IPL 2024: ಐಪಿಎಲ್ನ ಸಾರ್ವಕಾಲಿಕ ಶ್ರೇಷ್ಠ ತಂಡ ಪ್ರಕಟ
TV9 Web | Updated By: ಝಾಹಿರ್ ಯೂಸುಫ್
Updated on:
Feb 21, 2024 | 11:53 AM
Greatest IPL XI: ಇಂಡಿಯನ್ ಪ್ರೀಮಿಯರ್ ಲೀಗ್ನ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಕೆಎಲ್ ರಾಹುಲ್, ರಾಬಿನ್ ಉತ್ತಪ್ಪ ಹಾಗೂ ಶಿಖರ್ ಧವನ್ ಸ್ಥಾನ ಪಡೆದಿಲ್ಲ. ಹಾಗೆಯೇ ವೆಸ್ಟ್ ಇಂಡೀಸ್ನ ಸ್ಪಿನ್ ಮಾಂತ್ರಿಕ ಸುನಿಲ್ ನರೈನ್ ಮತ್ತು ಅತ್ಯುತ್ತಮ ಆಲ್ರೌಂಡರ್ ಕೀರನ್ ಪೊಲಾರ್ಡ್ ಕೂಡ ಈ ತಂಡದಲ್ಲಿ ಕಾಣಿಸಿಕೊಂಡಿಲ್ಲ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇತ್ತ ಐಪಿಎಲ್ ಕಾವೇರುತ್ತಿದ್ದಂತೆ ಅತ್ತ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಪ್ರಕಟಿಸಿದೆ. ಅಂದರೆ ಕಳೆದ 16 ಸೀಸನ್ಗಳಲ್ಲಿ ಕಾಣಿಸಿಕೊಂಡ ಅತ್ಯುತ್ತಮ ಆಟಗಾರರನ್ನು ಒಳಗೊಂಡ ತಂಡವೊಂದನ್ನು ಸ್ಟಾರ್ ಸ್ಪೋರ್ಟ್ಸ್ ಪ್ಯಾನೆಲ್ ಸದಸ್ಯರಾದ ಲೆಜೆಂಡ್ಸ್ ಮ್ಯಾಥ್ಯೂ ಹೇಡನ್, ವಾಸಿಂ ಅಕ್ರಮ್, ಡೇಲ್ ಸ್ಟೇನ್ ಮತ್ತು ಟಾಮ್ ಮೂಡಿ ಅವರು ಆಯ್ಕೆ ಮಾಡಿದ್ದಾರೆ.
2 / 6
ಒಟ್ಟು 16 ಸದಸ್ಯರನ್ನು ಒಳಗೊಂಡಿರುವ ಈ ತಂಡದ ನಾಯಕರಾಗಿ ಮಹೇಂದ್ರ ಸಿಂಗ್ ಧೋನಿ ಆಯ್ಕೆಯಾಗಿದ್ದಾರೆ. ಹಾಗೆಯೇ ಆರಂಭಿಕರಾಗಿ ಸ್ಥಾನ ಪಡೆದಿರುವುದು ಡೇವಿಡ್ ವಾರ್ನರ್ ಮತ್ತು ರೋಹಿತ್ ಶರ್ಮಾ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದಾರೆ.
3 / 6
ಹಾಗೆಯೇ ಈ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ವಿದೇಶಿ ಆಟಗಾರರಾಗಿ ಎಬಿ ಡಿವಿಲಿಯರ್ಸ್, ರಶೀದ್ ಖಾನ್, ಡೇವಿಡ್ ವಾರ್ನರ್ ಮತ್ತು ಲಸಿತ್ ಮಾಲಿಂಗ ಆಯ್ಕೆಯಾಗಿದ್ದಾರೆ. ಅಂದರೆ ಆಡುವ ಬಳಗದಲ್ಲಿ ವೆಸ್ಟ್ ಇಂಡೀಸ್ನ ಯಾವುದೇ ಆಟಗಾರರು ಆಯ್ಕೆಯಾಗಿಲ್ಲ.
4 / 6
ಇನ್ನು ಇಂಪ್ಯಾಕ್ಟ್ ಸಬ್ ಆಟಗಾರರಾಗಿ ಕ್ರಿಸ್ ಗೇಲ್, ಯುಜ್ವೇಂದ್ರ ಚಹಲ್, ಭುವನೇಶ್ವರ್ ಕುಮಾರ್ ಮತ್ತು ಆಂಡ್ರೆ ರಸೆಲ್ ಆಯ್ಕೆಯಾಗಿದ್ದಾರೆ. ಅದರಂತೆ ಐಪಿಎಲ್ನ ಸಾರ್ವಕಾಲಿಕ ಶ್ರೇಷ್ಠ ತಂಡ ಈ ಕೆಳಗಿನಂತಿದೆ...
5 / 6
ಸಾರ್ವಕಾಲಿಕ IPL XI: ಡೇವಿಡ್ ವಾರ್ನರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಸುರೇಶ್ ರೈನಾ, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಶೀದ್ ಖಾನ್, ಜಸ್ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ. ಸ್ಟೀಫನ್ ಫ್ಲೆಮಿಂಗ್ (ಕೋಚ್)
6 / 6
ಇಂಪ್ಯಾಕ್ಟ್ ಸಬ್ ಆಟಗಾರರು: ಯುಜ್ವೇಂದ್ರ ಚಹಲ್, ಕ್ರಿಸ್ ಗೇಲ್, ಭುವನೇಶ್ವರ್ ಕುಮಾರ್, ಆಂಡ್ರೆ ರಸೆಲ್.