IPL 2024: ಕೆಕೆಆರ್ ಆರ್ಭಟಕ್ಕೆ ಆರ್ಸಿಬಿ ದಾಖಲೆ ಧ್ವಂಸ; ಎಸ್ಆರ್ಹೆಚ್ ದಾಖಲೆ ಸೇಫ್..!
IPL 2024: ಇನ್ನಿಂಗ್ಸ್ವೊಂದರಲ್ಲಿ 263 ರನ್ ಕಲೆಹಾಕಿ ಬರೋಬ್ಬರಿ 11 ವರ್ಷಗಳಿಂದ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಆರ್ಸಿಬಿಯನ್ನು ಕಳೆದ ವಾರವಷ್ಟೇ ಸನ್ರೈಸರ್ಸ್ ಹೈದರಾಬಾದ್ ತಂಡ 277 ರನ್ ಕಲೆಹಾಕುವ ಮೂಲಕ ಹಿಂದಿಕ್ಕಿತ್ತು.
1 / 8
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 16ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬ್ಯಾಟರ್ಸ್ಗಳ ಸಿಡಿಲಬ್ಬರದ ಬ್ಯಾಟಿಂಗ್ಗಾಗಿ ನಿಗದಿತ 20 ಓವರ್ಗಳಲ್ಲಿ ಬರೋಬ್ಬರಿ 272 ರನ್ ಕಲೆಹಾಕಿದೆ.
2 / 8
ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಇನ್ನಿಂಗ್ಸ್ವೊಂದರಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ಎರಡನೇ ತಂಡ ಎನಿಸಿಕೊಂಡಿದೆ. ಇದರೊಂದಿಗೆ ಕೆಕೆಆರ್ಗೂ ಮುನ್ನ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಆರ್ಸಿಬಿಯನ್ನು ಹಿಂದಿಕ್ಕಿದೆ.
3 / 8
ವಾಸ್ತವವಾಗಿ ಇನ್ನಿಂಗ್ಸ್ವೊಂದರಲ್ಲಿ 263 ರನ್ ಕಲೆಹಾಕಿ ಬರೋಬ್ಬರಿ 11 ವರ್ಷಗಳಿಂದ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಆರ್ಸಿಬಿಯನ್ನು ಕಳೆದ ವಾರವಷ್ಟೇ ಸನ್ರೈಸರ್ಸ್ ಹೈದರಾಬಾದ್ ತಂಡ 277 ರನ್ ಕಲೆಹಾಕುವ ಮೂಲಕ ಹಿಂದಿಕ್ಕಿತ್ತು.
4 / 8
ಇಂದಿನ ಪಂದ್ಯದಲ್ಲಿ ಎಸ್ಆರ್ಹೆಚ್ ದಾಖಲೆಯನ್ನು ಮುರಿಯುವ ಅವಕಾಶ ಕೆಕೆಆರ್ ತಂಡಕ್ಕಿತ್ತು. ಆದರೆ ಕೊನೆಯ ಹಂತದಲ್ಲಿ ತಂಡದ ವಿಕೆಟ್ಗಳು ಒಂದರ ಹಿಂದೆ ಒಂದರತೆ ಪತನವಾಗುವ ಮೂಲಕ ಕೆಕೆಆರ್ ವೇಗಕ್ಕೆ ಬ್ರೇಕ್ ಬಿದ್ದಿತ್ತು.
5 / 8
ಇದಲ್ಲದೆ ಐಪಿಎಲ್ ಇತಿಹಾಸದಲ್ಲಿ ಇನ್ನಿಂಗ್ಸ್ವೊಂದರಲ್ಲಿ ಕೆಕೆಆರ್ ದಾಖಲಿಸಿದ ಅತ್ಯಧಿಕ ಸ್ಕೋರ್ ಕೂಡ ಇದೆ. ಇದಕ್ಕೂ ಮೊದಲು ಕೆಕೆಆರ್ 2018 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 245 ರನ್ ಸಿಡಿಸಿತ್ತು. ಇದೀಗ ಆ ದಾಖಲೆಯನ್ನು ಮುರಿಯುವಲ್ಲಿ ಕೆಕೆಆರ್ ಯಶಸ್ವಿಯಾಗಿದೆ.
6 / 8
ಕೆಕೆಆರ್ನ ಈ ದಾಖಲೆಯ ಆಟದಲ್ಲಿ ತಂಡದ ಸ್ಟಾರ್ ಬ್ಯಾಟರ್ಗಳ ಕೊಡುಗೆ ಅಪಾರವಾಗಿತ್ತು. ಅದರಲ್ಲೂ ಆರಂಭಿಕರಾಗಿ ಕಣಕ್ಕಿಳಿದಿದ್ದ ಸುನಿಲ್ ನರೈನ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ತಂಡಕ್ಕೆ ಅದ್ಭುತ ಆರಂಭ ಒದಗಿಸಿದರು.
7 / 8
ನರೈನ್ ತಮ್ಮ ಇನ್ನಿಂಗ್ಸ್ನಲ್ಲಿ 39 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 85 ರನ್ ಕಲೆಹಾಕಿದರು. ಅವರಿಗೆ ಉತ್ತಮ ಸಾಥ್ ನೀಡಿದ ಆಂಗ್ಕ್ರಿಶ್ ರಘುವಂಶಿ ಆಡಿದ ಮೊದಲ ಪಂದ್ಯದಲ್ಲೇ 27 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 54 ರನ್ಗಳ ಕೊಡುಗೆ ನೀಡಿದರು.
8 / 8
ಇವರಿಬ್ಬರಲ್ಲದೆ ಆಂಡ್ರೆ ರಸೆಲ್ 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 41 ರನ್ ಬಾರಿಸಿದರೆ, ಕೆಳಕ್ರಮಾಂಕದಲ್ಲಿ ರಿಂಕು ಸಿಂಗ್ 8 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 26 ರನ್ ಸಿಡಿಸಿದರು.