- Kannada News Photo gallery Cricket photos IPL 2024: Who are those two Iyer's who caused RCB's defeat; Siblings?
ಆರ್ಸಿಬಿ ಸೋಲಿಗೆ ಕಾರಣರಾದ ಆ ಇಬ್ಬರು ಅಯ್ಯರ್‌ಗಳು ಯಾರು; ಅಣ್ಣ-ತಮ್ಮಂದಿರೇ?
ನಿನ್ನೆ ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ನ ಆತಿಥೇಯ ತಂಡದ ಗೆಲುವಿನ ಟ್ರೆಂಡ್ ಕೊನೆಗೂ ಅಂತ್ಯಗೊಂಡಿದೆ. ತವರು ನೆಲದಲ್ಲಿ ಕೋಲ್ಕತ್ತಾ ವಿರುದ್ಧ ಆರ್ಸಿಬಿ ಮುಗ್ಗರಿಸಿದೆ. ಆರ್ಸಿಬಿಯ ಸೋಲಿಗೆ ಮತ್ತು ಕೋಲ್ಕತ್ತಾದ ಗೆಲುವಿಗೆ ಆ ಇಬ್ಬರು ಅಯ್ಯರ್‌ಗಳು ಕಾರಣರಾಗಿದ್ದಾರೆ. ಹಾಗಿದ್ರೆ ಯಾರವರು?
Updated on: Mar 30, 2024 | 8:21 PM

ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ನಲ್ಲಿ ಆತಿಥೇಯ ತಂಡದ ಗೆಲುವಿನ ಟ್ರೆಂಡ್ ಕೊನೆಗೂ ಅಂತ್ಯಗೊಂಡಿದೆ. ತವರು ನೆಲದಲ್ಲಿ ಕೋಲ್ಕತ್ತಾ ವಿರುದ್ಧ ಆರ್ಸಿಬಿ ಮುಗ್ಗರಿಸಿದೆ. ಆರ್ಸಿಬಿಯ ಸೋಲಿಗೆ ಮತ್ತು ಕೋಲ್ಕತ್ತಾದ ಗೆಲುವಿಗೆ ಆ ಇಬ್ಬರು ಅಯ್ಯರ್‌ಗಳು ಕಾರಣರಾಗಿದ್ದಾರೆ.

ಆ ಇಬ್ಬರು ವ್ಯಕ್ತಿಗಳು ಬೇರೆ ಯಾರು ಅಲ್ಲಾ. ಕೋಲ್ಕತ್ತಾ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಆಲ್ ರೌಂಡರ್ ವೆಂಕಟೇಶ್ ಅಯ್ಯರ್. ನಿನ್ನೆ ನಡೆದ ಪಂದ್ಯದಲ್ಲಿ ಇವರಿಬ್ಬರ ಉತ್ತಮ ಆಟವು ಗೆಲುವು ತಂದುಕೊಟ್ಟಿದೆ. ಹಾಗಿದ್ದರೆ ಅವರಿಬ್ಬರು ಯಾರು? ಅವರಿಗೆ ಇರುವ ಸಂಬಂಧವೇನು ಎಂದು ತಿಳಿಯೋಣ.

ಈ ಇಬ್ಬರು ಅಯ್ಯರ್‌ಗಳ ಬಗ್ಗೆ ಜನರಿಗೆ ಸಾಕಷ್ಟು ಗೊಂದಲು, ಪ್ರಶ್ನೆಗಳು ಕಾಡುತ್ತಿವೆ. ಇವರಿಬ್ಬರು ಸಹೋದರರೇ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಅಲ್ಲ. ಶ್ರೇಯಸ್ ಮಹಾರಾಷ್ಟ್ರದ ಚೆಂಬೂರಿನಲ್ಲಿ ಜನಿಸಿದರೆ, ವೆಂಕಟೇಶ್ ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ್ದಾರೆ. ಹಾಗಾಗಿ ಇವರಿಬ್ಬರು ಸಹೋದರರಲ್ಲ.

ಆದಾಗ್ಯೂ, ಇವರಿಬ್ಬರ ಮಧ್ಯೆ ಕೆಲ ಸಂತಿಗಳು ಸಾಮ್ಯತೆ ಪಡೆದುಕೊಂಡಿವೆ. ಇಬ್ಬರೂ ಆಟಗಾರರು ಒಂದೇ ತಿಂಗಳಲ್ಲಿ ಜನಿಸಿದ್ದಾರೆ. ಶ್ರೇಯಸ್ 6 ಡಿಸೆಂಬರ್ 1994 ರಂದು ಜನಿಸಿದರೆ, ವೆಂಕಟೇಶ್ 25 ಡಿಸೆಂಬರ್ 1994 ರಂದು ಜನಿಸಿದ್ದಾರೆ. ವೆಂಕಟೇಶ್ ಅವರಿಗಿಂತ ಶ್ರೇಯಸ್ 19 ದಿನ ದೊಡ್ಡವರಾಗಿದ್ದಾರೆ.

ಆರ್ಸಿಬಿ ವಿರುದ್ಧ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ 30 ಎಸೆತಗಳಲ್ಲಿ 50 ರನ್ ಗಳಿಸಿದರೆ, ವೆಂಕಟೇಶ್ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಆ ಮೂಲಕ ಉತ್ತಮ ಆಟವನ್ನು ಪ್ರದರ್ಶಿಸಿದರು.




