Virat Kohli: ವಿರಾಟ್ ಕೊಹ್ಲಿ ಮುಂದಿದೆ ಮಿಷನ್ 266

| Updated By: ಝಾಹಿರ್ ಯೂಸುಫ್

Updated on: May 21, 2024 | 12:07 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್​) ಸೀಸನ್​ವೊಂದರಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಐಪಿಎಲ್ 2016 ರಲ್ಲಿ ಬರೋಬ್ಬರಿ 973 ರನ್​ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ಸಾರ್ವಕಾಲಿಕ ದಾಖಲೆ ಮುರಿಯಲು ಕಿಂಗ್ ಕೊಹ್ಲಿಗೆ ಕೇವಲ 266 ರನ್​ಗಳ ಅವಶ್ಯಕತೆಯಿದೆ.

1 / 7
ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) ಪ್ಲೇಆಫ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. ಇಂದು (ಮೇ 21) ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಲಿದೆ. ಇನ್ನು ನಾಳೆ (ಮೇ 22) ಜರುಗಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ.

2 / 7
ವಿಶೇಷ ಎಂದರೆ ಎಲಿಮಿನೇಟರ್ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕ. ಅಂದರೆ ಆರ್​ಆರ್​-ಆರ್​ಸಿಬಿ ನಡುವಣ ಪಂದ್ಯದಲ್ಲಿ ಸೋಲುವ ಟೀಮ್ ಐಪಿಎಲ್​ನಿಂದ ಹೊರಬೀಳಲಿದೆ. ಆದರೆ ಅತ್ತ ಈ ಪಂದ್ಯದಲ್ಲಿ ಮಿಷನ್ 266 ಧ್ಯೇಯದೊಂದಿಗೆ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ.

3 / 7
ಈ ಬಾರಿಯ ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ 14 ಇನಿಂಗ್ಸ್​ಗಳಿಂದ ಒಟ್ಟು 708 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 2 ಬಾರಿ 700+ ರನ್ ಕಲೆಹಾಕಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕಿಂಗ್ ಕೊಹ್ಲಿ 2016 ರಲ್ಲಿ 973 ರನ್​ ಬಾರಿಸಿದ್ದರು.

4 / 7
ಇದೀಗ ತನ್ನದೇ ಸರ್ವಶ್ರೇಷ್ಠ ದಾಖಲೆಯನ್ನು ಮುರಿಯಲು ಕಿಂಗ್ ಕೊಹ್ಲಿಗೆ ಕೇವಲ 266 ರನ್​ಗಳ ಅವಶ್ಯಕತೆಯಿದೆ. ಒಂದು ವೇಳೆ ಪ್ಲೇಆಫ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಶತಕಗಳನ್ನು ಸಿಡಿಸಿದರೆ ಹೊಸ ಇತಿಹಾಸ ನಿರ್ಮಾಣವಾಗುವುದು ನಿಶ್ಚಿತ.

5 / 7
ಕಳೆದ 6 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಕಿಂಗ್ ಕೊಹ್ಲಿ ಕ್ರಮವಾಗಿ 51, 70, 42, 92, 27, 47 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ವಿರುದ್ಧ ಶತಕವನ್ನೂ ಕೂಡ ಸಿಡಿಸಿದ್ದಾರೆ.

6 / 7
ಅದರಂತೆ ಇದೀಗ 708 ರನ್​ ಕಲೆಹಾಕಿರುವ ಕಿಂಗ್ ಕೊಹ್ಲಿ ಮುಂದೆ ಮಿಷನ್ 266 ರನ್​ಗಳ ಗುರಿಯಿದೆ. ಈ ಗುರಿ ಬೆನ್ನತ್ತಬೇಕಿದ್ದರೆ ಆರ್​ಸಿಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲ್ಲಬೇಕು. ಈ ಹಿಂದೆ ಆರ್​ಆರ್ ವಿರುದ್ಧ ಕೊಹ್ಲಿ ಶತಕ ಸಿಡಿಸಿರುವ ಕಾರಣ ಎಲಿಮಿನೇಟರ್ ಪಂದ್ಯದಲ್ಲೂ ಭರ್ಜರಿ ಇನಿಂಗ್ಸ್ ನಿರೀಕ್ಷಿಸಬಹುದು.

7 / 7
ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಮ್ಯಾಚ್​ನಲ್ಲೂ ಜಯ ಸಾಧಿಸಿದರೆ ಫೈನಲ್​ಗೆ ತಲುಪಲಿದೆ. ಅಂದರೆ ಈ ಮೂರು ಮ್ಯಾಚ್​ಗಳ ಮೂಲಕ ವಿರಾಟ್ ಕೊಹ್ಲಿ (Virat Kohli) 973 ರನ್​ಗಳ ದಾಖಲೆಯನ್ನು ಮುರಿಯಬಹುದು. ಅದರಂತೆ ಕಿಂಗ್ ಕೊಹ್ಲಿ ಮಿಷನ್ 266 ಧ್ಯೇಯದೊಂದಿಗೆ ಆರ್​ಸಿಬಿ ತಂಡಕ್ಕೆ ಚೊಚ್ಚಲ ಟ್ರೋಫಿ ತಂದು ಕೊಡಲಿದ್ದಾರಾ ಕಾದು ನೋಡಬೇಕಿದೆ.