Updated on: Jun 10, 2023 | 8:30 PM
T20 Blast 2023: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ನಲ್ಲಿ 21ರ ಯುವ ದಾಂಡಿಗ ವಿಲ್ ಸ್ಮಿಡ್ ತೂಫಾನ್ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದ್ದಾರೆ. ಸೋಮರ್‌ಸೆಟ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗ್ಲೌಸೆಸ್ಟರ್‌ಶೈರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ಅದರಂತೆ ಇನಿಂಗ್ಸ್ ಆರಂಭಿಸಿದ ಸೋಮರ್‌ಸೆಟ್ ಪರ ಟಾಮ್ ಬ್ಯಾಂಟನ್ ಹಾಗೂ ವಿಲ್ ಸ್ಮಿಡ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಆರಂಭಿಸಿದ ಈ ಜೋಡಿಯು ಪ್ರಥಮ ವಿಕೆಟ್ಗೆ 10 ಓವರ್ಗಳಲ್ಲಿ 122 ರನ್ ಕಲೆಹಾಕಿತು.
ವಿಶೇಷ ಎಂದರೆ 122 ರನ್ಗಳಲ್ಲಿ 94 ರನ್ಗಳು ವಿಲ್ ಸ್ಮಿಡ್ ಅವರ ಬ್ಯಾಟ್ನಿಂದ ಮೂಡಿಬಂದಿತ್ತು. ಅಂದರೆ ಕೇವಲ 35 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 8 ಫೋರ್ ಬಾರಿಸಿ ಅಬ್ಬರಿಸಿದ್ದ ಸ್ಮಿತ್ ಶತಕದ ಹೊಸ್ತಿಲಲ್ಲಿ ಎಡವಿದ್ದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಎಲ್ ಗ್ರೆಗೊರಿ 13 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್ನೊಂದಿಗೆ 30 ರನ್ ಬಾರಿಸುವ ಮೂಲಕ ಸೋಮರ್‌ಸೆಟ್ ತಂಡದ ಮೊತ್ತವನ್ನು 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 231 ರನ್ ಕಲೆಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಗ್ಲೌಸೆಸ್ಟರ್‌ಶೈರ್ ಪರ ಆರಂಭಿಕ ಆಟಗಾರ ಮೈಲ್ಸ್ ಹ್ಯಾಮಂಡ್ 34 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 5 ಫೋರ್ನೊಂದಿಗೆ 61 ರನ್ ಬಾರಿಸಿದರು. ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬೆನ್ ಚಾರ್ಲ್ಸ್‌ವರ್ತ್ 25 ಎಸೆತಗಳಲ್ಲಿ 41 ರನ್ ಕಲೆಹಾಕಿದ್ದರು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಗ್ಲೌಸೆಸ್ಟರ್‌ಶೈರ್ ತಂಡವು ದಿಢೀರ್ ಕುಸಿತಕ್ಕೊಳಗಾಯಿತು. ಪರಿಣಾಮ 9 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 99 ರನ್ ಕಲೆಹಾಕಿದ್ದ ಗ್ಲೌಸೆಸ್ಟರ್‌ಶೈರ್ ತಂಡವು 151 ರನ್ಗಳಿಗೆ ಆಲೌಟ್ ಆಯಿತು. ಇತ್ತ ಸೋಮರ್‌ಸೆಟ್ ತಂಡವು 80 ರನ್ಗಳ ಭರ್ಜರಿ ಜಯ ಸಾಧಿಸಿದೆ.