IPL 2024: ಪ್ಲೇಆಫ್‌ಗೇರಲು ಈ 6 ತಂಡಗಳ ನಡುವೆ ತೀವ್ರ ಪೈಪೋಟಿ..!
IPL Playoffs Scenario 2024: ಸದ್ಯಕ್ಕೆ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು 6 ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರಲ್ಲಿ ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಸೇರಿವೆ.
Updated on: Apr 24, 2024 | 8:16 PM

17ನೇ ಆವೃತ್ತಿಯ ಐಪಿಎಲ್‌ನಲ್ಲಿ ಇಲ್ಲಿಯವರೆಗೆ 39 ಪಂದ್ಯಗಳು ನಡೆದಿವೆ. ಇದರರ್ಥ ಲೀಗ್ ಹಂತದ ಅರ್ಧದಷ್ಟು ಪಯಣ ಮುಗಿದಿದೆ. ಪ್ರತಿ ಪಂದ್ಯಗಳು ಮುಗಿದಂತೆ ಯಾವ ತಂಡ ಪ್ಲೇಆಫ್‌ಗೇರುತ್ತದೆ ಎಂಬ ಕುತೂಹಲ ಹೆಚ್ಚುತ್ತಿದೆ.

ಪ್ರಸ್ತುತ ಬಹುತೇಕ ತಂಡಗಳು ತಲಾ 8 ಪಂದ್ಯಗಳನ್ನು ಆಡಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ಮಾತ್ರ ತಲಾ 7 ಪಂದ್ಯಗಳನ್ನು ಆಡಿವೆ. ಈ ನಡುವೆ ಯಾವ 4 ತಂಡಗಳು ಪ್ಲೇ ಆಫ್ ಆಡುತ್ತವೆ ಎಂಬುದು ಕುತೂಹಲ ಮೂಡಿಸಿದೆ.

ಸದ್ಯಕ್ಕೆ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು 6 ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರಲ್ಲಿ ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಸೇರಿವೆ.

ಉಳಿದಂತೆ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪ್ಲೇ ಆಫ್ ಪಯಣ ಬಹುತೇಕ ಅಂತ್ಯಗೊಂಡಿದೆ. ಈ ನಾಲ್ಕು ತಂಡಗಳು ಪ್ಲೇ ಆಫ್ಗೇರಬೇಕೆಂದರೆ ಪವಾಡವೇ ನಡೆಯಬೇಕಿದೆ.

ಪ್ಲೇಆಫ್‌ಗೆ ಅರ್ಹತೆ ಪಡೆಯಲು ಯಾವುದೇ ತಂಡಕ್ಕೆ ಕನಿಷ್ಠ 16 ಅಂಕಗಳ ಅಗತ್ಯವಿದೆ. ಸದ್ಯ ರಾಜಸ್ಥಾನ್ ರಾಯಲ್ಸ್ ಆಡಿರುವ 8 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದು ಗೆಲುವು ರಾಜಸ್ಥಾನಕ್ಕೆ ಪ್ಲೇಆಫ್‌ಗೆ ಟಿಕೆಟ್ ನೀಡುತ್ತದೆ.

ರಾಜಸ್ಥಾನ್ ರಾಯಲ್ಸ್ ನಂತರ ಪಾಯಿಂಟ್ ಪಟ್ಟಿಯಲ್ಲಿ ಕೋಲ್ಕತ್ತಾ ಎರಡನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ ಮೂರನೇ ಸ್ಥಾನದಲ್ಲಿದೆ ಮತ್ತು ಲಕ್ನೋ ನಾಲ್ಕನೇ ಸ್ಥಾನದಲ್ಲಿದೆ. ಈ ತಂಡಗಳು ತಲಾ 5 ಪಂದ್ಯಗಳನ್ನು ಗೆದಿದ್ದು, ತಲಾ 10 ಅಂಕಗಳನ್ನು ಹೊಂದಿವೆ.

ಉಳಿದಂತೆ ಚೆನ್ನೈ ಮತ್ತು ಗುಜರಾತ್ ತಲಾ 8 ಅಂಕಗಳೊಂದಿಗೆ 5 ಮತ್ತು 6ನೇ ಸ್ಥಾನದಲ್ಲಿವೆ. ರಾಜಸ್ತಾನ್ ರಾಯಲ್ಸ್ ಹೊರತುಪಡಿಸಿ, ಕೆಕೆಆರ್, ಸನ್ರೈಸರ್ಸ್ ಹೈದರಾಬಾದ್ ಮತ್ತು ಸಿಎಸ್ಕೆ ತಂಡಗಳು ಕೊನೆಯ 4 ರ ಘಟ್ಟಕ್ಕೆ ತಲುಪಲು ಪ್ರಬಲ ಸ್ಪರ್ಧಿಗಳೆಂದು ಪರಿಗಣಿಸಲಾಗಿದೆ.

ಇವುಗಳಲ್ಲದೆ ಗುಜರಾತ್ ಟೈಟಾನ್ಸ್ ಕೂಡ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ಇದಕ್ಕೆ ತಂಡ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಹಾಗೆಯೇ ಇದರ ನೆಟ್ ರನ್ರೇಟ್ ಕೂಡ ಸುಧಾರಿಸಬೇಕಿದೆ. ಸದ್ಯ ಗುಜರಾತ್ 8 ಪಂದ್ಯಗಳಲ್ಲಿ 4 ಗೆಲುವುಗಳೊಂದಿಗೆ 8 ಅಂಕ ಸಂಪಾಧಿಸಿದೆ.

ಇನ್ನು ಬಹುತೇಕ ಪ್ಲೇಆಫ್ ರೇಸ್ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಲಾ 8 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 3,3,2,1 ಪಂದ್ಯವನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿವೆ.




