
ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಹೊಸ ಆಟಗಾರನ ಆಗಮನವಾಗಿದೆ. ಇಂಗ್ಲೆಂಡ್‌ನ ಅನುಭವಿ ವೇಗದ ಬೌಲರ್ ಡೇವಿಡ್ ವಿಲ್ಲಿ ಇಡೀ ಲೀಗ್ನಿಂದಲೇ ಹೊರಬಿದ್ದಿದ್ದು, ಅವರ ಬದಲಿಯಾಗಿ ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ತಂಡ ಸೇರಿಕೊಂಡಿದ್ದಾರೆ.

ಆರಂಭದಲ್ಲಿ ಡೇವಿಡ್ ವಿಲ್ಲಿ ಪಂದ್ಯಾವಳಿಯ ಮೊದಲಾರ್ಧದಲ್ಲಿ ಮಾತ್ರ ಆಡುವುದಿಲ್ಲ ಎಂದು ಮೊದಲು ವರದಿಯಾಗಿತ್ತು. ಆದರೆ ಇದೀಗ ಅವರು ಸಂಪೂರ್ಣ ಐಪಿಎಲ್‌ನಿಂದಲೇ ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಬಂದಿದೆ.

ಹೀಗಾಗಿ ಬದಲಿ ಆಟಗಾರನನ್ನು ಹುಡುಕುತ್ತಿದ್ದ ಲಕ್ನೋ ಫ್ರಾಂಚೈಸ್ ಮ್ಯಾಟ್ ಹೆನ್ರಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇದರಿಂದ ತಂಡಕ್ಕೆ 75 ಲಕ್ಷ ರೂ ಉಳಿತಾಯವಾಗಿದೆ. ವಾಸ್ತವವಾಗಿ ವಿಲ್ಲಿಯನ್ನು 2 ಕೋಟಿ ಮೂಲ ಬೆಲೆಗೆ ಲಕ್ನೋ ಖರೀದಿಸಿತ್ತು. ಆದರೀಗ ಹೆನ್ರಿ ಅವರನ್ನು 1.25 ಲಕ್ಷ ರೂಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಲಕ್ನೋ ಸೇರುವುದಕ್ಕೂ ಮೊದಲು ಮ್ಯಾಟ್ ಹೆನ್ರಿ ಐಪಿಎಲ್ 2017 ರಲ್ಲಿ ಪಂಜಾಬ್ ಕಿಂಗ್ಸ್ ಪರ 2 ಪಂದ್ಯಗಳನ್ನು ಆಡಿದ್ದು ಅದರಲ್ಲಿ 1 ವಿಕೆಟ್ ಪಡೆದಿದ್ದಾರೆ. ಪಂಜಾಬ್ ಕಿಂಗ್ಸ್ ಹೊರತುಪಡಿಸಿ, ಹೆನ್ರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೂ ಕಾಣಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮ್ಯಾಟ್ ಹೆನ್ರಿ 25 ಟೆಸ್ಟ್, 82 ಏಕದಿನ ಮತ್ತು 17 ಟಿ20 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಅದರಲ್ಲಿ ಅವರು ಒಟ್ಟು 250 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ.

ಲಕ್ನೋ ಪೂರ್ಣ ತಂಡ: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ದೇವದತ್ ಪಡಿಕ್ಕಲ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಕೃನಾಲ್ ಪಾಂಡ್ಯ, ಯುದ್ಧವೀರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಶಮರ್ ಜೋಸೆಫ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಕೆ.ಗೌತಮ್, ಶಿವಂ ಮಾವಿ, ಅರ್ಶಿನ್ ಕುಲಕರ್ಣಿ, ಎಂ. ಸಿದ್ಧಾರ್ಥ್, ಆಶ್ಟನ್ ಟರ್ನರ್, ಮ್ಯಾಟ್ ಹೆನ್ರಿ, ಅರ್ಷದ್ ಖಾನ್.
Published On - 5:01 pm, Sat, 30 March 24