IPL 2024: ರುತುರಾಜ್ ಶತಕ ಸಿಡಿಸಿದರೆ ಸಿಎಸ್​ಕೆಗೆ ಸೋಲು ಖಚಿತ..!

Updated on: Apr 24, 2024 | 4:47 PM

IPL 2024: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್​ಗೆ ಐಪಿಎಲ್‌ನಲ್ಲಿ ಇದು ಎರಡನೇ ಶತಕ. ಅದಾಗ್ಯೂ ಈ ಎರಡೂ ಶತಕಗಳು ರುತುರಾಜ್ ಪಾಲಿಗೆ ಶುಭ ಶಕುನಗಳಾಗಲೇ ಇಲ್ಲ. ಅಂದರೆ ರುತುರಾಜ್ ಶತಕ ಸಿಡಿಸಿದ ಈ ಎರಡೂ ಪಂದ್ಯಗಳಲ್ಲಿ ಚೆನ್ನೈಗೆ ಗೆಲುವೇ ದಕ್ಕಿಲ್ಲ.

1 / 8
ತವರು ನೆಲದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್​ಗಳಿಂದ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಟಾಪ್ 4 ರಿಂದ ಹೊರಬಿದ್ದಿದೆ. ಇದರರ್ಥ ತಂಡ ಪ್ಲೇ ಆಫ್​ ರೇಸ್​ನಿಂದ ಸದ್ಯಕ್ಕೆ ಹೊರಗುಳಿದಿದೆ.

ತವರು ನೆಲದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್​ಗಳಿಂದ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಟಾಪ್ 4 ರಿಂದ ಹೊರಬಿದ್ದಿದೆ. ಇದರರ್ಥ ತಂಡ ಪ್ಲೇ ಆಫ್​ ರೇಸ್​ನಿಂದ ಸದ್ಯಕ್ಕೆ ಹೊರಗುಳಿದಿದೆ.

2 / 8

ನಿನ್ನೆ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರಿಂದ ತಲಾ ಒಂದೊಂದು ಶತಕ ಸಿಡಿದವು. ಆದರೆ ಇಲ್ಲಿ ವ್ಯತ್ಯಾಸವೆನೆಂದರೆ, ಸಿಎಸ್​ಕೆ ನಾಯಕ ರುತುರಾಜ್ ಗಾಯಕ್ವಾಡ್ ಸಿಡಿಸಿದ ಶತಕ ವ್ಯರ್ಥವಾದರೆ, ಲಕ್ನೋ ಪರ ಆಲ್ ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಸಿಡಿಸಿದ ಶತಕ ತಂಡದ ಗೆಲುವಿಗೆ ನಾಂದಿ ಹಾಡಿತು.

3 / 8

ವಾಸ್ತವವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್​ಗೆ ಐಪಿಎಲ್‌ನಲ್ಲಿ ಇದು ಎರಡನೇ ಶತಕ. ಅದಾಗ್ಯೂ ಈ ಎರಡೂ ಶತಕಗಳು ರುತುರಾಜ್ ಪಾಲಿಗೆ ಶುಭ ಶಕುನಗಳಾಗಲೇ ಇಲ್ಲ. ಅಂದರೆ ರುತುರಾಜ್ ಶತಕ ಸಿಡಿಸಿದ ಈ ಎರಡೂ ಪಂದ್ಯಗಳಲ್ಲಿ ಚೆನ್ನೈಗೆ ಗೆಲುವೇ ದಕ್ಕಿಲ್ಲ.

4 / 8

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ರುತುರಾಜ್ ಗಾಯಕ್ವಾಡ್ 60 ಎಸೆತಗಳಲ್ಲಿ 108 ರನ್ ಗಳಿಸಿದರು. ಇದರಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್‌ಗಳೂ ಸೇರಿದ್ದವು. ಆದರೆ ರುತುರಾಜ್ ಕೇವಲ 56 ಎಸೆತಗಳಲ್ಲಿ ಶತಕ ಪೂರೈಸಿದ ಹೊರತಾಗಿಯೂ ತಮ್ಮ ಹೆಸರಿನಲ್ಲಿ ಅನಗತ್ಯ ದಾಖಲೆಯೊಂದು ಬರೆದಿದ್ದಾರೆ.

5 / 8

ಮೇಲೆ ಹೇಳಿದಂತೆ ಗಾಯಕ್ವಾಡ್ ಶತಕ ಬಾರಿಸಿದಾಗಲೆಲ್ಲಾ ಸಿಎಸ್​ಕೆ ತಂಡವು ಸೋಲನ್ನು ಎದುರಿಸಿದೆ. ರುತುರಾಜ್ ಇದುವರೆಗೆ ಎರಡು ಶತಕಗಳನ್ನು ಬಾರಿಸಿದ್ದು, ಚೆನ್ನೈ ತಂಡವು ಎರಡೂ ಬಾರಿ ಪಂದ್ಯವನ್ನು ಸೋತಿದೆ. ಇದರೊಂದಿಗೆ ರುತುರಾಜ್ ಸೋತ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಂದಿದ್ದಾರೆ.

6 / 8

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆರ್​ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸೋತ ಪಂದ್ಯಗಳಲ್ಲಿ ಕೊಹ್ಲಿ ಇದುವರೆಗೆ ಮೂರು ಶತಕಗಳನ್ನು ಬಾರಿಸಿದ್ದಾರೆ.

7 / 8

ಇದೆಲ್ಲದರ ಹೊರತಾಗಿಯೂ ರುತುರಾಜ್ ಗಾಯಕ್ವಾಡ್ ಅವರ ಈ ಶತಕದ ಇನ್ನಿಂಗ್ಸ್ ಸ್ಮರಣೀಯವಾಗಿತ್ತು. ಏಕೆಂದರೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಶತಕ ಸಿಡಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ರುತುರಾಜ್ ಪಾತ್ರರಾದರು.

8 / 8

ಅಲ್ಲದೆ ಸಿಎಸ್‌ಕೆ ನಾಯಕನಾಗಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆಯನ್ನೂ ರುತುರಾಜ್ ನಿರ್ಮಿಸಿದ್ದಾರೆ. ಈ ಮೊದಲು ಈ ದಾಖಲೆ ಎಸ್‌ಎಸ್ ಧೋನಿ ಹೆಸರಿನಲ್ಲಿತ್ತು. ನಾಯಕನಾಗಿ ಸಿಎಸ್‌ಕೆ ಪರ ಧೋನಿ 84 ರನ್‌ಗಳ ಇನಿಂಗ್ಸ್‌ ಆಡಿದ್ದರು.

Loading...
Unable to load recommendations.
Follow Us