ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 28 ರನ್ ಬಾರಿಸಿದ್ದ ಭರತ್, 2ನೇ ಇನಿಂಗ್ಸ್ನಲ್ಲಿ 41 ರನ್ಗಳಿಸಿದ್ದರು. ಇನ್ನು ದ್ವಿತೀಯ ಟೆಸ್ಟ್ನ ಪ್ರಥಮ ಇನಿಂಗ್ಸ್ನಲ್ಲಿ ಕೇವಲ 6 ರನ್ಗೆ ಆಲೌಟ್ ಆಗಿದ್ದರು. ಹಾಗೆಯೇ 2ನೇ ಇನಿಂಗ್ಸ್ನಲ್ಲಿ ಕಲೆಹಾಕಿದ್ದು ಕೇವಲ 17 ರನ್ ಮಾತ್ರ. ಅಂದರೆ 4 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದರೂ ಕಲೆಹಾಕಿರುವ ಒಟ್ಟು ಸ್ಕೋರ್ 92 ರನ್ಗಳು ಮಾತ್ರ.