IPL 2024: ಪಂಜಾಬ್ ವಿರುದ್ಧ ಐತಿಹಾಸಿಕ ಪಂದ್ಯವನ್ನಾಡಲಿದ್ದಾರೆ ರೋಹಿತ್ ಶರ್ಮಾ..!

Updated on: Apr 18, 2024 | 4:41 PM

IPL 2024: ಪಂಜಾಬ್ ಕಿಂಗ್ಸ್ ವಿರುದ್ಧದ ಇಂದಿನ ಪಂದ್ಯ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾಗೆ ಐಪಿಎಲ್​ನಲ್ಲಿ 250ನೇ ಪಂದ್ಯವಾಗಿದೆ. ಈ ಮೂಲಕ ರೋಹಿತ್ ಐಪಿಎಲ್‌ನಲ್ಲಿ 250 ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

1 / 7
ಐಪಿಎಲ್​ 2024 ರ 33 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿವೆ. ಪಂಜಾಬ್‌ನ ತವರು ಮೈದಾನ ಮುಲ್ಲನ್‌ಪುರದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅಪರೂಪದ ದಾಖಲೆ ಬರೆಯಲಿದ್ದಾರೆ.

ಐಪಿಎಲ್​ 2024 ರ 33 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿವೆ. ಪಂಜಾಬ್‌ನ ತವರು ಮೈದಾನ ಮುಲ್ಲನ್‌ಪುರದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅಪರೂಪದ ದಾಖಲೆ ಬರೆಯಲಿದ್ದಾರೆ.

2 / 7

ಪಂಜಾಬ್ ಕಿಂಗ್ಸ್ ವಿರುದ್ಧದ ಇಂದಿನ ಪಂದ್ಯ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾಗೆ ಐಪಿಎಲ್​ನಲ್ಲಿ 250ನೇ ಪಂದ್ಯವಾಗಿದೆ. ಈ ಮೂಲಕ ರೋಹಿತ್ ಐಪಿಎಲ್‌ನಲ್ಲಿ 250 ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

3 / 7

ರೋಹಿತ್ ಶರ್ಮಾಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಈ ಸಾಧನೆ ಮಾಡಿದ್ದರು. ಐಪಿಎಲ್‌ನಲ್ಲಿ 250ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಪಟ್ಟಿಯಲ್ಲಿ ಪ್ರಸ್ತುತ ಎಂಎಸ್ ಧೋನಿ ಮಾತ್ರ ಮೊದಲಿಗರಾಗಿದ್ದಾರೆ.

4 / 7

ಇದುವರೆಗೆ ಧೋನಿ ಐಪಿಎಲ್‌ನಲ್ಲಿ 256 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ತಮ್ಮ ನಾಯಕತ್ವದಲ್ಲಿ ತಮ್ಮ ತಂಡವನ್ನು 5 ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದಾರೆ. ಈಗ ಎಂಎಸ್ ಧೋನಿ ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಸಿಎಸ್‌ಕೆ ಪರ ಆಡುತ್ತಿದ್ದರೆ, ರೋಹಿತ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡುತ್ತಿದ್ದಾರೆ.

5 / 7

ರೋಹಿತ್ ಶರ್ಮಾ ಇದುವರೆಗೆ ಐಪಿಎಲ್‌ನಲ್ಲಿ 249 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 6472 ರನ್ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಔಟಾಗದೆ 109 ರನ್ ಗಳಿಸಿರುವುದು ರೋಹಿತ್ ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಇದಲ್ಲದೇ ಐಪಿಎಲ್ 2024ರಲ್ಲೂ ರೋಹಿತ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.

6 / 7

ಇದುವರೆಗೆ ರೋಹಿತ್ 6 ಪಂದ್ಯಗಳಲ್ಲಿ 167 ಸ್ಟ್ರೈಕ್ ರೇಟ್​ನಲ್ಲಿ 261 ರನ್ ಬಾರಿಸಿದ್ದಾರೆ. ರೋಹಿತ್ ಕಳೆದ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ರೋಹಿತ್ ಅವರ ಎರಡನೇ ಶತಕವಾಗಿತ್ತು. ಟಿ20 ವಿಶ್ವಕಪ್​ಗೂ ಮುನ್ನ ರೋಹಿತ್ ಫಾರ್ಮ್​ನಲ್ಲಿರುವುದು ಟೀಂ ಇಂಡಿಯಾಗೆ ಸಂತಸದ ಸಂಗತಿಯಾಗಿದೆ.

7 / 7

ಇನ್ನು ಲೀಗ್​ನಲ್ಲಿ ಉಭಯ ತಂಡಗಳ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಎರಡೂ ತಂಡಗಳು ಇದುವರೆಗೆ ತಲಾ 2 ಪಂದ್ಯಗಳನ್ನು ಗೆದ್ದಿದ್ದು, ತಲಾ 4 ಪಂದ್ಯಗಳಲ್ಲಿ ಸೋಲು ಕಂಡಿವೆ. ಹೀಗಾಗಿ ಪ್ಲೇ ಆಫ್ ಕನಸು ಜೀವಂತವಾಗಿರಿಸಲು ಉಭಯ ತಂಡಗಳಿಗೂ ಈ ಪಂದ್ಯ ಬಹಳ ಮುಖ್ಯವಾಗಿದೆ.

Loading...
Unable to load recommendations.
Follow Us