IPL 2024: ಒಂದು ಎಸೆತದ ಬೆಲೆ ಬರೋಬ್ಬರಿ 7.40 ಲಕ್ಷ ರೂ..!
TV9 Web | Updated By: ಝಾಹಿರ್ ಯೂಸುಫ್
Updated on:
Dec 23, 2023 | 9:28 AM
IPL 2024: 2018 ರಲ್ಲಿ ಮಿಚೆಲ್ ಸ್ಟಾರ್ಕ್ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ 9.40 ಕೋಟಿಗೆ ಕೆಕೆಆರ್ ತಂಡವೇ ಖರೀದಿಸಿತ್ತು. ಆದರೆ ಗಾಯದ ಕಾರಣ ಅವರು ಟೂರ್ನಿ ಆಡಿರಲಿಲ್ಲ. ಇದೀಗ ಮತ್ತೆ ಆಸೀಸ್ ವೇಗಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಕೆಕೆಆರ್ ಯಶಸ್ವಿಯಾಗಿದೆ.
1 / 6
ಆಸ್ಟ್ರೇಲಿಯಾ ತಂಡದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಈ ಬಾರಿಯ ಐಪಿಎಲ್ಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿಸಿದೆ. ಅದು ಕೂಡ ಬರೋಬ್ಬರಿ 24.75 ಕೋಟಿ ರೂ. ನೀಡುವ ಮೂಲಕ ಎಂಬುದು ವಿಶೇಷ. ಇದರೊಂದಿಗೆ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎಂಬ ಹಿರಿಮೆಗೆ ಸ್ಟಾರ್ಕ್ ಪಾತ್ರರಾಗಿದ್ದಾರೆ.
2 / 6
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಮಿಚೆಲ್ ಸ್ಟಾರ್ಕ್ ಆಲ್ರೌಂಡರ್ ಅಲ್ಲ ಎಂಬುದು. ಅಂದರೆ ಪ್ರಮುಖ ಬೌಲರ್ ಆಗಿಯೇ ಆಸೀಸ್ ವೇಗಿಯನ್ನು ದುಬಾರಿ ವೆಚ್ಚಕ್ಕೆ ಕೆಕೆಆರ್ ಖರೀದಿಸಿದೆ. ಅದರಂತೆ ಈ ಬಾರಿಯ ಐಪಿಎಲ್ನಲ್ಲಿ ಮಿಚೆಲ್ ಸ್ಟಾರ್ಕ್ 14 ಪಂದ್ಯಗಳನ್ನಾಡುವುದು ಬಹುತೇಕ ಖಚಿತ.
3 / 6
ಒಂದು ವೇಳೆ ಸ್ಟಾರ್ಕ್ 14 ಪಂದ್ಯಗಳಲ್ಲಿ ಕಣಕ್ಕಿಳಿದರೆ ಅವರ ಪ್ರತಿ ಎಸೆತದ ಬೆಲೆ 7.40 ಲಕ್ಷ ರೂ. ಅಂದರೆ 14 ಪಂದ್ಯಗಳಲ್ಲಿ ಅವರು ತಲಾ 4 ಓವರ್ಗಳಂತೆ ಒಟ್ಟು 336 ಎಸೆತಗಳನ್ನು ಎಸೆಯಲಿದ್ದಾರೆ. ಇಲ್ಲಿ ಪ್ರತಿ ಬಾಲ್ಗೆ ಸ್ಟಾರ್ಕ್ 7.40 ಲಕ್ಷ ರೂ. ಪಡೆಯಲಿದ್ದಾರೆ.
4 / 6
ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಫೈನಲ್ ತಲುಪಿದರೆ, ಮಿಚೆಲ್ ಸ್ಟಾರ್ಕ್ ಗರಿಷ್ಠ 17 ಪಂದ್ಯಗಳನ್ನು ಆಡಬಹುದು. ಅಂದರೆ ಅವರು 408 ಎಸೆತಗಳನ್ನು ಬೌಲ್ ಮಾಡಬಹುದು. ಅದರಂತೆ ಕೆಕೆಆರ್ ಫೈನಲ್ಗೆ ಆಡಿದ್ರೆ ಮಿಚೆಲ್ ಸ್ಟಾರ್ಕ್ ಅವರ 1 ಎಸೆತದ ಬೆಲೆ 6.1 ಲಕ್ಷ ರೂ. ಆಗಿರಲಿದೆ.
5 / 6
ಒಟ್ಟಿನಲ್ಲಿ ಐಪಿಎಲ್ ಇತಿಹಾಸ ದುಬಾರಿ ಆಟಗಾರ ಎನಿಸಿಕೊಂಡಿರುವ ಮಿಚೆಲ್ ಸ್ಟಾರ್ಕ್ ಲಕ್ಷಗಳ ಎಸೆತಗಳೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಎಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಡಲಿದ್ದಾರೆ ಕಾದು ನೋಡಬೇಕಿದೆ.
6 / 6
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಝ್, ಜೇಸನ್ ರಾಯ್, ಅನುಕುಲ್ ರಾಯ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಸುಯ್ಯಾಶ್ ಶರ್ಮಾ, ಹರ್ಷಿತ್ ರಾಣಾ, ಸುನಿಲ್ ನರೈನ್, ವೈಭವ್ ಅರೋರಾ ಮತ್ತು ವರುಣ್ ಚಕ್ರವರ್ತಿ, ಕೆಎಸ್ ಭರತ್,