್ಸ್​ವೆಲ್ ಹೊರಗುಳಿಯುವುದು ಬಹುತೇಕ ಖಚಿತ ಎನ್ನಬಹುದು.

3 / 15
ಅದರಂತೆ ಗ್ಲೆನ್ ಮ್ಯಾಕ್ಸ್​ವೆಲ್ ಬದಲಿಗೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಕ್ಯಾಮರೋನ್ ಗ್ರೀನ್ ಕಣಕ್ಕಿಳಿಯಬಹುದು. ಕಳೆದ ಪಂದ್ಯದಲ್ಲಿ ಗ್ರೀನ್ ಹೊರಗುಳಿದಿದ್ದರು. ಅವರ ಬದಲಿಗೆ ವಿಲ್ ಜಾಕ್ಸ್ ಸ್ಥಾನ ಪಡೆದಿದ್ದರು. ಇದೀಗ ಮ್ಯಾಕ್ಸಿ ಹೊರಗುಳಿದರೆ, ಮತ್ತೆ ಗ್ರೀನ್​ಗೆ ಚಾನ್ಸ್​ ಸಿಗುವ ಸಾಧ್ಯತೆ ಹೆಚ್ಚು. ಅದರಂತೆ ಎಸ್​ಆರ್​ಹೆಚ್​ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ....

4 / 15
ಫಾಫ್ ಡುಪ್ಲೆಸಿಸ್: ಆರ್​ಸಿಬಿ ತಂಡದ ನಾಯಕನಾಗಿ ಫಾಫ್ ಡುಪ್ಲೆಸಿಸ್ ಈ ಪಂದ್ಯದಲ್ಲೂ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಆರಂಭಿಕನಾಗಿ ಬ್ಯಾಟ್ ಬೀಸಲಿದ್ದಾರೆ.

5 / 15
ವಿರಾಟ್ ಕೊಹ್ಲಿ: ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿರುವ ವಿರಾಟ್ ಕೊಹ್ಲಿ ಎಸ್​ಆರ್​ಹೆಚ್​ ವಿರುದ್ಧದ ಪಂದ್ಯದಲ್ಲೂ ನಾಯಕ ಫಾಫ್ ಡುಪ್ಲೆಸಿಸ್ ಜೊತೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ.

6 / 15
ಕ್ಯಾಮರೋನ್ ಗ್ರೀನ್: ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿರುವ ಆಲ್​ರೌಂಡರ್ ಕ್ಯಾಮರೋನ್ ಗ್ರೀನ್​​ಗೆ ಈ ಪಂದ್ಯದಲ್ಲಿ ಚಾನ್ಸ್ ಸಿಗುವ ಸಾಧ್ಯತೆಯಿದ್ದು, ಅದರಂತೆ ಗ್ರೀನ್ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.

7 / 15
ರಜತ್ ಪಾಟಿದಾರ್: ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ವಿರುದ್ಧ ಅರ್ಧಶತಕ ಬಾರಿಸಿ ಮಿಂಚಿರುವ ರಜತ್ ಪಾಟಿದಾರ್​ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು.

8 / 15
ವಿಲ್ ಜಾಕ್ಸ್: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿರುವ ವಿಲ್ ಜಾಕ್ಸ್ ​ಎಸ್​ಆರ್​ಹೆಚ್ ವಿರುದ್ಧದ ಪಂದ್ಯದಲ್ಲೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.

9 / 15
ಅನೂಜ್ ರಾವತ್: ಮೊದಲ ಎರಡು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಎಡಗೈ ದಾಂಡಿಗ ಅನೂಜ್ ರಾವತ್ ಈಡನ್ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

10 / 15
ದಿನೇಶ್ ಕಾರ್ತಿಕ್: ಆರ್​ಸಿಬಿ ತಂಡದ ಫಿನಿಶರ್ ಪಾತ್ರದಲ್ಲಿ ಭರ್ಜರಿ ಫಾರ್ಮ್​ನಲ್ಲಿರುವ ದಿನೇಶ್ ಕಾರ್ತಿಕ್ ಕಾಣಿಸಿಕೊಳ್ಳುವುದು ಖಚಿತ.

11 / 15
ಕರ್ಣ್ ಶರ್ಮಾ: ಆರ್​ಸಿಬಿ ಪರ ಕಳೆದ ಪಂದ್ಯದಲ್ಲಿ ಆಲ್​ರೌಂಡರ್ ಪ್ರದರ್ಶನದೊಂದಿಗೆ ಗಮನ ಸೆಳೆದಿರುವ ಕರ್ಣ್ ಶರ್ಮಾ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಕೂಡ ಕಣಕ್ಕಿಳಿಯಲಿದ್ದಾರೆ.

12 / 15
ರೀಸ್ ಟೋಪ್ಲಿ: ಎಡಗೈ ವೇಗಿ ರೀಸ್ ಟೋಪ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಏಕೆಂದರೆ ಆರ್​ಸಿಬಿ ಪರ ಸಿರಾಜ್, ಗ್ರೀನ್ ಬಲಗೈ ವೇಗಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಅತ್ತ ಯಶ್ ದಯಾಳ್ ಜೊತೆ ಟೋಪ್ಲಿಯನ್ನು ಎಡಗೈ ವೇಗಿಯಾಗಿ ಆರ್​ಸಿಬಿ ಬಳಸಿಕೊಳ್ಳಬಹುದು.

13 / 15
ಮೊಹಮ್ಮದ್ ಸಿರಾಜ್: ಎಸ್​ಆರ್​ಹೆಚ್ ವಿರುದ್ಧದ ಪಂದ್ಯದಲ್ಲೂ ಮೊಹಮ್ಮದ್ ಸಿರಾಜ್​ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂ ಸಿರಾಜ್ ಅವರ ತವರು ಮೈದಾನವಾಗಿದ್ದು, ಹೀಗಾಗಿ ಅಲ್ಲಿನ ಪಿಚ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

14 / 15
ಯಶ್ ದಯಾಳ್: ಆರ್​ಸಿಬಿ ಪರ ಎಡಗೈ ವೇಗಿ ಯಶ್ ದಯಾಳ್ ಕೂಡ ಕಾಣಿಸಿಕೊಳ್ಳಬಹುದು. ಏಕೆಂದರೆ ಪ್ರಸ್ತುತ ತಂಡದಲ್ಲಿರುವ ಏಕೈಕ ಭಾರತೀಯ ಎಡಗೈ ವೇಗಿಯಾಗಿರುವ ದಯಾಳ್​ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

15 / 15
ಮಹಿಪಾಲ್ ಲೋಮ್ರರ್: ಆರ್​ಸಿಬಿ ತಂಡವು ಚೇಸಿಂಗ್ ಮಾಡುವುದಾದರೆ, ಮೊಹಮ್ಮದ್ ಸಿರಾಜ್ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಹಿಪಾಲ್ ಲೋಮ್ರರ್ ಅವರನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.