AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಐಪಿಎಲ್​ನಿಂದ ಹೊರಬಿದ್ದ ಲಕ್ನೋ ತಂಡದ ಸ್ಟಾರ್ ವೇಗಿ..!

IPL 2024: ಐಪಿಎಲ್ 2024 ರಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಲೀಗ್ ಮಧ್ಯದಲ್ಲಿ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ವೇಗದ ಬೌಲರ್ ಶಿವಂ ಮಾವಿ ಇಡೀ ಲೀಗ್​ನಿಂದ ಹೊರಬಿದ್ದಿದ್ದಾರೆ.

ಪೃಥ್ವಿಶಂಕರ
|

Updated on: Apr 03, 2024 | 5:34 PM

Share
ಐಪಿಎಲ್ 2024 ರಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಲೀಗ್ ಮಧ್ಯದಲ್ಲಿ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ವೇಗದ ಬೌಲರ್ ಶಿವಂ ಮಾವಿ ಇಡೀ ಲೀಗ್​ನಿಂದ ಹೊರಬಿದ್ದಿದ್ದಾರೆ.

1 / 6
ಪಕ್ಕೆಲುಬಿನ ಗಾಯದಿಂದ ಇನ್ನು ಚೇತರಿಸಿಕೊಳ್ಳದ ಕಾರಣ ವೇಗದ ಬೌಲರ್ ಶಿವಂ ಮಾವಿ ಅವರನ್ನು ಟೂರ್ನಿಯಿಂದ ಹೊರಗಿಡಲಾಗಿದೆ ಎಂದು ತಿಳಿದುಬಂದಿದೆ. 2023ರ ಆಗಸ್ಟ್​ನಲ್ಲಿ ಈ ಇಂಜುರಿಗೆ ತುತ್ತಾಗಿದ್ದ ಮಾವಿ, ಲೀಗ್ ಆರಂಭದ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

2 / 6
ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಆಡಿದ್ದ ಶಿವಂ ಮಾವಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ಆ ನಂತರ ಮಿನಿಹರಾಜಿಗೂ ಮುನ್ನ ಮಾವಿ ಅವರನ್ನು ಗುಜರಾತ್ ತಂಡದಿಂದ ಬಿಡುಗಡೆಗೊಳಿಸಲಾಗಿತ್ತು. ಬಳಿಕ ನಡೆದ ಹರಾಜಿನಲ್ಲಿ ಲಕ್ನೋ, ಮಾವಿ ಅವರನ್ನು ಖರೀದಿಸಿತ್ತು.

3 / 6
ಮಿನಿಹರಾಜಿನಲ್ಲಿ ಬರೋಬ್ಬರಿ 6.4 ಕೋಟಿ ರೂಗಳಿಗೆ ಮಾವಿ ಅವರನ್ನು ಲಕ್ನೋ ತಂಡಕ್ಕೆ ಖರೀದಿ ಮಾಡಲಾಗಿತ್ತು. ಆವೇಶ್ ಖಾನ್ ಸ್ಥಾನವನ್ನು ತುಂಬುವ ಸಲುವಾಗಿ ಮಾವಿ ಅವರಿಗೆ ಈ ಮೊತ್ತ ನೀಡಿ, ಲಕ್ನೋ ಖರೀದಿಸಿತ್ತು. ಆದರೆ ಮಾವಿಗೆ ಲಕ್ನೋ ಪರ ಇದುವರೆಗೆ ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.

4 / 6
ಮಾವಿ ಅಲಭ್ಯತೆಯ ಬಗ್ಗೆ ಮಾಹಿತಿ ನೀಡಿರುವ ಲಕ್ನೋ ಫ್ರಾಂಚೈಸಿ, ‘ ಕಳೆದ ಡಿಸೆಂಬರ್​ನಲ್ಲಿ ನಡೆದ ಹರಾಜಿನಲ್ಲಿ ನಮ್ಮ ತಂಡ ಸೇರಿಕೊಂಡಿದ್ದ ಪ್ರತಿಭಾನ್ವಿತ ಬಲಗೈ ವೇಗದ ಬೌಲರ್ ಶಿವಂ ಮಾವಿ ಇದುವರೆಗೆ ನಮ್ಮ ತಂಡ ನಡೆಸಿದ್ದ ಶಿಬಿರದಲ್ಲಿ ಭಾಗಿಯಾಗಿದ್ದರು. ಈ ಸೀಸನ್​ನಲ್ಲಿ ಅವರು ತಮ್ಮ ತಂಡದ ಪ್ರಮುಖ ಆಟಗಾರರಾಗಿದ್ದರು. ಆದರೆ ಈಗ ಅವರ ಅಲಭ್ಯತೆಯಿಂದಾಗಿ ತಂಡ ನಿರಾಸೆಗೊಂಡಿದೆ. ಅವರಿಗೆ ಸೀಸನ್ ತುಂಬಾ ಬೇಗ ಮುಗಿದಿದೆ ಎಂದು ಬರೆದುಕೊಂಡಿದೆ.

5 / 6
ಲಕ್ನೋ ಸೂಪರ್ ಜೈಂಟ್ಸ್ ತಂಡ: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ದೇವದತ್ ಪಡಿಕ್ಕಲ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಕೃನಾಲ್ ಪಾಂಡ್ಯ, ಯುಧ್ವೀರ್ ಸಿಂಗ್, ಪ್ರೇರಕ್ ಮಂಕಡ್. ಯಶ್ ಠಾಕೂರ್, ಅಮಿತ್ ಮಿಶ್ರಾ, ಶಮರ್ ಜೋಸೆಫ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಕೆ. ಗೌತಮ್, ಅರ್ಶಿನ್ ಕುಲಕರ್ಣಿ, ಎಂ.ಸಿದ್ಧಾರ್ಥ್, ಆಷ್ಟನ್ ಟರ್ನರ್, ಮ್ಯಾಟ್ ಹೆನ್ರಿ, ಮೊಹಮ್ಮದ್ ಅರ್ಷದ್ ಖಾನ್.

6 / 6