IPL 2024: SRH ಅಬ್ಬರಕ್ಕೆ RCB ದಾಖಲೆ ಧೂಳೀಪಟ
TV9 Web | Updated By: ಝಾಹಿರ್ ಯೂಸುಫ್
Updated on:
Apr 21, 2024 | 9:32 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್ಆರ್ಹೆಚ್ ತಂಡವು 266 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 199 ರನ್ಗಳಿಗೆ ಆಲೌಟ್ ಆಗುವ ಮೂಲಕ 67 ರನ್ಗಳಿಂದ ಸೋಲೊಪ್ಪಿಕೊಂಡಿದೆ.
1 / 5
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಇತಿಹಾಸದಲ್ಲಿ ಕೇವಲ 7 ಬಾರಿ ಮಾತ್ರ 250+ ಸ್ಕೋರ್ಗಳು ಮೂಡಿಬಂದಿವೆ. ವಿಶೇಷ ಎಂದರೆ ಈ ಏಳು ಬಾರಿಯ ಗರಿಷ್ಠ ಸ್ಕೋರ್ಗಳಲ್ಲಿ 5 ಬಾರಿ 250+ ರನ್ಗಳು ಮೂಡಿಬಂದಿರುವುದು ಈ ಬಾರಿಯ ಐಪಿಎಲ್ನಲ್ಲಿ ಎಂದರೆ ನಂಬಲೇಬೇಕು.
2 / 5
ಅದರಲ್ಲೂ ಸನ್ರೈಸರ್ಸ್ ಹೈದರಾಬಾದ್ ತಂಡ ಮೂರು ಬಾರಿ 250 ರನ್ಗಳಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಈ ಮೂಲಕ ಐಪಿಎಲ್ನಲ್ಲಿ ಅತೀ ಹೆಚ್ಚು ಬಾರಿ 250 ಕ್ಕಿಂತ ಅಧಿಕ ಸ್ಕೋರ್ಗಳಿಸಿದ ತಂಡವೆಂಬ ದಾಖಲೆಯನ್ನು ಸಹ ಬರೆದಿದೆ.
3 / 5
ಇದಕ್ಕೂ ಮುನ್ನ ಈ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿತ್ತು. 2013 ರಲ್ಲಿ 263 ರನ್ ಬಾರಿಸಿ ಇತಿಹಾಸ ನಿರ್ಮಿಸಿದ್ದ ಆರ್ಸಿಬಿ ತಂಡವು ಈ ಬಾರಿಯ ಐಪಿಎಲ್ನಲ್ಲಿ ಎಸ್ಆರ್ಹೆಚ್ ವಿರುದ್ಧ 262 ರನ್ಗಳಿಸಿತ್ತು. ಈ ಮೂಲಕ ಐಪಿಎಲ್ನಲ್ಲಿ 2 ಬಾರಿ 250+ ಸ್ಕೋರ್ಗಳಿಸಿದ ವಿಶೇಷ ದಾಖಲೆ ಬರೆದಿದ್ದರು.
4 / 5
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 266 ರನ್ ಕಲೆಹಾಕುವುದರೊಂದಿಗೆ ಈ ದಾಖಲೆ ಸನ್ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ವಿರುದ್ಧ ಎಸ್ಆರ್ಹೆಚ್ ತಂಡವು 277 ರನ್ಗಳಿಸಿದರೆ, ಆರ್ಸಿಬಿ ವಿರುದ್ಧ 287 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿತ್ತು.
5 / 5
ಈ ಮೂಲಕ ಐಪಿಎಲ್ನಲ್ಲಿ ಮೂರು ಬಾರಿ 250+ ಸ್ಕೋರ್ಗಳಿಸಿದ ಏಕೈಕ ತಂಡ ಎನಿಸಿಕೊಂಡಿದೆ. ಹಾಗೆಯೇ ಟಿ20 ಲೀಗ್ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ 2ನೇ ತಂಡ ಎಂಬ ದಾಖಲೆಯನ್ನು ಬರೆದಿದೆ. ಅದು ಕೂಡ 3 ಬಾರಿ 250+ ಸ್ಕೋರ್ಗಳಿಸಿದ ಸರ್ರೆ ತಂಡದ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.