ಎಷ್ಟು ಕೋಟಿ ಬೇಕು, ಅಷ್ಟು ಕೋಟಿ ಬರ್ಕೊ… ಗಂಭೀರ್​ಗೆ ಶಾರುಖ್ ಖಾನ್ ಖಾಲಿ ಚೆಕ್ ಆಫರ್

|

Updated on: May 27, 2024 | 11:15 AM

IPL 2024: ಐಪಿಎಲ್​ 2024ರ ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಬಗ್ಗು ಬಡಿದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಚೆನ್ನೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಹೆಚ್ ತಂಡ 113 ರನ್​ಗಳಿಗೆ ಆಲೌಟ್ ಆಗಿತ್ತು. ಈ ಗುರಿಯನ್ನು ಕೇವಲ 10.3 ಓವರ್​ಗಳಲ್ಲಿ ಚೇಸ್ ಮಾಡಿ ಕೆಕೆಆರ್ ತಂಡ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

1 / 7
IPL 2024: ಐಪಿಎಲ್ ಸೀಸನ್ 17 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಗೆಲುವಿನ ಹಿಂದಿರುವ ಮಾಸ್ಟರ್ ಮೈಂಡ್​ಗಳಲ್ಲಿ ಕೆಕೆಆರ್ ತಂಡದ ಮೆಂಟರ್ ಗೌತಮ್ ಗಂಭೀರ್ ಕೂಡ ಒಬ್ಬರು. ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದ ಗಂಭೀರ್ ಅವರನ್ನು ಈ ಬಾರಿ ಶಾರುಖ್ ಖಾನ್ ಕೆಕೆಆರ್ ತಂಡಕ್ಕೆ ಕರೆ ತಂದಿದ್ದರು.

2 / 7
ಇದಕ್ಕೆ ಮುಖ್ಯ ಕಾರಣ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅದ್ಭುತ ಪ್ರದರ್ಶನ ನೀಡಿದಿರುವುದು. ಅಂದರೆ ಕೆಕೆಆರ್ 2012 ರಲ್ಲಿ ಮತ್ತು 2014 ರಲ್ಲಿ ಗಂಭೀರ್ ಅವರ ಸಾರಥ್ಯದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಹೀಗಾಗಿಯೇ ಮೆಂಟರ್ ಆಗಿ ಹೊಸ ಇನಿಂಗ್ಸ್ ಆರಂಭಿಸಿದ್ದ ಗಂಭೀರ್ ಅವರನ್ನು ಮರಳಿ ಕೆಕೆಆರ್ ಪಡೆಗೆ ಕರೆತರಲು ಶಾರುಖ್ ಖಾನ್ ಬಯಸಿದ್ದರು.

3 / 7
ಬಯಸಿದ್ದಂತೆ ಭಾಗ್ಯ ಎನ್ನುವಂತೆ ಗೌತಮ್ ಗಂಭೀರ್ ಕೂಡ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆದು ಕೆಕೆಆರ್ ತಂಡ ಸೇರಿಕೊಂಡರು. ಇದೀಗ ಗಂಭೀರ್ ಅವರ ಮಾರ್ಗದರ್ಶನದ ಅಡಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 3ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

4 / 7
ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಗೌತಮ್ ಗಂಭೀರ್ ಕೆಕೆಆರ್ ತಂಡವನ್ನು ತೊರೆಯುವ ಸುದ್ದಿಗಳು ಹರಿದಾಡುತ್ತಿದೆ. ಇದಕ್ಕೆ ಕಾರಣ ಬಿಸಿಸಿಐ ಕಡೆಯಿಂದ ಗೌತಿಗೆ ಬಿಗ್ ಆಫರ್ ಸಿಕ್ಕಿರುವುದು. ಅಂದರೆ ಟೀಮ್ ಇಂಡಿಯಾದ ಕೋಚ್ ಆಗುವಂತೆ ಬಿಸಿಸಿಐ ಗೌತಮ್ ಗಂಭೀರ್ ಅವರನ್ನು ಸಂಪರ್ಕಿಸಿದೆ.

5 / 7
ಈ ಸುದ್ದಿ ಬೆನ್ನಲ್ಲೇ ಅತ್ತ ಶಾರುಖ್ ಖಾನ್ ಕೂಡ ಅಲರ್ಟ್ ಆಗಿದ್ದಾರೆ. ಗೌತಮ್ ಗಂಭೀರ್ ಅವರನ್ನು ಬಿಟ್ಟು ಕೊಡಲು ಕಿಂಗ್ ಖಾನ್ ಕೂಡ ಸಿದ್ಧರಿಲ್ಲ. ಹೀಗಾಗಿಯೇ ಕೆಕೆಆರ್ ಮೆಂಟರ್​ಗೆ ಶಾರುಖ್ ಖಾನ್ ಖಾಲಿ ಚೆಕ್​ನ ಆಫರ್ ನೀಡಿದ್ದಾರೆ ಎಂದು ವರದಿಯಾಗಿದೆ.

6 / 7
ಅಂದರೆ ಮುಂದಿನ ಹತ್ತು ವರ್ಷಗಳವರೆಗೆ ಗೌತಮ್ ಗಂಭೀರ್ ಕೆಕೆಆರ್ ತಂಡದ ಮುಖ್ಯ ಹುದ್ದೆಯಲ್ಲಿರಬೇಕೆಂದು ಶಾರುಖ್ ಖಾನ್ ಬಯಸಿದ್ದಾರೆ. ಇದಕ್ಕಾಗಿ ಗಂಭೀರ್​ಗೆ ಎಷ್ಟು ಹಣ ಬೇಕು ಅದನ್ನು ಖಾಲಿ ಚೆಕ್​ನಲ್ಲಿ ಬರೆದು ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಈ ಮೂಲಕ ಕೆಕೆಆರ್ ತಂಡಕ್ಕೆ ನಿಮ್ಮ ಸೇವೆಯ ಅತ್ಯಗತ್ಯವಿದೆ ಎಂಬುದನ್ನು ಶಾರುಖ್ ಖಾನ್ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.

7 / 7
ಇದೀಗ ಶಾರುಖ್ ಖಾನ್ ನೀಡಿದ ಬ್ಲಾಂಕ್ ಚೆಕ್ ಆಫರ್​ ಅನ್ನು ಗೌತಮ್ ಗಂಭೀರ್ ಸ್ವೀಕರಿಸಿದರೆ, ಅವರು ಟೀಮ್ ಇಂಡಿಯಾದ ಕೋಚ್ ಆಗುವ ಸಾಧ್ಯತೆಯಿಲ್ಲ. ಏಕೆಂದರೆ ಭಾರತ ತಂಡದ ಕೋಚ್ ಹುದ್ದೆಯಲ್ಲಿರುವವರು ಯಾವುದೇ ಫ್ರಾಂಚೈಸಿ ಲೀಗ್​ನಲ್ಲಿ ತಂಡದ ತರಬೇತುದಾರ ಅಥವಾ ಇನ್ನಿತರ ಹುದ್ದೆಗಳಲ್ಲಿರಬಾರದು ಎಂಬ ನಿಯಮವಿದೆ. ಹೀಗಾಗಿ ಗೌತಮ್ ಗಂಭೀರ್ ಅವರ ಮುಂದಿನ ನಡೆಯೇನು ಎಂಬುದೇ ಕುತೂಹಲ.

Published On - 11:03 am, Mon, 27 May 24