IPL 2024: ಮಯಾಂಕ್ ಅಗರ್ವಾಲ್ ಕಾಲೆಳೆದ ರೋಹಿತ್ ಶರ್ಮಾ

| Updated By: ಝಾಹಿರ್ ಯೂಸುಫ್

Updated on: Mar 27, 2024 | 9:53 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್​) ಮೂರನೇ ಪಂದ್ಯದಲ್ಲಿ ಕೆಕೆಆರ್ ವೇಗಿ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿ ಫ್ಲೈಯಿಂಗ್ ಕಿಸ್ ನೀಡಿದ್ದರು. ಇದೇ ಮಾದರಿಯಲ್ಲಿ ಕಿಸ್ ನೀಡುವ ಮೂಲಕ ರೋಹಿತ್ ಶರ್ಮಾ ಮಯಾಂಕ್ ಅಗರ್ವಾಲ್ ಅವರನ್ನು ಕಾಲೆಳೆದಿದ್ದಾರೆ. ಇದೀಗ ಹಿಟ್​ಮ್ಯಾನ್ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 8ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಇಂದು (ಮಾ.27) ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

2 / 5
ಈ ಅಭ್ಯಾಸದ ನಡುವೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಸನ್​ರೈಸರ್ಸ್ ಹೈದರಾಬಾದ್ ಆಟಗಾರ ಮಯಾಂಕ್ ಅಗರ್ವಾಲ್ ಭೇಟಿಯಾಗಿದ್ದರು. ಈ ಭೇಟಿಯೊಂದಿಗೆ ಕುಶಲೋಪರಿ ಆರಂಭಿಸಿದ ಮಯಾಂಕ್ ಅವರಿಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ರೋಹಿತ್ ಶರ್ಮಾ ಕಾಲೆಳೆದರು.

3 / 5
ಅಷ್ಟಕ್ಕೂ ರೋಹಿತ್ ಶರ್ಮಾ ಫ್ಲೈಯಿಂಗ್ ಕಿಸ್ ನೀಡಿ ಕಿಚಾಯಿಸಲು ಮುಖ್ಯ ಕಾರಣ ಕೆಕೆಆರ್ ತಂಡದ ಹರ್ಷಿತ್ ರಾಣಾ. ಐಪಿಎಲ್​ನ ಮೂರನೇ ಪಂದ್ಯದಲ್ಲಿ ಮಯಾಂಕ್ ಅವರನ್ನು ಔಟ್ ಮಾಡಿದ ಬಳಿಕ ರಾಣಾ ಫ್ಲೈಯಿಂಗ್ ಕಿಸ್ ನೀಡಿ ಬೀಳ್ಕೊಟ್ಟಿದ್ದರು. ಈ ವೇಳೆ ಮಯಾಂಕ್ ಅಗರ್ವಾಲ್ ಕೆಕೆಆರ್ ಆಟಗಾರನನ್ನು ಗುರಾಯಿಸಿದ್ದರು.

4 / 5
ಈ ದೃಶ್ಯವನ್ನು ರೋಹಿತ್ ಶರ್ಮಾ ಕೂಡ ವೀಕ್ಷಿಸಿದ್ದು, ಹೈದರಾಬಾದ್​ ಮೈದಾನದಲ್ಲಿ ಮಯಾಂಕ್ ಅಗರ್ವಾಲ್ ಸಿಕ್ಕಾಗ ಅದನ್ನು ಪುನರಾವರ್ತಿಸುವ ಮೂಲಕ ಕಾಲೆಳೆದಿದ್ದಾರೆ. ಇದೀಗ ಹಿಟ್​ಮ್ಯಾನ್​ನ ಫ್ಲೈಯಿಂಗ್ ಕಿಸ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

5 / 5
ಇನ್ನು ಹೈದರಾಬಾದ್​ನಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ತಂಡ ಗೆಲುವಿನ ಖಾತೆ ತೆರೆಯಲಿದೆ. ಅಂದರೆ ಸನ್​ರೈಸರ್ಸ್ ಹೈದರಾಬಾದ್​ ತಂಡವು ತನ್ನ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋಲನುಭವಿಸಿತ್ತು. ಹಾಗೆಯೇ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಪರಾಜಯಗೊಂಡಿತ್ತು. ಇದೀಗ ಉಭಯ ತಂಡಗಳು ತನ್ನ 2ನೇ ಪಂದ್ಯವಾಡಲು ಸಜ್ಜಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಐಪಿಎಲ್ 2024 ರಲ್ಲಿ ತನ್ನ ಮೊದಲ ಜಯ ಸಾಧಿಸಲಿದೆ.