- Kannada News Photo gallery Cricket photos IPL 2024 rohit sharma registered unwanted record in mi vs csk clash
IPL 2024: ಶತಕದ ಇನ್ನಿಂಗ್ಸ್ ನಡುವೆಯೂ ಬೇಡದ ದಾಖಲೆ ಬರೆದ ರೋಹಿತ್ ಶರ್ಮಾ..!
IPL 2024: ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಬರೋಬ್ಬರಿ 12 ವರ್ಷಗಳ ಬಳಿಕ ಐಪಿಎಲ್ನಲ್ಲಿ ಶತಕ ಸಿಡಿಸಿದರು. ಅದಾಗ್ಯೂ ರೋಹಿತ್ಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
Updated on: Apr 15, 2024 | 7:51 PM

ಐಪಿಎಲ್ 2024 ರ 29ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ಲೀಗ್ನಲ್ಲಿ 4ನೇ ಗೆಲುವು ದಾಖಲಿಸಿದರೆ, ಇತ್ತ ಸೋತ ಮುಂಬೈ ಲೀಗ್ನಲ್ಲಿ 4ನೇ ಸೋಲನುಭವಿಸಿ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲೇ ಮುಂದುವರೆಯುವಂತಾಯಿತು.

ಇನ್ನು ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಬರೋಬ್ಬರಿ 12 ವರ್ಷಗಳ ಬಳಿಕ ಐಪಿಎಲ್ನಲ್ಲಿ ಶತಕ ಸಿಡಿಸಿದರು. ಅದಾಗ್ಯೂ ರೋಹಿತ್ಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.

ಈ ಮೂಲಕ ಗುರಿ ಬೆನ್ನಟ್ಟುವಾಗ ಅಜೇಯ ಶತಕ ಸಿಡಿಸಿದ ಹೊರತಾಗಿಯೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯದ ಮೂರನೇ ಬ್ಯಾಟರ್ ಎಂಬ ಬೇಡದ ದಾಖಲೆಯನ್ನು ರೋಹಿತ್ ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

ರೋಹಿತ್‌ಗಿಂತ ಮೊದಲು, 2010ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವಾಗ ಯೂಸುಫ್ ಪಠಾಣ್ ಕೇವಲ 37 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆದರೆ ಅವರಿಗೆ ತಂಡವನ್ನು ಸೋಲಿನಿಂದ ಪಾರು ಮಾಡಲು ಪಠಾಣ್ಗೆ ಸಾಧ್ಯವಾಗಿರಲಿಲ್ಲ.

ಇದಾದ ನಂತರ 2021ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ನ ಸಂಜು ಸ್ಯಾಮ್ಸನ್ 63 ಎಸೆತಗಳಲ್ಲಿ 119 ರನ್ ಬಾರಿಸಿದ್ದರು. ಆದರೆ ಅವರ ತಂಡ ಗೆಲ್ಲುವಲ್ಲಿ ಯಶಸ್ವಿಯಾಗಿರಲಿಲ್ಲ. ಇದೀಗ ರೋಹಿತ್ ಶರ್ಮಾ ಈ ಪಟ್ಟಿಗೆ ಮೂರನೇಯವರಾಗಿ ಎಂಟ್ರಿಕೊಟ್ಟಿದ್ದಾರೆ.

ಸೋಲಿನ ಹೊರತಾಗಿಯೂ ರೋಹಿತ್ ಅವರ ಈ ಶತಕದ ಇನ್ನಿಂಗ್ಸ್ ಬಹಳ ವಿಶೇಷವಾಗಿತ್ತು. ಏಕೆಂದರೆ ಇದು ರೋಹಿತ್ ಶರ್ಮಾ ಅವರ ಐಪಿಎಲ್ ವೃತ್ತಿಜೀವನದಲ್ಲಿ ಎರಡನೇ ಶತಕವಾಗಿತ್ತು. 2012 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 109 ರನ್‌ಗಳ ಅಜೇಯ ಶತಕದ ಇನ್ನಿಂಗ್ಸ್ ಆಡಿದ್ದರು. ಆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪಂದ್ಯವನ್ನು 27 ರನ್‌ಗಳಿಂದ ಗೆದ್ದುಕೊಂಡಿತ್ತು.

ಪಂದ್ಯದ ವಿಚಾರಕ್ಕೆ ಬಂದರೆ.. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ 206 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಮುಂಬೈ 186 ರನ್ ಕಲೆಹಾಕಲಷ್ಟೇ ಶಕ್ತವಾಗಿ 20 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಮುಂಬೈ ಪರ ಅಜೇಯ ಶತಕ ಸಿಡಿಸಿದ ರೋಹಿತ್ 63 ಎಸೆತಗಳಲ್ಲಿ 11 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 105 ರನ್ ಬಾರಿಸಿದರು.



















