IPL 2024: ಭರ್ಜರಿ ಮೊತ್ತಕ್ಕೆ ಮಾರಾಟವಾದ ವಿಂಡೀಸ್​ನ ಸ್ಪೋಟಕ ಬ್ಯಾಟರ್

| Updated By: ಝಾಹಿರ್ ಯೂಸುಫ್

Updated on: Dec 19, 2023 | 3:10 PM

IPL 2024: ಕಳೆದ ಸೀಸನ್​ನಲ್ಲಿ ರೋವ್​ಮನ್ ಪೊವೆಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಮಧ್ಯಮ ಕ್ರಮಾಂಕದ ಬಲಿಷ್ಠ ಬ್ಯಾಟರ್ ಎನಿಸಿಕೊಂಡಿರುವ ಪೊವೆಲ್ ಡೆಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದಾಗ್ಯೂ ಕ್ಯಾಪಿಟಲ್ಸ್​ ಫ್ರಾಂಚೈಸಿ ವಿಂಡೀಸ್ ದಾಂಡಿಗನನ್ನು ಬಿಡುಗಡೆ ಮಾಡಿತ್ತು.

1 / 5
ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್ 17 ಹರಾಜು ಪ್ರಕ್ರಿಯೆ ಶುರುವಾಗಿದೆ. ವೆಸ್ಟ್ ಇಂಡೀಸ್​ನ ಸ್ಪೋಟಕ ದಾಂಡಿಗ ರೋವ್​ಮನ್ ಪೊವೆಲ್ ಈ ಬಾರಿಯ ಹರಾಜಿನಲ್ಲಿ ಮೊದಲು ಬಿಕರಿಯಾದ ಆಟಗಾರ.

2 / 5
2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಪೊವೆಲ್ ಖರೀದಿಗೆ ಕೆಕೆಆರ್​ ಆಸಕ್ತಿವಹಿಸಿತ್ತು. ಅದರಂತೆ ಶುರುವಾದ ಬಿಡ್ಡಿಂಗ್​ನಲ್ಲಿ ಕೆಕೆಆರ್​ಗೆ ಪ್ರತಿಸ್ಪರ್ಧಿಯಾಗಿ ರಾಜಸ್ಥಾನ್ ರಾಯಲ್ಸ್​ ಮುಂದಾಯಿತು.

3 / 5
ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಪೈಪೋಟಿಯಿಂದಾಗಿ ಆರಂಭದಲ್ಲೇ ಪೊವೆಲ್ ಮೌಲ್ಯ 5 ಕೋಟಿ ದಾಟಿತು. ಅಂತಿಮವಾಗಿ 7.40 ಕೋಟಿ ರೂ. ನೀಡುವ ಮೂಲಕ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಪೊವೆಲ್ ಅವರನ್ನು ಖರೀದಿಸಿದೆ.

4 / 5
ಕಳೆದ ಸೀಸನ್​ನಲ್ಲಿ ರೋವ್​ಮನ್ ಪೊವೆಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಮಧ್ಯಮ ಕ್ರಮಾಂಕದ ಬಲಿಷ್ಠ ಬ್ಯಾಟರ್ ಎನಿಸಿಕೊಂಡಿರುವ ಪೊವೆಲ್ ಡೆಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದಾಗ್ಯೂ ಕ್ಯಾಪಿಟಲ್ಸ್​ ಫ್ರಾಂಚೈಸಿ ವಿಂಡೀಸ್ ದಾಂಡಿಗನನ್ನು ಬಿಡುಗಡೆ ಮಾಡಿತ್ತು. ಇದೀಗ ಹರಾಜಿನ ಮೂಲಕ ರೋವ್​ಮನ್ ಪೊವೆಲ್ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ.

5 / 5
ರಾಜಸ್ಥಾನ್ ರಾಯಲ್ಸ್ ತಂಡ: ಸಂಜು ಸ್ಯಾಮ್ಸನ್, ಶಿಮ್ರೋನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಕುನಾಲ್ ಸಿಂಗ್ ರಾಥೋಡ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಜೋಸ್ ಬಟ್ಲರ್, ಡೊನೊವನ್ ಫೆರೇರಾ, ಧ್ರುವ್ ಜುರೆಲ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಲ್, ನವದೀಪ್ ಸೈನಿ, ಕುಲದೀಪ್ ಸೇನ್, ಆ್ಯಡಮ್ ಝಂಪಾ, ಸಂದೀಪ್ ಶರ್ಮಾ, ಅವೇಶ್ ಖಾನ್. ಡೆಲ್ಲಿ ಕ್ಯಾಪಿಟಲ್ಸ್ ತಂಡ: ಡೇವಿಡ್ ವಾರ್ನರ್, ಪೃಥ್ವಿ ಶಾ, ಅನ್ರಿಕ್ ನೋಕಿಯಾ, ಕುಲ್ದೀಪ್ ಯಾದವ್, ಲುಂಗಿ ಎನ್ಗಿಡಿ, ಅಕ್ಷರ್ ಪಟೇಲ್, ಮಿಚೆಲ್ ಮಾರ್ಷ್, ಅಭಿಷೇಕ್ ಪೊರೆಲ್, ಇಶಾಂತ್ ಶರ್ಮಾ, ರಿಷಬ್ ಪಂತ್, ಲಲಿತ್ ಯಾದವ್, ಮುಖೇಶ್ ಕುಮಾರ್, ಯಶ್ ಧುಲ್, ರೋವ್​ಮನ್ ಪೊವೆಲ್.

Published On - 1:24 pm, Tue, 19 December 23