IPL 2024: ರೋಹಿತ್ ಶರ್ಮಾ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಹಾರ್ದಿಕ್ ಪಾಂಡ್ಯ..!
IPL 2024: 2024 ರ ಐಪಿಎಲ್ಗಾಗಿ ಮುಂಬೈ ತಂಡವನ್ನು ಸೇರಿಕೊಂಡಿರುವ ಮುಂಬೈ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಇದೇ ಮೊದಲ ಬಾರಿಗೆ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ಮೂಲಕ ಹಲವು ಊಹಪೋಹಗಳಿಗೆ ತೆರೆ ಎಳೆದಿದ್ದಾರೆ.
1 / 7
2024 ರ ಐಪಿಎಲ್ಗಾಗಿ ಮುಂಬೈ ತಂಡವನ್ನು ಸೇರಿಕೊಂಡಿರುವ ಮುಂಬೈ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಇದೇ ಮೊದಲ ಬಾರಿಗೆ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ಮೂಲಕ ಹಲವು ಊಹಪೋಹಗಳಿಗೆ ತೆರೆ ಎಳೆದಿದ್ದಾರೆ.
2 / 7
ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವ ಬೆನ್ನಲ್ಲೇ ಮಾಜಿ ನಾಯಕ ರೋಹಿತ್ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಹಾರ್ದಿಕ್, ರೋಹಿತ್ ಶರ್ಮಾ ನನಗೆ ಸಹಾಯ ಮಾಡಲು ಯಾವಾಗಲೂ ಇರುತ್ತಾರೆ. ಈ ತಂಡ ಇದುವರೆಗೆ ಏನೇ ಸಾಧನೆ ಮಾಡಿದ್ದರೂ ಅದು ರೋಹಿತ್ ಅವರ ನಾಯಕತ್ವದಲ್ಲೆ.
3 / 7
ಹೀಗಾಗಿ ಇನ್ನು ಮುಂದೆಯೂ ಅವರು ನನಗೆ ಹೆಗಲಾಗಿ ನಿಲ್ಲುತ್ತಾರೆ ಎಂಬ ಭರವಸೆ ಇದೆ. ಅಷ್ಟೇ ಅಲ್ಲ, ರೋಹಿತ್ ಶರ್ಮಾ ಭಾರತ ತಂಡದ ನಾಯಕ, ಇದು ಕೂಡ ನನಗೆ ಸಹಾಯ ಮಾಡುತ್ತದೆ. ರೋಹಿತ್ ನಾಯಕತ್ವದಲ್ಲೇ ನಾನು ನನ್ನ ಇಡೀ ವೃತ್ತಿಜೀವನ ನಡೆದಿದೆ. ಹೀಗಾಗಿ ಅವರ ಬೆಂಬಲ ನನಗೆ ಎಂದಿಗೂ ಇರುತ್ತದೆ ಎಂದು ಹಾರ್ದಿಕ್ ಹೇಳಿದ್ದಾರೆ.
4 / 7
ವಾಸ್ತವವಾಗಿ ಹಾರ್ದಿಕ್ ಪಾಂಡ್ಯ ತಮ್ಮ ಐಪಿಎಲ್ ವೃತ್ತಿಜೀವನ ಆರಂಭಿಸಿದ್ದೇ ಮುಂಬೈ ಇಂಡಿಯನ್ಸ್ ಪರವಾಗಿ. ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ ಹಾರ್ದಿಕ್ರನ್ನು ನಂತರ ಟೀಂ ಇಂಡಿಯಾಗೆ ಆಯ್ಕೆ ಮಾಡಲಾಯಿತು. ಅಲ್ಲದೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಭಾರತ ತಂಡದ ನಾಯಕತ್ವವನ್ನೂ ವಹಿಸಿಕೊಂಡರು.
5 / 7
ಆದರೆ 2022 ರ ಐಪಿಎಲ್ಗೂ ಮುನ್ನ ಮುಂಬೈ ತಂಡದಿಂದ ಹೊರಬಿದ್ದಿದ್ದ ಪಾಂಡ್ಯರನ್ನು ಗುಜರಾತ್ ಟೈಟಾನ್ಸ್ ಖರೀದಿಸಿತ್ತು. ಗುಜರಾತ್ ಪರ ಎರಡು ಆವೃತ್ತಿಗಳನ್ನು ಆಡಿದ ಪಾಂಡ್ಯ ತಮ್ಮ ನಾಯಕತ್ವದಲ್ಲಿ ಗುಜರಾತ್ ತಂಡವನ್ನು ಸತತ ಎರಡು ಬಾರಿ ಫೈನಲ್ಗೆ ಕೊಂಡೊಯ್ದಿದ್ದರು. ಇದರಲ್ಲಿ ಒಂದು ಬಾರಿ ಪ್ರಶಸ್ತಿಯನ್ನು ಜಯಿಸಿದ್ದರು.
6 / 7
ಇದೀಗ 17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಮತ್ತೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿರುವ ಪಾಂಡ್ಯಗೆ ತಂಡದ ನಾಯಕತ್ವವನ್ನು ನೀಡಲಾಗಿದೆ. ಏಕಾಏಕಿ ರೋಹಿತ್ ಶರ್ಮಾರನ್ನು ಕೆಳಗಿಳಿಸಿ ಪಾಂಡ್ಯಗೆ ನಾಯಕತ್ವ ನೀಡಿದ್ದರ ಬಗ್ಗೆ ರೋಹಿತ್ ಶರ್ಮಾ ಅಭಿಮಾನಿಗಳು ಮುಂಬೈ ಫ್ರಾಂಚೈಸಿ ವಿರುದ್ಧ ಕಿಡಿಕಾರಿದ್ದರು.
7 / 7
ಇದಕ್ಕೆ ಪೂರಕವಾಗಿ ಕೆಲವು ಕಾಕತಾಳೀಯ ಘಟನೆಗಳು ಸಂಭವಿಸಿದ್ದವು. ಪಾಂಡ್ಯ ತಂಡದ ನಾಯಕನಾದ ಬಳಿಕ ರೋಹಿತ್ ಹಾಗೂ ಪಾಂಡ್ಯ ನಡುವೆ ಸಂಬಂಧ ಅಳಸಿದೆ. ಹಾಗೆಯೇ ನಾಯಕತ್ವದ ಆಕಾಂಕ್ಷಿಯಾಗಿದ್ದ ಬುಮ್ರಾ ಕೂಡ ಪಾಂಡ್ಯ ವಿರುದ್ಧ ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೀಗ ಆ ಎಲ್ಲಾ ಊಹಪೋಹಗಳಿಗೆ ತೆರೆ ಎಳೆಯುವ ಕೆಲಸವನ್ನು ಪಾಂಡ್ಯ ಮಾಡಿದ್ದಾರೆ.