IPL 2024: ಹರಾಜಿನಲ್ಲಿ ಕೋಟಿ, ಆಟದಲ್ಲಿ ಸಪ್ಪೆ! ವಿದೇಶಿ ಆಟಗಾರರ ನೀರಸ ಪ್ರದರ್ಶನ
IPL 2024: ಐಪಿಎಲ್ 17ನೇ ಆವೃತ್ತಿ ತನ್ನ ಅರ್ಧಪಯಣವನ್ನು ಮುಗಿಸಿದೆ. ಈ ಪಯಣದಲ್ಲಿ ಸಾಕಷ್ಟು ಆಟಗಾರರು ತಮ್ಮ ಆಟದ ಮೂಲಕ ತಾವು ಪಡೆದ ಸಂಭಾವನೆಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಆದರೆ ಮಿನಿ ಹರಾಜಿನಲ್ಲಿ ಕೋಟಿ ಕೋಟಿ ಪಡೆದಿದ್ದ ಸ್ಟಾರ್ ವಿದೇಶಿ ಆಟಗಾರರು ತಮ್ಮ ಕಳಪೆ ಆಟದ ಮೂಲಕ ಫ್ರಾಂಚೈಸಿಗಳಿಗೆ ಭಾರಿ ನಿರಾಸೆ ಮೂಡಿಸಿದ್ದಾರೆ. ಅಂತಹ ಐವರು ವಿದೇಶಿ ಆಟಗಾರರ ಪಟ್ಟಿ ಇಲ್ಲಿದೆ.
1 / 6
ಐಪಿಎಲ್ 17ನೇ ಆವೃತ್ತಿ ತನ್ನ ಅರ್ಧಪಯಣವನ್ನು ಮುಗಿಸಿದೆ. ಈ ಪಯಣದಲ್ಲಿ ಸಾಕಷ್ಟು ಆಟಗಾರರು ತಮ್ಮ ಆಟದ ಮೂಲಕ ತಾವು ಪಡೆದ ಸಂಭಾವನೆಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಆದರೆ ಮಿನಿ ಹರಾಜಿನಲ್ಲಿ ಕೋಟಿ ಕೋಟಿ ಪಡೆದಿದ್ದ ಸ್ಟಾರ್ ವಿದೇಶಿ ಆಟಗಾರರು ತಮ್ಮ ಕಳಪೆ ಆಟದ ಮೂಲಕ ಫ್ರಾಂಚೈಸಿಗಳಿಗೆ ಭಾರಿ ನಿರಾಸೆ ಮೂಡಿಸಿದ್ದಾರೆ. ಅಂತಹ ಐವರು ವಿದೇಶಿ ಆಟಗಾರರ ಪಟ್ಟಿ ಇಲ್ಲಿದೆ.
2 / 6
ಕ್ಯಾಮೆರಾನ್ ಗ್ರೀನ್: ಆರ್‌ಸಿಬಿ ಆಸ್ಟ್ರೇಲಿಯಾದ ಉದಯೋನ್ಮುಖ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು 17.5 ಕೋಟಿ ರೂಪಾಯಿಗಳಿಗೆ ಟ್ರೇಡಿಂಗ್ ಮಾಡುವ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಈ ಸೀಸನ್ನಲ್ಲಿ ಗ್ರೀನ್ಗೆ ಬೌಲಿಂಗ್ ಅಥವಾ ಬ್ಯಾಟಿಂಗ್ ಎರಡರಲ್ಲೂ ಕಮಾಲ್ ಮಾಡಲು ಸಾಧ್ಯವಾಗಲಿಲ್ಲ. ಈ ಸೀಸನ್ನಲ್ಲಿ ಆರ್‌ಸಿಬಿ ಪರ 5 ಪಂದ್ಯಗಳನ್ನಾಡಿರುವ ಗ್ರೀನ್ ಬೌಲಿಂಗ್‌ನಲ್ಲಿ ಕೇವಲ 2 ವಿಕೆಟ್‌ಗಳನ್ನು ಪಡೆದರೆ ಬ್ಯಾಟಿಂಗ್ನಲ್ಲಿ ಕೇವಲ 68 ರನ್ ಕಲೆಹಾಕಿದ್ದಾರೆ.
3 / 6
ಗ್ಲೆನ್ ಮ್ಯಾಕ್ಸ್‌ವೆಲ್: ಟಿ20 ಕ್ರಿಕೆಟ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಸ್ಥಿತಿ ಕೂಡ ಹದಗೆಟ್ಟಿದೆ. ಪ್ರತಿ ಸೀಸನ್ಗೆ ಆರ್ಸಿಬಿಯಿಂದ 11 ಕೋಟಿ ರೂ ವೇತನ ಪಡೆಯುವ ಮ್ಯಾಕ್ಸ್‌ವೆಲ್ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ ಕೇವಲ 32 ರನ್ ಗಳಿಸಲು ಶಕ್ತರಾಗಿದ್ದಾರೆ.
4 / 6
ಅಲ್ಜಾರಿ ಜೋಸೆಫ್: ವೆಸ್ಟ್ ಇಂಡೀಸ್ ವೇಗಿ ಅಲ್ಜಾರಿ ಜೋಸೆಫ್ ಅವರನ್ನು ಆರ್‌ಸಿಬಿ 11.4 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಅಲ್ಜಾರಿ ಆಗಮನದಿಂದ ತಂಡದ ಬೌಲಿಂಗ್ ಬಲಗೊಳ್ಳಲಿದೆ ಎಂದು ಆರ್‌ಸಿಬಿ ನಿರೀಕ್ಷಿಸಿತ್ತು ಆದರೆ ಅಂಥದ್ದೇನೂ ಕಾಣಲಿಲ್ಲ. ಈ ಸೀಸನ್ನಲ್ಲಿ, ಅಲ್ಜಾರಿ ಮೂರು ಪಂದ್ಯಗಳಲ್ಲಿ ಆಡಿದ್ದು, ಕೇವಲ 1 ವಿಕೆಟ್ ಪಡೆದಿದ್ದಾರೆ.
5 / 6
ಸ್ಯಾಮ್ ಕರನ್: ಪಂಜಾಬ್ ಕಿಂಗ್ಸ್ ತಂಡವು 2023 ರಲ್ಲಿ 18.50 ಕೋಟಿ ರೂ ನೀಡಿ ಸ್ಯಾಮ್ ಕರನ್ ಅವರನ್ನು ಖರೀದಿಸಿತ್ತು. ಆದರೆ 17 ನೇ ಸೀಸನ್ನಲ್ಲಿ ಕರನ್ ಕಮಾಲ್ ಮಾಡಿಲ್ಲ. ಇದುವರೆಗೆ ಕರನ್ ಬ್ಯಾಟಿಂಗ್ನಲ್ಲಿ 162 ರನ್ ಬಾರಿಸಿದರೆ, ಬ್ಯಾಟಿಂಗ್ನಲ್ಲಿ ಕೇವಲ 8 ವಿಕೆಟ್ಗಳನ್ನು ಪಡೆದಿದ್ದಾರೆ.
6 / 6
ಮಿಚೆಲ್ ಸ್ಟಾರ್ಕ್: ಐಪಿಎಲ್ 2024 ರ ಹರಾಜಿನಲ್ಲಿ ಹೆಚ್ಚು ಗಮನ ಸೆಳೆದ ಆಟಗಾರ ಮಿಚೆಲ್ ಸ್ಟಾರ್ಕ್. ದುಬೈನಲ್ಲಿ ನಡೆದ ಹರಾಜಿನಲ್ಲಿ ಸ್ಟಾರ್ಕ್ 24.75 ಕೋಟಿ ರೂ.ಗೆ ದಾಖಲೆಯ ಬಿಡ್‌ನೊಂದಿಗೆ ಕೆಕೆಆರ್ ತಂಡವನ್ನು ಸೇರಿಕೊಂಡರು. ಆದರೆ ಅವರ ಬೌಲಿಂಗ್‌ನಲ್ಲಿ ಮ್ಯಾಜಿಕ್ ಕಾಣುತ್ತಿಲ್ಲ. ಕೆಕೆಆರ್ ಪರ 6 ಪಂದ್ಯಗಳಲ್ಲಿ ಸ್ಟಾರ್ಕ್ ಕೇವಲ 5 ವಿಕೆಟ್ ಮಾತ್ರ ಪಡೆದಿದ್ದಾರೆ. ಅಲ್ಲದೆ ಸಾಕಷ್ಟು ರನ್ ಬಿಟ್ಟುಕೊಟ್ಟು ತುಂಬಾ ದುಬಾರಿಯಾಗುತ್ತಿದ್ದಾರೆ.