IPL 2024: CSK ತಂಡಕ್ಕೆ ಕನ್ನಡಿಗ ಆರಂಭಿಕ

| Updated By: ಝಾಹಿರ್ ಯೂಸುಫ್

Updated on: Mar 04, 2024 | 11:07 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಐಪಿಎಲ್​ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರ ಮೊದಲಾರ್ಧದಿಂದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸ್ಟಾರ್ ಆಟಗಾರ ಡೆವೊನ್ ಕಾನ್ವೆ (Devon Conway) ಹೊರಗುಳಿಯಲಿದ್ದಾರೆ. ಎಡಗೈ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿರುವ ಕಾನ್ವೆ ಈ ವಾರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ಐಪಿಎಲ್​ನ ಮೊದಲಾರ್ಧದಲ್ಲಿ ಅವರು ಕಾಣಿಸಿಕೊಳ್ಳುವುದಿಲ್ಲ.

2 / 6
ಇತ್ತ ಡೆವೊನ್ ಕಾನ್ವೆ ಹೊರಗುಳಿಯಲಿರುವ ಸುದ್ದಿ ಬೆನ್ನಲ್ಲೇ ಈ ಬಾರಿ ಸಿಎಸ್​ಕೆ ಪರ ಆರಂಭಿಕರಾಗಿ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಕಳೆದ ಎರಡು ಸೀಸನ್​ಗಳಿಂದ ಚೆನ್ನೈ ಸೂಪರ್ ಕಿಂಗ್ಸ್​ ಪರ ರುತುರಾಜ್ ಗಾಯಕ್ವಾಡ್ ಹಾಗೂ ಡೆವೊನ್ ಕಾನ್ವೆ ಇನಿಂಗ್ಸ್ ಆರಂಭಿಸಿದ್ದರು.

3 / 6
ಇದೀಗ ಕಾನ್ವೆ ಅನುಪಸ್ಥಿತಿಯಲ್ಲಿ ರುತುರಾಜ್ ಜೊತೆ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆ ಮೂಡಿದೆ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ರಚಿನ್ ರವೀಂದ್ರ. ಕರ್ನಾಟಕ ಮೂಲದ ನ್ಯೂಝಿಲೆಂಡ್ ಕ್ರಿಕೆಟಿಗ ರಚಿನ್ ಅವರನ್ನು ಈ ಬಾರಿಯ ಹರಾಜಿನಲ್ಲಿ ಸಿಎಸ್​ಕೆ 1.8 ಕೋಟಿ ರೂ.ಗೆ ಖರೀದಿಸಿದೆ.

4 / 6
ಅತ್ತ ನ್ಯೂಝಿಲೆಂಡ್ ಪರ ಏಕದಿನ ವಿಶ್ವಕಪ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ರಚಿನ್ ರವೀಂದ್ರ 565 ರನ್ ಬಾರಿಸಿ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಡೆವೊನ್ ಕಾನ್ವೆ ಅನುಪಸ್ಥಿತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪರ ರಚಿನ್ ರವೀಂದ್ರ ಆರಂಭಿಕನಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದೇ ಹೇಳಬಹುದು.

5 / 6
ಈ ಮೂಲಕ ಮತ್ತೊಮ್ಮೆ ಸಿಎಸ್​ಕೆ ತಂಡವು ರೈಟ್ ಅ್ಯಂಡ್ ಲೆಫ್ಟ್ ಕಾಂಬಿನೇಷನ್​ನಲ್ಲಿ ಇನಿಂಗ್ಸ್​ ಆರಂಭಿಸಬಹುದು. ಅಂದರೆ ಈ ಹಿಂದೆ ಎಡಗೈ ದಾಂಡಿಗ ಡೆವೊನ್ ಕಾನ್ವೆ ಹಾಗೂ ಬಲಗೈ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಇನಿಂಗ್ಸ್ ಆರಂಭಿಸುತ್ತಿದ್ದರು. ಇದೀಗ ಕಾನ್ವೆಯ ಅಲಭ್ಯತೆಯ ನಡುವೆ ಆರಂಭಿಕನಾಗಿ ಎಡಗೈ ದಾಂಡಿಗನಾಗಿ ರಚಿನ್ ರವೀಂದ್ರ ಅವರು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

6 / 6
ಚೆನ್ನೈ ಸೂಪರ್ ಕಿಂಗ್ಸ್ ತಂಡ​​: ಎಂಎಸ್ ಧೋನಿ (ನಾಯಕ), ಮೊಯೀನ್ ಅಲಿ, ದೀಪಕ್ ಚಹರ್, ಡೆವೊನ್ ಕಾನ್ವೇ, ತುಷಾರ್ ದೇಶಪಾಂಡೆ, ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಮಥೀಶ ಪತಿರಾನಾ, ಅಜಿಂಕ್ಯ ರಹಾನೆ, ಶೇಕ್ ಸಿಂಘೆಲ್ ರಷೀದ್, ಎಂ. , ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ಅವನೀಶ್ ರಾವ್, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಅವನೀಶ್ ರಾವ್ ಅರವೆಲ್ಲಿ.