IPL 2024: ಕೊಹ್ಲಿ ದಾಖಲೆ ಉಡೀಸ್; ಇತಿಹಾಸ ಸೃಷ್ಟಿಸಿದ ಶುಭ್​ಮನ್ ಗಿಲ್..!

IPL 2024 Shubman Gill: ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯ ಐಪಿಎಲ್‌ನಲ್ಲಿ 100ನೇ ಪಂದ್ಯವಾಗಿದೆ. ಇದರೊಂದಿಗೆ ಗಿಲ್ ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ತಲುಪಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಪೃಥ್ವಿಶಂಕರ
|

Updated on: Apr 24, 2024 | 10:11 PM

ಐಪಿಎಲ್ 2024ರ 40ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ದೆಹಲಿಯ ತವರು ಮೈದಾನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್​ ಗಿಲ್​ಗೆ ಐತಿಹಾಸಿಕ ಪಂದ್ಯವಾಗಿದೆ.

1 / 7
ವಾಸ್ತವವಾಗಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯ ಐಪಿಎಲ್‌ನಲ್ಲಿ 100ನೇ ಪಂದ್ಯವಾಗಿದೆ. ಇದರೊಂದಿಗೆ ಗಿಲ್ ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ತಲುಪಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

2 / 7
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐಪಿಎಲ್ ವೃತ್ತಿಜೀವನದ 100 ನೇ ಪಂದ್ಯವನ್ನಾಡುತ್ತಿರುವ ಗಿಲ್ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ 65ನೇ ಆಟಗಾರ ಎನಿಸಿಕೊಂಡಿದ್ದಾರೆ. ವಿಶೇಷವೆಂದರೆ ಶುಭ್​ಮನ್ ಗಿಲ್ ಐಪಿಎಲ್‌ನಲ್ಲಿ 100 ಪಂದ್ಯಗಳನ್ನು ಆಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

3 / 7
ಈ ಹಿಂದೆ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ವಿರಾಟ್ ಕೊಹ್ಲಿ 25 ವರ್ಷ, 182 ದಿನಗಳಲ್ಲಿ 100 ನೇ ಐಪಿಎಲ್ ಪಂದ್ಯಗಳನ್ನು ಆಡಿದ್ದರು.

4 / 7
ಇದೀಗ ಈ ವಿಚಾರದಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿರುವ ಗಿಲ್ 24 ವರ್ಷ, 221 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದಲ್ಲದೆ ಐಪಿಎಲ್‌ನಲ್ಲಿ 100 ಪಂದ್ಯಗಳನ್ನು ಆಡಿದ ಎರಡನೇ ಕಿರಿಯ ಆಟಗಾರ ಎಂಬ ದಾಖಲೆಯನ್ನೂ ಬರೆದಿದ್ದಾರೆ.

5 / 7
24 ವರ್ಷ, 221 ದಿನಗಳಲ್ಲಿ 100ನೇ ಐಪಿಎಲ್​ ಪಂದ್ಯವನ್ನಾಡಿದ್ದ ಅಫ್ಘಾನಿಸ್ತಾನದ ಗೂಗ್ಲಿ ಸ್ಪಿನ್ನರ್ ರಶೀದ್ ಖಾನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

6 / 7
100ನೇ ಐಪಿಎಲ್ ಪಂದ್ಯವನ್ನಾಡುತ್ತಿರುವ ಗಿಲ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಗಿಲ್ ಇದುವರೆಗೆ ಈ 100 ಪಂದ್ಯಗಳಲ್ಲಿ 38.12 ಸರಾಸರಿ ಮತ್ತು 135.20 ಸ್ಟ್ರೈಕ್ ರೇಟ್​ನಲ್ಲಿ 3088 ರನ್ ಬಾರಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ 20 ಅರ್ಧ ಶತಕಗಳು ಸೇರಿವೆ.

7 / 7
Follow us