AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2024: W,0,W,W: ಆರ್​ಸಿಬಿ ಗೆಲುವಿಗೆ ಕಾರಣವಾಯ್ತು 8ನೇ ಓವರ್..!

WPL 2024 Final: ಡೆಲ್ಲಿ ತಂಡ ದಿಢೀರ್ ಕುಸಿತ ಕಾಣಲೂ ಪ್ರಮುಖ ಕಾರಣವೆಂದರೆ, ಆರ್​ಸಿಬಿ ಎಡಗೈ ಸ್ಪಿನ್ನರ್ ಸೋಫಿ ಮೊಲಿನೆಕ್ಸ್ ಮಾಡಿದ 8ನೇ ಓವರ್. ಈ ಓವರ್‌ನಲ್ಲಿ ಅವರು ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ನ ಬ್ಯಾಟಿಂಗ್ ಕ್ರಮಾಂಕ ಕುಸಿಯುವ ಪ್ರಕ್ರಿಯೆಗೆ ಚಾಲನೆ ನೀಡಿದರು.

ಪೃಥ್ವಿಶಂಕರ
|

Updated on: Mar 18, 2024 | 3:49 PM

ಸ್ಮೃತಿ ಮಂಧಾನ ನೇತೃತ್ವದ ಆರ್‌ಸಿಬಿ ಮಹಿಳಾ ಪಡೆ ಮಹಿಳೆಯರ ಪ್ರೀಮಿಯರ್ ಲೀಗ್‌ ಎರಡನೇ ಸೀಸನ್‌ನ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಉತ್ತಮ ಆರಂಭದ ಹೊರತಾಗಿಯೂ, ಆರ್‌ಸಿಬಿಯ ಸ್ಪಿನ್ನರ್‌ಗಳಿಗೆ ಬಲಿಯಾಗುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಈ ವರ್ಷವೂ ಪ್ರಶಸ್ತಿಯನ್ನು ಕಳೆದುಕೊಂಡಿತು.

1 / 8
ಕಳೆದ ವರ್ಷ ನಡೆದ ಪಂದ್ಯಾವಳಿಯ ಮೊದಲ ಸೀಸನ್​ನಲ್ಲೂ, ಡೆಲ್ಲಿ ಕ್ಯಾಪಿಟಲ್ಸ್ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತ್ತು. ಆರ್‌ಸಿಬಿ ಮಹಿಳಾ ತಂಡಕ್ಕೆ ಇದು ಮೊದಲ ಫೈನಲ್‌ ಆಗಿದ್ದು, ನಿಧಾನಗತಿಯ ಆರಂಭದ ನಂತರ ಒತ್ತಡವನ್ನು ನಿಭಾಯಿಸಿ ಕೊನೆಯಲ್ಲಿ ಜಯ ಸಾಧಿಸಿತು.

2 / 8
ವಾಸ್ತವವಾಗಿ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ (44 ರನ್) ಹಾಗೂ ನಾಯಕಿ ಮೆಗ್ ಲ್ಯಾನಿಂಗ್ (23 ರನ್) ಅವರ ನೆರವಿನಿಂದ 43 ಎಸೆತಗಳಲ್ಲಿ ವಿಕೆಟ್ ನಷ್ಟವಿಲ್ಲದೆ 64 ರನ್ ಗಳಿಸಿ ಶುಭಾರಂಭ ಮಾಡಿತು. ಆದರೆ ಇದಾದ ಬಳಿಕ ತಂಡವು ಕೇವಲ 49 ರನ್‌ಗಳಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಕಳೆದುಕೊಂಡಿತು.

3 / 8
ಅಷ್ಟಕ್ಕೂ ಡೆಲ್ಲಿ ತಂಡ ದಿಡೀರ್ ಕುಸಿತ ಕಾಣಲೂ ಪ್ರಮುಖ ಕಾರಣವೆಂದರೆ, ಆರ್​ಸಿಬಿ ಎಡಗೈ ಸ್ಪಿನ್ನರ್ ಸೋಫಿ ಮೊಲಿನೆಕ್ಸ್ ಮಾಡಿದ 8ನೇ ಓವರ್.  ಈ ಓವರ್‌ನಲ್ಲಿ ಅವರು ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ನ ಬ್ಯಾಟಿಂಗ್ ಕ್ರಮಾಂಕವನ್ನು ಕುಸಿಯುವ ಪ್ರಕ್ರಿಯೆಗೆ ಚಾಲನೆ ನೀಡಿದರು.

4 / 8
ಎಂಟನೇ ಓವರ್‌ನಲ್ಲಿ ಸೋಫಿ ಮೊಲಿನೆಕ್ಸ್, ಡೆಲ್ಲಿ ಓಪನರ್ ಶೆಫಾಲಿ, ಜೆಮಿಮಾ ರಾಡ್ರಿಗಸ್ ಮತ್ತು ಆಲಿಸ್ ಕ್ಯಾಪ್ಸೆ ಅವರನ್ನು ಔಟ್ ಮಾಡುವ ಮೂಲಕ ಒಂದೇ ಓವರ್​ನಲ್ಲಿ ಪ್ರಮುಖ ಮೂರು ವಿಕೆಟ್ ಪಡೆದರು. ವಾಸ್ತವವಾಗಿ, ಸೋಫಿಗೆ ಹ್ಯಾಟ್ರಿಕ್ ಪಡೆಯುವ ಅವಕಾಶವಿತ್ತು. ಆದರೆ ಅದಕ್ಕೆ ಕೇಪ್ ಅವಕಾಶ ಮಾಡಿಕೊಡಲಿಲ್ಲ.

5 / 8
ಆದರೆ ಹ್ಯಾಟ್ರಿಕ್ ಪಡೆಯದ ಹೊರತಾಗಿಯೂ ಸೋಫಿ ಮೊಲಿನೆಕ್ಸ್ ತಂಡದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡರು. ಏಕೆಂದರೆ ಈ ಓವರ್​ನಲ್ಲಿ ಎದುರಾದ ಆಘಾತದಿಂದ ಆತಿಥೇಯ ತಂಡ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ನಿಗದಿತ ಅಂತರದಲ್ಲಿ ವಿಕೆಟ್ಗಳನ್ನು ಕಳೆದುಕೊಂಡು ಫೈನಲ್‌ನಲ್ಲಿ ತತ್ತರಿಸಿತು.

6 / 8
ಇದೀಗ ಆರ್​ಸಿಬಿ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡಿರುವ ಸೋಫಿ ಮೊಲಿನೆಕ್ಸ್ ಯಾರು ಎಂಬುದನ್ನು ತಿಳಿದುಕೊಳ್ಳಲು ಅಂತರ್ಜಾಲದಲ್ಲಿ ಹುಡುಕಾಟ ಶುರುವಾಗಿದೆ. ವಾಸ್ತವವಾಗಿ ಸೋಫಿ ಮೊಲಿನೆಕ್ಸ್, ಎಲ್ಲಿಸ್ ಪೆರ್ರಿಯಂತೆಯೇ ಆಸ್ಟ್ರೇಲಿಯಾ ಮಹಿಳಾ ತಂಡದ ಆಟಗಾರ್ತಿಯಾಗಿದ್ದಾರೆ. ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ ಆಗಿರುವ ಸೋಫಿ 2019 ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು.

7 / 8
ನಂತರ 2018 ರಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯವನ್ನಾಡಿದರು. ಅದೇ ವರ್ಷ ಭಾರತದ ವಿರುದ್ಧ ಟಿ20ಗೂ ಪಾದಾರ್ಪಣೆ ಮಾಡಿದರು. ಆದರೆ ಆ ನಂತರ ಇಂಜುರಿಗೆ ತುತ್ತಾದ ಸೋಫಿ 2021 ರ ನಂತರ ಆಸ್ಟ್ರೇಲಿಯಾ ತಂಡದಿಂದ ಹೊರಗುಳಿದಿದ್ದಾರೆ. ಆದಾಗ್ಯೂ, ಡಬ್ಲ್ಯುಪಿಎಲ್​ನಲ್ಲಿ ಆರ್​ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ ಸೋಫಿ ಮೊಲಿನೆಕ್ಸ್ ಅವರ ವೃತ್ತಿಜೀವನಕ್ಕೆ ಹೊಸ ತಿರುವು ಸಿಗುವ ಸಾಧ್ಯತೆಗಳು ಹೆಚ್ಚಿವೆ.

8 / 8
Follow us