- Kannada News Photo gallery Cricket photos Australia vs India ICC WTC Final 2023 rain predicted for Days 4 and 5 in Kennington Oval London
WTC Final Weather Forecast: ರೋಚಕತೆ ಸೃಷ್ಟಿಸಿರುವ ಭಾರತ-ಆಸ್ಟ್ರೇಲಿಯಾ ಫೈನಲ್ಗೆ ಮಳೆ ಅಡ್ಡಿ?
India vs Australia Final: ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಕೇವಲ ಎರಡು ದಿನ ಬಾಕಿ ಇರುವ ಕಾರಣ ಈ ಕದನ ತುದಿಗಾಲಿನಲ್ಲಿ ನಿಲ್ಲಿಸಿದೆ. ಆದರೆ, ಉಳಿದಿರುವ ಎರಡು ದಿನ ಪಂದ್ಯ ನಡೆಯುವುದು ಅನುಮಾನ ಎಂಬಂತಾಗಿದೆ.
Updated on:Jun 10, 2023 | 11:45 AM

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ರೋಚಕತೆ ಸೃಷ್ಟಿಸಿದೆ. ಭಾರತವನ್ನು 296 ರನ್ಗಳಿಗೆ ಆಲೌಟ್ ಮಾಡಿ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಆಸ್ಟ್ರೇಲಿಯಾ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 123 ರನ್ ಕಲೆಹಾಕಿದೆ.

ಸದ್ಯ ಕಾಂಗರೂ ಪಡೆ 296 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಭಾರತ ಆದಷ್ಟು ಬೇಗ ಆಸೀಸ್ ಪಡೆಯನ್ನು ಆಲೌಟ್ ಮಾಡಬೇಕಿದೆ. 350+ ರನ್ ಲೀಡ್ ಆದರೆ ಭಾರತಕ್ಕೆ ಗೆಲುವು ಕಷ್ಟವಾಗಲಿದೆ.

ನಾಲ್ಕು ಹಾಗೂ ಐದು ಕೇವಲ ಎರಡು ದಿನ ಬಾಕಿ ಇರುವ ಕಾರಣ ಈ ಫೈನಲ್ ಕದನ ತುದಿಗಾಲಿನಲ್ಲಿ ನಿಲ್ಲಿಸಿದೆ. ಆದರೆ, ಉಳಿದಿರುವ ಎರಡು ದಿನ ಪಂದ್ಯ ನಡೆಯುವುದು ಅನುಮಾನ ಎಂಬಂತಾಗಿದೆ.

ಲಂಡನ್ ಹವಾಮಾನವು ಎರಡೂ ತಂಡಗಳಿಗೆ ಮತ್ತು ಅಭಿಮಾನಿಗಳಿಗೆ ಬೇಸರದ ಸುದ್ದಿ ನೀಡಿದೆ. ಜೂನ್ 10 ನಾಲ್ಕನೇ ದಿನ ಮತ್ತು ಜೂನ್ 11 ಅಂತಿಮ ದಿನದಂದು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೂನ್ 10, ಶನಿವಾರದಂದು 4 ನೇ ದಿನ ಬೆಳಿಗ್ಗೆ 71 ಪ್ರತಿಶತದಷ್ಟು ಮೋಡ ಕವಿದ ವಾತಾವರಣದ ಜೊತೆ ಮಳೆ ಬರುವ ಸಾಧ್ಯತೆ ಇದೆ ಎನ್ನಲಾಗಿದ್ದು ಪೂರ್ಣ ಅವಧಿಯ ಆಟ ನಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಖುಷಿ ವಿಚಾರ ಎಂದರೆ ಪರಿಸ್ಥಿತಿ ವೇಗದ ಬೌಲರ್‌ಗಳಿಗೆ ಸಹಾಯ ಆಗಲಿದೆಯಂತೆ.

ಊಟದ ವಿರಾಮದ ನಂತರ ನಂತರ ಭಾರೀ ಮಳೆ ಆಗಲಿದೆ ಎನ್ನಲಾಗಿದೆ. ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ (ಸ್ಥಳೀಯ ಕಾಲಮಾನ) ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವುದು ಖಚಿತ.

ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್ನಲ್ಲಿ 469 ಆಲೌಟ್ ಮಾಡಿ ತನ್ನ ಪ್ರಥಮ ಇನ್ನಿಂಗ್ಸ್ ಆಡಿದ ಭಾರತ ಅಜಿಂಕ್ಯ ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಆಟದ ನೆರವಿನಿಂದ 296 ರನ್ ಗಳಿಸಿತು.

173 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಕಾಂಗರೂ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದೆ. 296 ರನ್ಗಳ ಮುನ್ನಡೆಯಲ್ಲಿದೆ.
Published On - 10:41 am, Sat, 10 June 23
