Rohit Sharma: ಹೊಸ ತಂಡದ ಪರ ಕಣಕ್ಕಿಳಿಯುತ್ತಾರಾ ರೋಹಿತ್ ಶರ್ಮಾ?
TV9 Web | Updated By: ಝಾಹಿರ್ ಯೂಸುಫ್
Updated on:
Feb 10, 2024 | 3:23 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17ರ ಟ್ರೇಡ್ ವಿಂಡೋ ಇನ್ನೂ ಕೂಡ ಓಪನ್ ಇದೆ. ಹೀಗಾಗಿ ರೋಹಿತ್ ಶರ್ಮಾ ಅವರನ್ನು ವರ್ಗಾವಣೆ ಅಥವಾ ಬೇರೊಂದು ತಂಡಕ್ಕೆ ಮಾರಾಟ ಮಾಡಿಕೊಳ್ಳುವ ಅವಕಾಶವಿದೆ. ಇತ್ತ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಹೇಳಿಕೆಯ ವಿರುದ್ಧ ತಿರುಗಿ ನಿಂತಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.
1 / 9
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ಗಾಗಿ ಸಿದ್ಧತೆಗಳನ್ನು ಶುರು ಆಗಿದೆ. ಅತ್ತ ಎಲ್ಲಾ ಫ್ರಾಂಚೈಸಿಗಳು ಟೂರ್ನಿಗಾಗಿ ಪ್ಲ್ಯಾನ್ಗಳನ್ನು ರೂಪಿಸಲಾರಂಭಿಸಿದ್ದಾರೆ. ಇದರ ನಡುವೆ ಮುಂಬೈ ಇಂಡಿಯನ್ಸ್ ತಂಡದ ಒಳಬೇಗುದಿ ಇನ್ನೂ ಕೂಡ ತಣ್ಣಗಾಗಿಲ್ಲ ಎಂಬ ವಿಚಾರ ಬಹಿರಂಗವಾಗಿದೆ. ಅದು ಕೂಡ ರೋಹಿತ್ ಶರ್ಮಾ (Rohit Sharma) ಅವರ ಪತ್ನಿ ರಿತಿಕಾ ಸಜ್ದೇಹ್ ಅವರ ಮುಖಾಂತರ ಗೊತ್ತಾಗಿರುವುದು ವಿಶೇಷ.
2 / 9
ಕೆಲ ದಿನಗಳ ಹಿಂದೆಯಷ್ಟೇ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಾರ್ಕ್ ಬೌಚರ್ ನಾಯಕತ್ವ ಬದಲಾವಣೆಯನ್ನು ಸಮರ್ಥಿಸಿಕೊಂಡಿದ್ದರು. ರೋಹಿತ್ ಶರ್ಮಾ ಅವರ ಬದಲಿಗೆ ಹಾರ್ದಿಕ್ ಪಾಂಡ್ಯರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿರುವುದು ಕೇವಲ ಕ್ರಿಕೆಟ್ ನಿರ್ಧಾರ ಅಷ್ಟೇ. ಅದರ ಆಚೆಗೆ ಏನೂ ಇಲ್ಲ ಎಂದು ತಿಳಿಸಿದ್ದರು.
3 / 9
ಮಾರ್ಕ್ ಬೌಚರ್ ಅವರ ಈ ಹೇಳಿಕೆಯ ವಿಡಿಯೋಗೆ ರಿತಿಕಾ ಸಜ್ದೇಹ್ ಕಾಮೆಂಟ್ ಮಾಡಿದ್ದರು. ಅಲ್ಲದೆ "ಇದರಲ್ಲಿ ಹಲವು ವಿಷಯಗಳು ತಪ್ಪು" ಎಂದಿದ್ದರು. ಅಂದರೆ ಮುಂಬೈ ಇಂಡಿಯನ್ಸ್ ಕೋಚ್ ಹೇಳುತ್ತಿರುವುದು ಸುಳ್ಳು ಎಂಬಾರ್ಥದಲ್ಲಿ ರಿತಿಕಾ ಕಾಮೆಂಟ್ ಮಾಡಿದ್ದರು. ರೋಹಿತ್ ಶರ್ಮಾ ಅವರ ಪತ್ನಿಯ ಕಾಮೆಂಟ್ ವೈರಲ್ ಆಗುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಕೋಚ್ ನೀಡಿದ್ದ ಹೇಳಿಕೆಯ ವಿಡಿಯೋವನ್ನೇ ಡಿಲೀಟ್ ಮಾಡಲಾಗಿತ್ತು.
4 / 9
ಇದೀಗ ರಿತಿಕಾ ಸಜ್ದೇಹ್ ಬಹಿರಂಗವಾಗಿಯೇ ಕಾಮೆಂಟ್ ಮಾಡಿರುವ ಕಾರಣ ಮುಂಬೈ ಇಂಡಿಯನ್ಸ್ ಹಾಗೂ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಅಲ್ಲದೆ ಈ ಬಾರಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
5 / 9
ಇತ್ತ ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳಲು ಬಯಸುವ ಆಟಗಾರರಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಹೆಸರುಗಳು ಮುಂಚೂಣಿಯಲ್ಲಿರಲಿದೆ. ಇನ್ನು ನಾಯಕನಾಗಿ ಹಾರ್ದಿಕ್ ಪಾಂಡ್ಯರನ್ನು ಕೂಡ ರಿಟೈನ್ ಮಾಡಿಕೊಳ್ಳಲಿದ್ದಾರೆ. ನಾಲ್ಕನೇ ಆಯ್ಕೆಯ ಮೂಲಕ ವಿದೇಶಿ ಆಟಗಾರರೊಬ್ಬರನ್ನು ತಂಡದಲ್ಲೇ ಉಳಿಸಿಕೊಳ್ಳಲಿದ್ದಾರೆ.
6 / 9
ಐಪಿಎಲ್ ಆಟಗಾರರ ಟ್ರೇಡ್ ನಿಯಮಗಳ ಪ್ರಕಾರ, ಹರಾಜಿನ ಬಳಿಕ ಟ್ರೇಡ್ ವಿಂಡೋ ಓಪನ್ ಇರುತ್ತದೆ. ಐಪಿಎಲ್ ಆರಂಭಕ್ಕೆ ಒಂದು ತಿಂಗಳ ಮುಂಚಿನವರೆಗೆ ಆಟಗಾರರನ್ನು ಮಾರಾಟ ಮಾಡುವ ಅಥವಾ ವರ್ಗಾವಣೆ ಮಾಡಿಕೊಳ್ಳಲು ಅವಕಾಶ ಇರಲಿದೆ. ಈ ಆಯ್ಕೆಯ ಮೂಲಕ ರೋಹಿತ್ ಶರ್ಮಾ ಬೇರೊಂದು ತಂಡಕ್ಕೆ ಹೋಗಬಹುದು.
7 / 9
ಆದರೆ ಇದೀಗ ಟ್ರೇಡ್ ವಿಂಡೋ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಅಂದರೆ ಮಾರ್ಚ್ 22 ರಿಂದ ಐಪಿಎಲ್ ಶುರುವಾಗುವುದಾದರೆ, ಫೆಬ್ರವರಿ 22 ಕ್ಕೆ ಟ್ರೇಡ್ ವಿಂಡೋ ಕ್ಲೋಸ್ ಆಗಲಿದೆ. ಇದಾದ ಬಳಿಕ ಆಟಗಾರರನ್ನು ವರ್ಗಾವಣೆ ಅಥವಾ ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಹೀಗಾಗಿ ಇನ್ನೆರಡು ವಾರಗಳಲ್ಲಿ ಟ್ರೇಡಿಂಗ್ ನಡೆದರೆ ಮಾತ್ರ ಹಿಟ್ಮ್ಯಾನ್ ಬೇರೊಂದು ತಂಡದ ಪರ ಕಣಕ್ಕಿಳಿಯಬಹುದು.
8 / 9
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಅಂದರೆ ಟ್ರೇಡ್ ವಿಂಡೋ ಆಯ್ಕೆ ಕೇವಲ ಫ್ರಾಂಚೈಸಿಗೆ ಮಾತ್ರ. ಅಂದರೆ ರೋಹಿತ್ ಶರ್ಮಾ ಖುದ್ದು ಈ ಆಯ್ಕೆಯನ್ನು ಬಳಸಿಕೊಳ್ಳುವಂತಿಲ್ಲ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು ವರ್ಗಾವಣೆ ಅಥವಾ ಮಾರಾಟ ಮಾಡಬೇಕು.
9 / 9
ರೋಹಿತ್ ಶರ್ಮಾ