
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 68ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೇ 18 ರಂದು ನಡೆಯಲಿರುವ ಈ ಪಂದ್ಯಕ್ಕೆ ಉಭಯ ತಂಡಗಳ ಒಟ್ಟು 5 ಆಟಗಾರರು ಅಲಭ್ಯರಾಗಲಿದ್ದಾರೆ.

ಈ ಐವರು ಆಟಗಾರರಲ್ಲಿ ಮೂವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಯರ್ಸ್ ಆಗಿದ್ದರೆ, ಇಬ್ಬರು ಆರ್ಸಿಬಿ ಆಟಗಾರರು. ಹೀಗಾಗಿ ಈ ಆಟಗಾರರು ಆರ್ಸಿಬಿ-ಸಿಎಸ್ಕೆ ನಡುವಣ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ. ಆ ಆಟಗಾರರು ಯಾರೆಂದರೆ...

ಮೊಯೀನ್ ಅಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ಮೊಯೀನ್ ಅಲಿ ಇಂಗ್ಲೆಂಡ್ ಟಿ20 ತಂಡದಲ್ಲಿದ್ದಾರೆ. ಇಂಗ್ಲೆಂಡ್ ಹಾಗೂ ಪಾಕಿಸ್ತಾನ್ ನಡುವಣ ಟಿ20 ಸರಣಿಯು ಮೇ 21 ರಿಂದ ಶುರುವಾಗಲಿದ್ದು, ಅದಕ್ಕೂ ಮುನ್ನ ತಂಡವನ್ನು ಕೂಡಿಕೊಳ್ಳುವಂತೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಹೀಗಾಗಿ ಮೊಯೀನ್ ಅಲಿ ಸಿಎಸ್ಕೆ ತಂಡವನ್ನು ತೊರೆಯಲಿದ್ದಾರೆ.

ವಿಲ್ ಜಾಕ್ಸ್: ಆರ್ಸಿಬಿ ತಂಡದ ಸ್ಪೋಟಕ ದಾಂಡಿಗ ವಿಲ್ ಜಾಕ್ಸ್ ಈಗಾಗಲೇ ಇಂಗ್ಲೆಂಡ್ಗೆ ತೆರಳಿದ್ದಾರೆ. ಜಾಕ್ಸ್ ಕೂಡ ಇಂಗ್ಲೆಂಡ್ ಟಿ20 ತಂಡದ ಭಾಗವಾಗಿರುವ ಕಾರಣ ಪಾಕಿಸ್ತಾನ್ ವಿರುದ್ಧದ ಸರಣಿಗಾಗಿ ಆರ್ಸಿಬಿ ತಂಡವನ್ನು ತೊರೆದಿದ್ದಾರೆ.

ಮುಸ್ತಫಿಜುರ್ ರೆಹಮಾನ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಡಗೈ ವೇಗಿ ಮುಸ್ತಫಿಜುರ್ ರೆಹಮಾನ್ ಈಗಾಗಲೇ ಸಿಎಸ್ಕೆ ತಂಡವನ್ನು ತೊರೆದಿದ್ದಾರೆ. ಬಾಂಗ್ಲಾದೇಶ್ ತಂಡವು ಮೇ 21 ರಿಂದ ಯುಎಸ್ಎ ವಿರುದ್ಧ ಟಿ20 ಸರಣಿ ಆಡಲಿದ್ದು, ಹೀಗಾಗಿ ಮುಸ್ತಫಿಜುರ್ ಕೂಡ ಸಿಎಸ್ಕೆ ತಂಡದ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ರೀಸ್ ಟೋಪ್ಲಿ: ಆರ್ಸಿಬಿ ತಂಡದಲ್ಲಿದ್ದ ಇಂಗ್ಲೆಂಡ್ ವೇಗಿ ರೀಸ್ ಟೋಪ್ಲಿ ಕೂಡ ತವರಿಗೆ ಮರಳಿದ್ದಾರೆ. ಮೇ 21 ರಿಂದ ಆರಂಭವಾಗಲಿರುವ ಪಾಕಿಸ್ತಾನ್ ವಿರುದ್ಧದ ಸರಣಿಗಾಗಿ ಟೋಪ್ಲಿ ತವರಿಗೆ ಹಿಂತಿರುಗಿದ್ದಾರೆ.

ಮಥೀಶ ಪತಿರಾಣ: ಶ್ರೀಲಂಕಾ ತಂಡವು ಟಿ20 ವಿಶ್ವಕಪ್ಗಾಗಿ ಯುಎಸ್ಎನತ್ತ ಪ್ರಯಾಣ ಬೆಳೆಸಿದೆ. ಈ ತಂಡದಲ್ಲಿ ಮಥೀಶ ಪತಿರಾಣ ಕೂಡ ಇದ್ದು, ಹೀಗಾಗಿ ಸಿಎಸ್ಕೆ ತಂಡದ ಮುಂದಿನ ಪಂದ್ಯಗಳಿಗೆ ಪತಿರಾಣ ಕೂಡ ಅಲಭ್ಯರಾಗಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಅಜಿಂಕ್ಯ ರಹಾನೆ, ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ರವೀಂದ್ರ ಜಡೇಜಾ, ಶಿವಂ ದುಬೆ, ಸಮೀರ್ ರಿಝ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಶಾರ್ದೂಲ್ ಠಾಕೂರ್, ಶೇಕ್ ರಶೀದ್, ನಿಶಾಂತ್ ಸಿಂಧು, ಮಿಚೆಲ್ ಸ್ಯಾಂಟ್ನರ್, ಡೇರಿಲ್ ಮಿಚೆಲ್, ಅರವೆಲ್ಲಿ ಅವನೀಶ್, ಮಹೀಶ್ ತೀಕ್ಷಣ, ಆರ್ ಎಸ್ ಹಂಗರ್ಗೇಕರ್, ಸಿಮರ್ಜೀತ್ ಸಿಂಗ್, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಅಜಯ್ ಜಾದವ್ ಮಂಡಲ್, ರಿಚರ್ಡ್ ಗ್ಲೀಸನ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಣ್.
Published On - 11:06 am, Tue, 14 May 24