IPL 2024: ಬರೋಬ್ಬರಿ 287 ರನ್; ತನ್ನದೇ ದಾಖಲೆ ಮುರಿದ ಹೈದರಾಬಾದ್‌..!

|

Updated on: Apr 15, 2024 | 10:37 PM

IPL 2024: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2024 ರ 30ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬರೋಬ್ಬರಿ 287 ರನ್ ಕಲೆಹಾಕುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ಸ್ಕೋರ್ ದಾಖಲಿಸಿದ ದಾಖಲೆ ನಿರ್ಮಿಸಿದೆ.

1 / 6
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2024 ರ 30ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬರೋಬ್ಬರಿ 287 ರನ್ ಕಲೆಹಾಕುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ಸ್ಕೋರ್ ದಾಖಲಿಸಿದ ದಾಖಲೆ ನಿರ್ಮಿಸಿದೆ.

2 / 6
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್‌ ತಂಡ ನಿಗದಿತ 20 ಓವರ್​ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 287 ರನ್ ಕಲೆಹಾಕಿತು. ಇದು ಐಪಿಎಲ್ ಇತಿಹಾಸದಲ್ಲೇ ತಂಡವೊಂದು ಇನ್ನಿಂಗ್ಸ್​ವೊಂದರಲ್ಲಿ ದಾಖಲಿಸಿದ ಅತ್ಯಧಿಕ ಮೊತ್ತವಾಗಿದೆ.

3 / 6
ವಾಸ್ತವವಾಗಿ ಇದೇ ಆವೃತ್ತಿಯಲ್ಲಿ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ 277 ರನ್ ಸಿಡಿಸಿ ಐಪಿಎಲ್ ಇತಿಹಾಸದಲ್ಲಿ ಅಧಿಕ ರನ್ ಬಾರಿಸಿದ್ದ (263 ರನ್) ಆರ್​ಸಿಬಿಯ ದಾಖಲೆಯನ್ನು ಮುರಿದಿತ್ತು. ಇದೀಗ ಕೆಲವೇ ದಿನಗಳ ಅಂತರದಲ್ಲಿ ಹೈದರಾಬಾದ್‌ ತನ್ನದೇ ದಾಖಲೆಯನ್ನು ಮುರಿದಿದೆ.

4 / 6
ಹೈದರಾಬಾದ್‌ ಪರ ಆರಂಭಿಕ ಅಭಿಷೇಕ್ ಶರ್ಮಾ ಆರಂಭದಲ್ಲಿ 22 ಎಸೆತಗಳಲ್ಲಿ 34 ರನ್ ಬಾರಿಸಿದರೆ, ಟ್ರಾವಿಸ್ ಹೆಡ್ ಕೇವಲ 41 ಎಸೆತಗಳಲ್ಲಿ 102 ರನ್‌ಗಳ ಇನಿಂಗ್ಸ್‌ ಆಡಿದರು. ಇವರಲ್ಲದೇ ಹೆನ್ರಿಚ್ ಕ್ಲಾಸೆನ್ ಕೂಡ 67 ರನ್ ಬಾರಿಸಿದರು. ಕೊನೆಯಲ್ಲಿ ಐಡೆನ್ ಮಾರ್ಕ್ರಾಮ್ 17 ಎಸೆತಗಳಲ್ಲಿ 32 ರನ್ ಹಾಗೂ ಅಬ್ದುಲ್ ಸಮದ್ 10 ಎಸೆತಗಳಲ್ಲಿ 37 ರನ್ ಕಲೆಹಾಕಿದರು.

5 / 6
ಈ ಪಂದ್ಯದಲ್ಲಿ ಹೈದರಾಬಾದ್‌ ಬ್ಯಾಟರ್​ಗಳು ಈ ರೀತಿ ಅಬ್ಬರಿಸುವಲ್ಲಿ ಆರ್​ಸಿಬಿ ಬೌಲರ್​ಗಳ ಕೊಡುಗೆ ಅಪಾರವಾಗಿತ್ತು. ಇದರಲ್ಲಿ ವೇಗಿ ರೀಸ್ ಟೋಪ್ಲಿ 4 ಓವರ್‌ಗಳಲ್ಲಿ 68 ರನ್ ನೀಡಿದರೆ, ಲಾಕಿ ಫರ್ಗುಸನ್ 4 ಓವರ್‌ಗಳಲ್ಲಿ 52 ರನ್ ಬಿಟ್ಟುಕೊಟ್ಟರು.

6 / 6
ಯಶ್ ದಯಾಳ್ ಕೂಡ 4 ಓವರ್‌ಗಳಲ್ಲಿ 51 ರನ್‌ಗಳನ್ನು ನೀಡಿದರೆ, ವೈಶಾಕ್ ವಿಜಯಕುಮಾರ್ 4 ಓವರ್‌ಗಳಲ್ಲಿ 64 ರನ್ ಬಿಟ್ಟುಕೊಟ್ಟರು. ಈ ರೀತಿಯಾಗಿ ಆರ್​ಸಿಬಿಯ ನಾಲ್ವರು ವೇಗಿಗಳು ಬೌಲಿಂಗ್​ನಲ್ಲಿ ತಲಾ ಅರ್ಧಶತಕ ಬಾರಿಸಿದರು.

Published On - 10:37 pm, Mon, 15 April 24