IPL 2024: ಇನ್ನೂ ಆಗಮಿಸದ RCB ಆಟಗಾರ..!
TV9 Web | Updated By: ಝಾಹಿರ್ ಯೂಸುಫ್
Updated on:
Mar 16, 2024 | 7:28 AM
IPL 2024 RCB: ಐಪಿಎಲ್ 17ನೇ ಆವೃತ್ತಿಗಾಗಿ ನಡೆಯುತ್ತಿರುವ ಆರ್ಸಿಬಿ ತಂಡದ ಅಭ್ಯಾಸ ಶಿಬಿರದಲ್ಲಿ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿದಂತೆ ಪ್ರಮುಖ ಆಟಗಾರರು ಕಾಣಿಸಿಕೊಂಡಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಸೋಮವಾರ ಅಥವಾ ಮಂಗಳವಾರ ಆರ್ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಈಗಾಗಲೇ ಆರ್ಸಿಬಿ ಸೇರಿದಂತೆ ಎಲ್ಲಾ ತಂಡಗಳು ಸಮರಭ್ಯಾಸವನ್ನು ಶುರು ಮಾಡಿದೆ. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಹುತೇಕ ಆಟಗಾರರು ಈಗಾಗಲೇ ಕ್ಯಾಂಪ್ನಲ್ಲಿ ಕಾಣಿಸಿಕೊಂಡಿದ್ದಾರೆ.
2 / 6
ಅದರಲ್ಲೂ ಇಂಗ್ಲೆಂಡ್ ಆಟಗಾರರಾದ ವಿಲ್ ಜಾಕ್ಸ್ ಹಾಗೂ ರೀಸ್ ಟೋಪ್ಲಿ ಶುಕ್ರವಾರ ಆರ್ಸಿಬಿ ಬಳಗವನ್ನು ಕೂಡಿಕೊಂಡಿದ್ದಾರೆ. ಆದರೆ ಮತ್ತೋರ್ವ ಇಂಗ್ಲೆಂಡ್ ಆಟಗಾರ ಟಾಮ್ ಕರನ್ ಇನ್ನೂ ಕೂಡ ಆಗಮಿಸಿಲ್ಲ.
3 / 6
ಸಾಮಾನ್ಯವಾಗಿ ಒಂದೇ ದೇಶದ ಆಟಗಾರರು ಜೊತೆಯಾಗಿಯೇ ಆಗಮಿಸುತ್ತಾರೆ. ಅದರಂತೆ ಇಂಗ್ಲೆಂಡ್ ತಂಡದ ಆಟಗಾರರಾದ ವಿಲ್ ಜಾಕ್ಸ್ ಹಾಗೂ ರೀಸ್ ಟೋಪ್ಲಿ ಜೊತೆಯಾಗಿಯೇ ಬಂದಿದ್ದರೂ, ಇವರ ಜೊತೆ ಟಾಮ್ ಕರನ್ ಕಾಣಿಸಿಕೊಂಡಿಲ್ಲ. ಹೀಗಾಗಿಯೇ ಇಂಗ್ಲೆಂಡ್ ಆಲ್ರೌಂಡರ್ ಐಪಿಎಲ್ಗೆ ಅಲಭ್ಯರಾಗಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
4 / 6
ಏಕೆಂದರೆ ಜನವರಿ 11 ರಂದು ಟಾಮ್ ಕರನ್ ಗಾಯಗೊಂಡಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ ಪಂದ್ಯದ ವೇಳೆ ಅವರ ಮೊಣಕಾಲಿಗೆ ಗಂಭೀರ ಗಾಯವಾಗಿತ್ತು. ಹೀಗಾಗಿ ಅರ್ಧದಲ್ಲೇ ಬಿಬಿಎಲ್ ತೊರೆದಿದ್ದರು. ಇದಾದ ಬಳಿಕ ಅವರು ಯಾವುದೇ ಪಂದ್ಯವಾಡಿಲ್ಲ.
5 / 6
ಇದೀಗ ಆರ್ಸಿಬಿ ತಂಡದಲ್ಲಿರುವ ಇಂಗ್ಲೆಂಡ್ ಆಟಗಾರರು ಆಗಮಿಸಿದರೂ, ಅತ್ತ ಟಾಮ್ ಕರನ್ ಅವರ ಆಗಮನದ ಬಗ್ಗೆ ಯಾವುದೇ ಸುಳಿವಿಲ್ಲ. ಇತ್ತ ಐಪಿಎಲ್ ಶುರುವಾಗಲು ಇನ್ನು ಉಳಿದಿರುವುದು ಕೇವಲ 5 ದಿನಗಳು ಮಾತ್ರ. ಇದಾಗ್ಯೂ ಟಾಮ್ ಕರನ್ ಅವರು ಆರ್ಸಿಬಿ ಬಳಗವನ್ನು ಕೂಡಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಈ ಬಾರಿಯ ಐಪಿಎಲ್ನಿಂದ ಇಂಗ್ಲೆಂಡ್ ಆಲ್ರೌಂಡರ್ ಹೊರಗುಳಿದರೂ ಅಚ್ಚರಿಪಡಬೇಕಿಲ್ಲ.
6 / 6
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.