
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಸಿಕ್ಸರ್ಗಳ ಸುರಿಮಳೆಯಾಗಿದೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು. ಅಂದರೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸ್ಗಳು ಮೂಡಿಬಂದ ಸೀಸನ್ ಎಂಬ ಹೆಗ್ಗಳಿಕೆಗೆ IPL 2024 ಪಾತ್ರವಾಗಿದೆ.

ಹಾಗೆಯೇ ಈ ಬಾರಿಯ ಐಪಿಎಲ್ನಲ್ಲಿ ಅತೀ ವೇಗವಾಗಿ ಸಾವಿರ ಸಿಕ್ಸ್ಗಳು ಪೂರ್ಣಗೊಂಡಿವೆ. ಐಪಿಎಲ್ 2023 ರಲ್ಲಿ 67 ಪಂದ್ಯಗಳಲ್ಲಿ 1000 ಸಿಕ್ಸ್ಗಳು ಮೂಡಿಬಂದಿದ್ದವು. ಆದರೆ ಈ ಬಾರಿಯ ಐಪಿಎಲ್ನಲ್ಲಿ ಕೇವಲ 57 ಮ್ಯಾಚ್ಗಳಲ್ಲೇ 1000 ಸಿಕ್ಸ್ಗಳು ಪೂರ್ಣಗೊಂಡಿತ್ತು.

ಅಷ್ಟೇ ಅಲ್ಲದೆ ಐಪಿಎಲ್ 2023 ರಲ್ಲಿ 1000 ಸಿಕ್ಸರ್ಗಳನ್ನು ಪೂರ್ಣಗೊಳಿಸಲು ಬ್ಯಾಟರ್ಗಳು ತೆಗೆದುಕೊಂಡ ಒಟ್ಟು ಎಸೆತ 15,391. ಆದರೆ ಈ ಬಾರಿ 13,079 ಎಸೆತಗಳಲ್ಲಿಯೇ 1000 ಸಿಕ್ಸ್ಗಳು ಮೂಡಿಬಂದಿವೆ.

ಇನ್ನು 64 ಪಂದ್ಯಗಳ ಮುಕ್ತಾಯದ ವೇಳೆಗೆ 1125 ಸಿಕ್ಸ್ಗಳು ಮೂಡಿಬಂದಿವೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸರ್ಗಳು ಮೂಡಿಬಂದ ಆವೃತ್ತಿ ಎಂಬ ದಾಖಲೆ ಐಪಿಎಲ್ ಸೀಸನ್-17 ರ ಪಾಲಾಗಿದೆ. ಇದಕ್ಕೂ ಮುನ್ನ ಐಪಿಎಲ್ 2023 ಅತೀ ಹೆಚ್ಚು ಸಿಕ್ಸ್ಗಳು ಮೂಡಿಬಂದ ಸೀಸನ್ ಆಗಿತ್ತು.

ಕಳೆದ ಬಾರಿಯ ಐಪಿಎಲ್ನಲ್ಲಿ 74 ಪಂದ್ಯಗಳಲ್ಲಿ ಒಟ್ಟು 1124 ಸಿಕ್ಸರ್ಗಳು ಮೂಡಿಬಂದಿದ್ದವು. ಆದರೆ ಈ ಬಾರಿಯ ಐಪಿಎಲ್ನ 64 ಪಂದ್ಯಗಳ ಮುಕ್ತಾಯದ ವೇಳೆಗೆ ಒಟ್ಟು 1125 ಸಿಕ್ಸ್ಗಳು ಮೂಡಿಬಂದಿವೆ. ಇದರೊಂದಿಗೆ IPL 2024 ರ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸರ್ಗಳು ಮೂಡಿಬಂದ ಆವೃತ್ತಿ ಎನಿಸಿಕೊಂಡಿದೆ.