IPL 2024: ಆರ್‌ಸಿಬಿ- ಪಂಜಾಬ್ ಫೈಟ್; ವಿಶೇಷ ದಾಖಲೆಗಳ ಮೇಲೆ ಕಣ್ಣಿಟ್ಟ ಕೊಹ್ಲಿ, ಧವನ್, ಡಿಕೆ..!
IPL 2024: ಐಪಿಎಲ್ 17ನೇ ಆವೃತ್ತಿಯ ಆರನೇ ಪಂದ್ಯ ಆರ್ಸಿಬಿಯ ತವರು ಮೈದಾನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ದೊಡ್ಡ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ. ಅದೇ ಸಮಯದಲ್ಲಿ ದಿನೇಶ್ ಕಾರ್ತಿಕ್ ಕೂಡ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆ ಬರೆಯುವ ಹೊಸ್ತಿಲಿನಲ್ಲಿದ್ದಾರೆ.
1 / 7
ಐಪಿಎಲ್ 2024 ರ ಆರನೇ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ. ಎರಡು ತಂಡಗಳ ನಡುವೆ ತೀವ್ರ ಹಣಾಹಣಿ ನಡೆಯುವ ಸಾಧ್ಯತೆಗಳಿವೆ. ಏಕೆಂದರೆ ಆರ್‌ಸಿಬಿ ತನ್ನ ಮೊದಲ ಗೆಲುವಿನ ಮೇಲೆ ಕಣ್ಣಿಟ್ಟಿದ್ದರೆ, ಪಂಜಾಬ್ ಲೀಗ್‌ನಲ್ಲಿ ತನ್ನ ಸತತ ಎರಡನೇ ಗೆಲುವಿನ ಗುರಿ ಹೊಂದಿದೆ.
2 / 7
ಐಪಿಎಲ್ 17ನೇ ಆವೃತ್ತಿಯ ಆರನೇ ಪಂದ್ಯ ಆರ್ಸಿಬಿಯ ತವರು ಮೈದಾನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ದೊಡ್ಡ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ. ಅದೇ ಸಮಯದಲ್ಲಿ ದಿನೇಶ್ ಕಾರ್ತಿಕ್ ಕೂಡ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆ ಬರೆಯುವ ಹೊಸ್ತಿಲಿನಲ್ಲಿದ್ದಾರೆ.
3 / 7
ಈ ಪಂದ್ಯದಲ್ಲಿ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ 7 ಬೌಂಡರಿಗಳನ್ನು ಬಾರಿಸಿದರೆ ಐಪಿಎಲ್‌ನಲ್ಲಿ 650 ಬೌಂಡರಿಗಳನ್ನು ಪೂರೈಸಿದ ದಾಖಲೆ ಬರೆಯಲ್ಲಿದ್ದಾರೆ. ಕೊಹ್ಲಿ ಐಪಿಎಲ್‌ನಲ್ಲಿ ಇದುವರೆಗೆ 238 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಏಳು ಶತಕ ಮತ್ತು 50 ಅರ್ಧ ಶತಕಗಳ ಸಹಾಯದಿಂದ 7284 ರನ್ ಗಳಿಸಿದ್ದಾರೆ.
4 / 7
ಆರ್ಸಿಬಿಯ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಕೂಡ ಐಪಿಎಲ್‌ನಲ್ಲಿ 150 ಸಿಕ್ಸರ್ ಸಿಡಿಸಿದ ದಾಖಲೆ ಸೃಷ್ಟಿಸುವ ಸನಿಹದಲ್ಲಿದ್ದಾರೆ. ಈ ದಾಖಲೆ ಬರೆಯಲು ಡಿಕೆಗೆ ಇನ್ನು ಏಳು ಸಿಕ್ಸರ್‌ಗಳು ಬೇಕಾಗಿವೆ. ಒಂದೇ ಪಂದ್ಯದಲ್ಲಿ 7 ಸಿಕ್ಸರ್ ಸಿಡಿಸುವುದು ಕಷ್ಟವಾಗಿದ್ದರೂ, ಕಾರ್ತಿಕ್ ಅದ್ಭುತ ಪಾರ್ಮ್ನಲ್ಲಿರುವುದರಿಂದ ಯಾವುದು ಅಸಾಧ್ಯವಲ್ಲ.
5 / 7
ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 150 ಸಿಕ್ಸರ್‌ಗಳನ್ನು ಪೂರೈಸುವ ಅವಕಾಶ ಹೊಂದಿದ್ದಾರೆ. ಅದಕ್ಕೆ ಧವನ್ಗೆ ಬೇಗಾಗಿರುವುದು ಕೇವಲ 2 ಸಿಕ್ಸರ್‌ಗಳು ಮಾತ್ರ. ಧವನ್ ಅವರ ಈಗಿನ ಫಾರ್ಮ್ ನೋಡಿದರೆ ಈ ಪಂದ್ಯದಲ್ಲೇ ಗಬ್ಬರ್ ಈ ಸಾಧನೆ ಮಾಡಬಹುದಾಗಿದೆ.
6 / 7
ಐಪಿಎಲ್‌ನಲ್ಲಿ ಇದುವರೆಗೆ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ 31 ಪಂದ್ಯಗಳು ನಡೆದಿವೆ. ಈ ಪೈಕಿ ಆರ್‌ಸಿಬಿ 14 ಪಂದ್ಯಗಳನ್ನು ಗೆದ್ದಿದ್ದರೆ, ಪಂಜಾಬ್ 17 ಪಂದ್ಯಗಳನ್ನು ಗೆದ್ದಿದೆ.
7 / 7
ಅದೇ ಸಮಯದಲ್ಲಿ, ಬೆಂಗಳೂರಿನಲ್ಲಿ ಉಭಯ ತಂಡಗಳ ನಡುವೆ 11 ಪಂದ್ಯಗಳು ನಡೆದಿವೆ. ಇದರಲ್ಲಿ ಆರ್‌ಸಿಬಿ 6 ಮತ್ತು ಪಂಜಾಬ್ ಐದರಲ್ಲಿ ಗೆದ್ದಿದೆ. ಒಟ್ಟಾರೆ ಅಂಕಿಅಂಶಗಳನ್ನು ಗಮನಿಸಿದರೆ, ಆರ್‌ಸಿಬಿ ವಿರುದ್ಧ ಪಂಜಾಬ್ ಮೇಲುಗೈ ಸಾಧಿಸಿದೆ. ತವರು ನೆಲದಲ್ಲಿ ಆರ್‌ಸಿಬಿ, ಪಂಜಾಬ್ ವಿರುದ್ಧ ಹೆಚ್ಚು ಬಾರಿ ಗೆಲುವಿನ ರುಚಿ ಕಂಡಿರುವುದು ಸಮಾಧಾನಕರ ಸಂಗತಿಯಾಗಿದೆ.