IPL 2024: ಮೊಹಮ್ಮದ್ ಶಮಿಗೆ ತೆರೆಮರೆಯಲ್ಲೇ ಬಿಗ್ ಆಫರ್..!
TV9 Web | Updated By: ಝಾಹಿರ್ ಯೂಸುಫ್
Updated on:
Dec 06, 2023 | 8:28 PM
IPL 2024 Auction: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ನಡೆಯಲಿದೆ. ದುಬೈನಲ್ಲಿ ಜರುಗಲಿರುವ ಈ ಬಿಡ್ಡಿಂಗ್ಗಾಗಿ ಒಟ್ಟು 1166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಕೇವಲ 77 ಆಟಗಾರರಿಗೆ ಮಾತ್ರ ಈ ಬಾರಿಯ ಐಪಿಎಲ್ನಲ್ಲಿ ಅವಕಾಶ ದೊರೆಯಲಿದೆ.
1 / 7
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಹರಾಜಿಗೂ ಮುನ್ನ ಮತ್ತೊಂದು ಬಿಗ್ ಟ್ರೇಡ್ ನಡೆಯುವ ಸಾಧ್ಯತೆಯಿದೆ. ಏಕೆಂದರೆ ಗುಜರಾತ್ ಟೈಟಾನ್ಸ್ ತಂಡದ ಬೌಲರ್ ಮೊಹಮ್ಮದ್ ಶಮಿಯನ್ನು ಟ್ರೇಡ್ ಮಾಡಲು ಫ್ರಾಂಚೈಸಿಯೊಂದು ಆಸಕ್ತಿ ತೋರಿದೆ.
2 / 7
ಐಪಿಎಲ್ ಫ್ರಾಂಚೈಸಿಯೊಂದು ಮೊಹಮ್ಮದ್ ಶಮಿಗೆ ಬಿಗ್ ಆಫರ್ ನೀಡಿದ್ದು, ಇದನ್ನು ಖುದ್ದು ಗುಜರಾತ್ ಟೈಟಾನ್ಸ್ ತಂಡದ ಸಿಇಒ ಕರ್ನಲ್ ಅರವಿಂದರ್ ಸಿಂಗ್ ಖಚಿತಪಡಿಸಿದ್ದಾರೆ. ಹೀಗಾಗಿ ಶಮಿ ಬೇರೊಂದು ತಂಡಕ್ಕೆ ಟ್ರೇಡ್ ಆದರೂ ಅಚ್ಚರಿಪಡಬೇಕಿಲ್ಲ.
3 / 7
ಈ ಬಗ್ಗೆ ಮಾತನಾಡಿರುವ ಗುಜರಾತ್ ಟೈಟಾನ್ಸ್ ತಂಡದ ಸಿಇಒ ಕರ್ನಲ್ ಅರವಿಂದರ್ ಸಿಂಗ್, ಮೊಹಮ್ಮದ್ ಶಮಿ ಅವರನ್ನು ಐಪಿಎಲ್ ಫ್ರಾಂಚೈಸಿಯೊಂದು ಸಂಪರ್ಕಿಸಿರುವುದು ನಿಜ. ಆದರೆ ಈ ವಿಧಾನವು ಐಪಿಎಲ್ ವಹಿವಾಟಿಗೆ ಬಿಸಿಸಿಐ ನಿಗದಿಪಡಿಸಿದ ನಿಯಮಗಳಿಗೆ ವಿರುದ್ಧವಾಗಿದೆ ಹೇಳಿದ್ದಾರೆ. ಇದಾಗ್ಯೂ ಅವರು ಸಂಪರ್ಕಿಸಿರುವ ತಂಡವನ್ನು ಬಹಿರಂಗಪಡಿಸಿಲ್ಲ.
4 / 7
ಇತ್ತ ಈಗಾಗಲೇ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮೂಲಕ ಖರೀದಿಸಿದೆ. ಇದೀಗ ಮೊಹಮ್ಮದ್ ಶಮಿ ಮೇಲೂ ಕೆಲ ತಂಡಗಳು ಕಣ್ಣಿಟ್ಟಿರುವುದು ಗುಜರಾತ್ ಟೈಟಾನ್ಸ್ ತಂಡದ ಚಿಂತೆಯನ್ನು ಹೆಚ್ಚಿಸಿದೆ.
5 / 7
ಒಟ್ಟಿನಲ್ಲಿ ಐಪಿಎಲ್ ಟ್ರೇಡ್ ಪ್ರಕ್ರಿಯೆಗೆ ಡಿಸೆಂಬರ್ 12 ರವರೆಗೆ ಸಮಯವಕಾಶವಿದ್ದು, ಇದರ ನಡುವೆ ಮೊಹಮ್ಮದ್ ಶಮಿ ಅವರೊಂದಿಗೆ ಡೀಪ್ ಕುದುರಿಸಲು ಫ್ರಾಂಚೈಸಿಯೊಂದು ಸತತ ಪ್ರಯತ್ನದಲ್ಲಿದೆ. ಈ ಪ್ರಯತ್ನ ಯಶಸ್ವಿಯಾದರೆ ಶಮಿ ಹರಾಜಿಗೂ ಮುನ್ನ ಹೊಸ ತಂಡದ ಪಾಲಾಗಬಹುದು.
6 / 7
ಅಂದಹಾಗೆ ಕಳೆದ ಸೀಸನ್ ಐಪಿಎಲ್ನಲ್ಲಿ ಮೊಹಮ್ಮದ್ ಶಮಿ ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದರು. 17 ಪಂದ್ಯಗಳಿಂದ 28 ವಿಕೆಟ್ ಕಬಳಿಸಿ ಗುಜರಾತ್ ಟೈಟಾನ್ಸ್ ತಂಡವು ಫೈನಲ್ಗೆ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಷ್ಟೇ ಅಲ್ಲದೆ ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ 24 ವಿಕೆಟ್ ಕಬಳಿಸಿ ಟೂರ್ನಿಯ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. ಇದೇ ಕಾರಣದಿಂದ ಶಮಿಯನ್ನು ಟ್ರೇಡ್ ಮಾಡಲು ಕೆಲ ಫ್ರಾಂಚೈಸಿಗಳು ಆಸಕ್ತಿ ಹೊಂದಿದೆ.
7 / 7
ಗುಜರಾತ್ ಟೈಟಾನ್ಸ್ ತಂಡ ಉಳಿಸಿಕೊಂಡಿರುವ ಆಟಗಾರರು: ಡೇವಿಡ್ ಮಿಲ್ಲರ್, ಶುಭ್ಮನ್ ಗಿಲ್ (ನಾಯಕ), ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಸಾಯಿ ಕಿಶೋರ್, ರಶೀದ್ ಖಾನ್, ಜೋಶುವಾ ಲಿಟಲ್, ಮೋಹಿತ್ ಶರ್ಮಾ, ಮೊಹಮ್ಮದ್ ಶಮಿ.