Delhi Capitals: ಡೆಲ್ಲಿ ತಂಡದಲ್ಲಿ ಮೇಜರ್ ಸರ್ಜರಿ; ಮುಖ್ಯ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್ ಔಟ್..!
Delhi Capitals: ತಂಡದಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮ್ಯಾನೇಜ್ಮೆಂಟ್ ಮುಖ್ಯ ಕೋಚ್ ಹುದ್ದೆಗೆ ಬೇರೆ ಆಯ್ಕೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.
1 / 7
16ನೇ ಆವೃತ್ತಿಯ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಡೆಲ್ಲಿ ತಂಡ ಆಡಿದ 14 ಪಂದ್ಯಗಳಲ್ಲಿ 5 ರಲ್ಲಿ ಗೆದ್ದು. ಉಳಿದ 9 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇದರೊಂದಿಗೆ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು. ಹೀಗಾಗಿ ತಂಡದಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮ್ಯಾನೇಜ್ಮೆಂಟ್ ಮುಖ್ಯ ಕೋಚ್ ಹುದ್ದೆಗೆ ಬೇರೆ ಆಯ್ಕೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಫ್ರಾಂಚೈಸಿ ಇಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ.
2 / 7
ವರದಿಗಳ ಪ್ರಕಾರ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಸೀಸ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ತೆಗೆದುಹಾಕುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
3 / 7
2018 ರಿಂದ ಡೆಲ್ಲಿ ತಂಡದಲ್ಲಿ ಮುಖ್ಯ ಕೋಚ್ ಆಗಿ ಪಾಂಟಿಂಗ್ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ತರಬೇತಿಯಲ್ಲಿ ಡೆಲ್ಲಿ ತಂಡ 2020 ರ ಐಪಿಎಲ್ನಲ್ಲಿ ಮೊದಲ ಬಾರಿಗೆ ಐಪಿಎಲ್ ಫೈನಲ್ ಆಡಿತ್ತು. ಅದನ್ನು ಹೊರತುಪಡಿಸಿದರೆ ತಂಡ ಪ್ಲೇ ಆಫ್ ದಾಟಿ ಮುಂದೆ ಬರಲಿಲ್ಲ.
4 / 7
ಹೀಗಾಗಿ ಪಾಂಟಿಂಗ್ರನ್ನು ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಸಲು ನಿರ್ಧರಿಸಿರುವ ಮ್ಯಾನೇಜ್ಮೆಂಟ್, ಅವರ ಸ್ಥಾನಕ್ಕೆ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಆಯ್ಕೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಕಳೆದ ಆವೃತ್ತಿಯವರೆಗೂ ಗಂಗೂಲಿ ಡೆಲ್ಲಿ ತಂಡದ ನಿರ್ದೇಶಕರಾಗಿ ಈ ತಂಡದೊಂದಿಗಿದ್ದರು. ಈಗ ಅವರು ಈ ತಂಡದ ಕೋಚ್ ಹುದ್ದೆಯನ್ನು ನಿಭಾಯಿಸಲಿದ್ದಾರೆ ಎಂದು ವರದಿಯಾಗಿದೆ.
5 / 7
ಐಪಿಎಲ್ ಆರಂಭದಿಂದಲೂ ಡೆಲ್ಲಿ ಫ್ರಾಂಚೈಸ್ ತಂಡವು ತುಂಬಾ ದುರ್ಬಲವೆಂದು ಪರಿಗಣಿಸಲ್ಪಟ್ಟಿತ್ತು. ಆದರೆ ಪಾಂಟಿಂಗ್ ತರಬೇತುದಾರರಾದ ನಂತರ ತಂಡದ ಪರಿಸ್ಥಿತಿ ಬದಲಾಯಿತು. ಈ ತಂಡ ಬಹಳ ವರ್ಷಗಳ ನಂತರ 2019 ರಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸಿತು. ಇದರ ನಂತರ, 2021 ರವರೆಗೆ, ಈ ತಂಡ ಪ್ಲೇಆಫ್‌ಗೆ ಎಂಟ್ರಿಕೊಡುವಲ್ಲಿ ಯಶಸ್ವಿಯಾಗಿತ್ತು.
6 / 7
ಆದರೆ, ಪ್ಲೇ ಆಫ್ ಆಡುತ್ತಿದ್ದ ಡೆಲ್ಲಿ ತಂಡಕ್ಕೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇನ್ನು ಕಳೆದ ಸೀಸನ್ನಲ್ಲಿ ಡೆಲ್ಲಿ ತಂಡದ ಪ್ರದರ್ಶನ ತೀರ ಹೀನಾಯವಾಗಿತ್ತು. ಡೆಲ್ಲಿ 14 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಐದು ಪಂದ್ಯಗಳನ್ನು ಮಾತ್ರ ಗೆದ್ದು, ಒಂಬತ್ತು ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಅಂತಿಮವಾಗಿ ತಂಡವು ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದುಕೊಂಡಿತು
7 / 7
ಇನ್ನು ಐಪಿಎಲ್ನಲ್ಲಿ ಪಾಂಟಿಂಗ್ ಅವರನ್ನು ಯಶಸ್ವಿ ತರಬೇತುದಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರ ಕೋಚಿಂಗ್ ಅಡಿಯಲ್ಲಿ 2015ರಲ್ಲಿ ಮುಂಬೈ ಐಪಿಎಲ್ ಗೆದ್ದಿತ್ತು. ನಂತರ ಡೆಲ್ಲಿ ತಂಡ ಸೇರಿಕೊಂಡ ಪಾಂಟಿಂಗ್ ತಮ್ಮ ಕೋಚಿಂಗ್ ಅಡಿಯಲ್ಲಿ ತಂಡವನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.