WTC Final 2023: ಬ್ರಾಡ್ಮನ್- ಬಾರ್ಡರ್ ದಾಖಲೆ ಸರಿಗಟ್ಟಿದ ಲಾರ್ಡ್​ ಶಾರ್ದೂಲ್ ಠಾಕೂರ್..!

Shardul Thakur Fifty: ಆಸ್ಟ್ರೇಲಿಯ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡುವಲ್ಲಿ ಅಜಿಂಕ್ಯ ರಹಾನೆಗೆ ಬೆಂಬಲ ನೀಡಿದ ಶಾರ್ದೂಲ್ ಬಲಿಷ್ಠ ಇನ್ನಿಂಗ್ಸ್ ಆಡಿ ಅರ್ಧಶತಕ ಸಿಡಿಸಿದರು.

ಪೃಥ್ವಿಶಂಕರ
|

Updated on: Jun 09, 2023 | 8:11 PM

ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಸತತ ವೈಫಲ್ಯ ಅನುಭವಿಸುತ್ತಿರುವ ಓವಲ್ ಮೈದಾನದಲ್ಲಿ ಶಾರ್ದೂಲ್ ಠಾಕೂರ್ ಅವರಂತಹ ಕೆಳ ಕ್ರಮಾಂಕದ ಬೌಲಿಂಗ್ ಆಲ್‌ರೌಂಡರ್ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ್ದಾರೆ.

1 / 8
ಆಸ್ಟ್ರೇಲಿಯ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡುವಲ್ಲಿ ಅಜಿಂಕ್ಯ ರಹಾನೆಗೆ ಬೆಂಬಲ ನೀಡಿದ ಶಾರ್ದೂಲ್ ಬಲಿಷ್ಠ ಇನ್ನಿಂಗ್ಸ್ ಆಡಿ ಅರ್ಧಶತಕ ಸಿಡಿಸಿದರು.

2 / 8
ಸುಮಾರು ಎರಡೂವರೆ ವರ್ಷಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಗಾಬಾದಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ್ದ ಶಾರ್ದೂಲ್ ಮತ್ತೆ ಈ ತಂಡದ ವಿರುದ್ಧವೇ ಸ್ಮರಣೀಯ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಶಾರ್ದೂಲ್ ಅವರ ಆರಂಭ ತುಂಬಾ ಕೆಟ್ಟದಾಗಿತ್ತು. ಅಲ್ಲದೆ ಆಸೀಸ್ ಫೀಲ್ಡರ್​ಗಳು ಅವರಿಗೆ ಎರಡು ಜೀವದಾನಗಳನ್ನು ನೀಡಿದರು.

3 / 8
ಇಂತಹ ಆರಂಭದ ಹೊರತಾಗಿಯೂ ಶಾರ್ದೂಲ್ ದೃಢವಾಗಿ ಕ್ರೀಸ್​ನಲ್ಲಿ ನಿಂತಿದಲ್ಲದೆ, ಅಜಿಂಕ್ಯ ರಹಾನೆ ಜೊತೆಗೆ ಶತಕದ ಜೊತೆಯಾಟವನ್ನಾಡಿದರು. ಅಲ್ಲದೆ ಎರಡನೇ ಸೆಷನ್‌ನಲ್ಲಿ ರಹಾನೆ ಔಟಾದ ನಂತರವೂ ಕೆಲಕಾಲ ಬ್ಯಾಟಿಂಗ್ ಮಾಡಿ ಅರ್ಧಶತಕ ಪೂರೈಸಿದರು.

4 / 8
ಈ ಮೂಲಕ ಓವಲ್ ಮೈದಾನದಲ್ಲಿ ಸತತ ಮೂರನೇ ಇನಿಂಗ್ಸ್​ನಲ್ಲಿ ಶಾರ್ದೂಲ್ ಅರ್ಧಶತಕ ದಾಖಲಿಸಿದರು. ವಾಸ್ತವವಾಗಿ ಎರಡು ವರ್ಷಗಳ ಹಿಂದೆ, ಶಾರ್ದೂಲ್ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಎರಡೂ ಇನ್ನಿಂಗ್ಸ್‌ಗಳಲ್ಲಿ ಬಿರುಸಿನ ಅರ್ಧಶತಕಗಳನ್ನು ಸಿಡಿಸಿದ್ದರು.

5 / 8
2021ರಲ್ಲಿ ಶಾರ್ದೂಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 57 ರನ್ ಬಾರಿಸಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 60 ರನ್ ಸಿಡಿಸಿದ್ದರು. ಇದೀಗ ಸತತ ಮೂರನೇ ಬಾರಿಗೆ ಶಾರ್ದೂಲ್ ಇದೇ ಮೈದಾನದಲ್ಲಿ ಅರ್ಧಶತಕ ಬಾರಿಸಿದ್ದಾರೆ.

6 / 8
ಈ ಮೂಲಕ ಶಾರ್ದೂಲ್ ಠಾಕೂರ್ ಶ್ರೇಷ್ಠ ಬ್ಯಾಟ್ಸ್‌ಮನ್ ಸರ್ ಡಾನ್ ಬ್ರಾಡ್ಮನ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಅವರನ್ನು ಸರಿಗಟ್ಟಿದ್ದಾರೆ. ಈ ಇಬ್ಬರು ದೈತ್ಯರಂತೆ, ಶಾರ್ದೂಲ್ ಓವಲ್‌ನಲ್ಲಿ ಸತತ ಮೂರು ಅರ್ಧಶತಕಗಳನ್ನು ಸಿಡಿಸಿದ ಮೊದಲ ವಿದೇಶಿ ಬ್ಯಾಟ್ಸ್‌ಮನ್ ಎನಿಸಿಕೊಂಡರು.

7 / 8
ಅಷ್ಟೇ ಅಲ್ಲ, ಶಾರ್ದೂಲ್ ಅವರ ಟೆಸ್ಟ್ ವೃತ್ತಿಜೀವನದ ನಾಲ್ಕನೇ ಅರ್ಧಶತಕ ಇದಾಗಿದ್ದು, ಅವರ ನಾಲ್ಕು ಅರ್ಧಶತಕಗಳು ವಿದೇಶಿ ನೆಲದಲ್ಲಿ ಮಾತ್ರ ಬಂದಿವೆ. ಓವಲ್ ಹೊರತಾಗಿ, ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ಅವರ ಒಂದು ಅರ್ಧ ಶತಕ ಬಂದಿತ್ತು.

8 / 8
Follow us