Rachin Ravindra: 6,6,6,6,6,6: ಅಬ್ಬರದ ಅರ್ಧಶತಕ ಸಿಡಿಸಿದ ರಚಿನ್ ರವೀಂದ್ರ
Australia vs New Zealand: ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಟಿ20 ಸರಣಿಯು ಇಂದಿನಿಂದ (ಫೆ.21) ಶುರುವಾಗಿದೆ. ವೆಲ್ಲಿಂಗ್ಟನ್ನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ರಚಿನ್ ರವೀಂದ್ರ ಅಬ್ಬರಿಸಿದ್ದಾರೆ. ಈ ಮೂಲಕ ಚೊಚ್ಚಲ ಟಿ20 ಅರ್ಧಶತಕ ಪೂರೈಸಿದ್ದಾರೆ.
Updated on:Feb 21, 2024 | 2:04 PM

ವೆಲ್ಲಿಂಗ್ಟನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡದ ಯುವ ದಾಂಡಿಗ ರಚಿನ್ ರವೀಂದ್ರ (Rachin Ravindra) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ಪರ ಫಿನ್ ಅಲೆನ್ ಹಾಗೂ ಡೆವೊನ್ ಕಾನ್ವೆ ಇನಿಂಗ್ಸ್ ಆರಂಭಿಸಿದರು.

17 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 32 ರನ್ ಬಾರಿಸಿದ ಅಲೆನ್, ಮಿಚೆಲ್ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಕಾನ್ವೆ ಹಾಗೂ ರಚಿನ್ ರವೀಂದ್ರ ಭರ್ಜರಿ ಜೊತೆಯಾಟವಾಡಿದರು. ಆರಂಭದಲ್ಲಿ ಎಚ್ಚರಿಕೆವಾಡಿದ ರಚಿನ್ 16 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 14 ರನ್ಗಳು ಮಾತ್ರ.

ಇದಾದ ಬಳಿಕ ಬ್ಯಾಟಿಂಗ್ ಗೇರ್ ಬದಲಿಸಿದ ರಚಿನ್ ಆಸೀಸ್ ಬೌಲರ್ಗಳ ಬೆಂಡೆತ್ತಲು ಶುರು ಮಾಡಿದರು. ಪರಿಣಾಮ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಇದು ಟಿ20 ಕ್ರಿಕೆಟ್ನಲ್ಲಿ ರಚಿನ್ ರವೀಂದ್ರ ಅವರ ಮೊದಲ ಅರ್ಧಶತಕ ಎಂಬುದು ವಿಶೇಷ.

ಇನ್ನು ಅರ್ಧಶತಕ ಬೆನ್ನಲ್ಲೇ ಸಿಡಿಲಬ್ಬರದ ಮುಂದುವರೆಸಿದ ರಚಿನ್ 35 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 68 ರನ್ ಚಚ್ಚಿದರು. ಮತ್ತೊಂದೆಡೆ ಕಾನ್ವೆ 46 ಎಸೆತಗಳಲ್ಲಿ 2 ಸಿಕ್ಸ್ ಮತ್ತು 5 ಫೋರ್ಗಳೊಂದಿಗೆ 63 ರನ್ಗಳ ಕೊಡುಗೆ ನೀಡಿದರು.

ರಚಿನ್ ರವೀಂದ್ರ (68) ಹಾಗೂ ಡೆವೊನ್ ಕಾನ್ವೆ (63) ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ನ್ಯೂಝಿಲೆಂಡ್ ತಂಡವು ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 215 ರನ್ ಕಲೆಹಾಕಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 216 ರನ್ಗಳ ಕಠಿಣ ಗುರಿ ನೀಡಿದೆ.
Published On - 2:03 pm, Wed, 21 February 24
