IPL 2024: ಸ್ಫೋಟಕ ದಾಂಡಿಗರೆದುರು ಕಮಾಲ್ ಮಾಡಿದ ಮೋಹಿತ್ ಶರ್ಮಾ..!

|

Updated on: Mar 31, 2024 | 7:33 PM

IPL 2024: ಈ ಪಂದ್ಯದಲ್ಲಿ ಮೋಹಿತ್ ತಮ್ಮ ನಾಲ್ಕು ಓವರ್ ಸ್ಪೆಲ್​ನಲ್ಲಿ ಕೇವಲ 25 ರನ್ ನೀಡಿ 3 ವಿಕೆಟ್ ಪಡೆದರು. ಮೋಹಿತ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ, ಶಹಬಾಜ್ ಅಹ್ಮದ್ ಮತ್ತು ವಾಷಿಂಗ್ಟನ್ ಸುಂದರ್ ಅವರ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.

1 / 8
ತವರು ನೆಲದಲ್ಲಿ ನಡೆದ ಐಪಿಎಲ್ 12ನೇ ಪಂದ್ಯದಲ್ಲಿ ಬಲಿಷ್ಠ ಹೈದರಾಬಾದ್‌ ತಂಡವನ್ನು ಮಣಿಸಿದ ಗುಜರಾತ್ ಮತ್ತೆ ತನ್ನ ಗೆಲುವಿನ ಲಯಕ್ಕೆ ಮರಳಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಕೇವಲ 162 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

2 / 8
ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಹೈದರಾಬಾದ್‌ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಗುಜರಾತ್ ಬೌಲರ್​ಗಳು ಯಶಸ್ವಿಯಾದರು. ಅದರಲ್ಲೂ ಗುಜರಾತ್ ಪರ ಡೆತ್​ ಓವರ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಮೋಹಿತ್ ಶರ್ಮಾ, ಹೈದರಾಬಾದ್ ಬ್ಯಾಟರ್​ಗಳಿಗೆ ಚಳ್ಳೆ ಹಣ್ಣು ತಿನಿಸಿದರು.

3 / 8
ವಾಸ್ತವವಾಗಿ ಗುಜರಾತ್ ಟೈಟಾನ್ಸ್ ತಂಡದ ಅನುಭವಿ ಬೌಲರ್​ಗಳಲ್ಲಿ ಒಬ್ಬರಾಗಿರುವ ಮೋಹಿತ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​ನಲ್ಲಿ ತಮ್ಮ ಮಾರಕ ಬೌಲಿಂಗ್ ಮೂಲಕ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಡೆತ್ ಓವರ್‌ಗಳಲ್ಲಿ ಮೋಹಿತ್ ತಮ್ಮ ನಿಧಾನಗತಿಯ ಎಸೆತದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಬೆದರಿಕೆಯೊಡ್ಡಿದ್ದಾರೆ.

4 / 8
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲೂ ಮೋಹಿತ್ ಇದೇ ರೀತಿ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಮೋಹಿತ್ ತಮ್ಮ ನಾಲ್ಕು ಓವರ್ ಸ್ಪೆಲ್​ನಲ್ಲಿ ಕೇವಲ 25 ರನ್ ನೀಡಿ 3 ವಿಕೆಟ್ ಪಡೆದರು. ಮೋಹಿತ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ, ಶಹಬಾಜ್ ಅಹ್ಮದ್ ಮತ್ತು ವಾಷಿಂಗ್ಟನ್ ಸುಂದರ್ ಅವರ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.

5 / 8
ಮೋಹಿತ್ ಶರ್ಮಾ ಮೊದಲ ಓವರ್‌ನಲ್ಲಿ ಕೇವಲ 5 ಸಿಂಗಲ್ಸ್ ನೀಡಿ 1 ವಿಕೆಟ್ ಪಡೆದರು. ಬಳಿಕ ತಮ್ಮ ಎರಡನೇ ಓವರ್‌ನಲ್ಲಿ 7 ರನ್ ಬಿಟ್ಟುಕೊಟ್ಟರು. ಮೂರನೇ ಓವರ್‌ನಲ್ಲಿ ಮೋಹಿತ್ ಸ್ವಲ್ಪ ದುಬಾರಿಯಾಗಿ 1 ಸಿಕ್ಸರ್ ಸೇರಿದಂತೆ ಒಟ್ಟು 10 ರನ್ ನೀಡಿದರು. ಬಳಿಕ ತಮ್ಮ ಕೊನೆಯ ಓವರ್‌ನಲ್ಲಿ ಕೇವಲ 3 ರನ್​ಗಳನಷ್ಟೇ ನೀಡಿದರು.

6 / 8
ವಿಶೇಷವೆಂದರೆ ಮೋಹಿತ್ ವಿರುದ್ಧ ಯಾವುದೇ ಹೈದರಾಬಾದ್ ಬ್ಯಾಟ್ಸ್‌ಮನ್ 1 ಬೌಂಡರಿ ಕೂಡ ಬಾರಿಸಲಿಲ್ಲ. ಅಬ್ದುಲ್ ಸಮದ್ ಮಾತ್ರ ಒಂದೇ ಒಂದು ಸಿಕ್ಸರ್ ಬಾರಿಸಿದರು.

7 / 8
ಗುಜರಾತ್ ಬೌಲರ್​ಗಳ ಕೌಶಲ್ಯಯುತ ಬೌಲಿಂಗ್​ನ ಪ್ರಭಾವ ಹೇಗಿತ್ತೆಂದರೆ, ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ 19 ಬೌಂಡರಿ ಹಾಗೂ 18 ಸಿಕ್ಸರ್ ಬಾರಿಸಿದ್ದ ಹೈದರಾಬಾದ್‌ ಬ್ಯಾಟರ್ಸ್​ಗಳು, ಗುಜರಾತ್ ವಿರುದ್ಧ 12 ಬೌಂಡರಿ ಹಾಗೂ 6 ಸಿಕ್ಸರ್​ಗಳನಷ್ಟೇ ಸಿಡಿಸಲು ಶಕ್ತರಾದರು.

8 / 8
ಗುಜರಾತ್ ಟೈಟಾನ್ಸ್ ಗೆಲುವಿನಲ್ಲಿ ಮೋಹಿತ್ ಶರ್ಮಾ ಹೊರತಾಗಿ ನೂರ್ ಅಹ್ಮದ್, ರಶೀದ್ ಖಾನ್, ಉಮೇಶ್ ಯಾದವ್ ಮತ್ತು ಅಜ್ಮತುಲ್ಲಾ ಉಮರ್ಜಾಯ್ ಕೂಡ ತಲಾ 1 ವಿಕೆಟ್ ಪಡೆದಿದ್ದಲ್ಲದೆ, ಹೈದರಾಬಾದ್‌ ಬ್ಯಾಟರ್​ಗಳನ್ನು ಬಿಗ್ ಸ್ಕೋರ್ ಮಾಡದಂತೆ ತಡೆದರು.