IPL 2024: ಶತಕದ ಇನ್ನಿಂಗ್ಸ್​ನಲ್ಲಿ ಬೇಡದ ದಾಖಲೆ ಬರೆದ ಕೊಹ್ಲಿ..!

|

Updated on: Apr 06, 2024 | 11:30 PM

IPL 2024: ತಮ್ಮ ಇನ್ನಿಂಗ್ಸ್​ನಲ್ಲಿ 72 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 113 ರನ್ ಕಲೆಹಾಕಿದರು. ಆದರೆ ಈ ಶತಕದ ಹೊರತಾಗಿಯೂ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

1 / 6
ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆತಿಥೇಯ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿಯ ಆರಂಭಿಕ ವಿರಾಟ್ ಕೊಹ್ಲಿ ಈ ಸೀಸನ್​ನ ಚೊಚ್ಚಲ ಹಾಗೂ ಐಪಿಎಲ್​ನ 8ನೇ ಶತಕ ಸಿಡಿಸಿ ಮಿಂಚಿದ್ದಾರೆ.

2 / 6
ತಮ್ಮ ಇನ್ನಿಂಗ್ಸ್​ನಲ್ಲಿ 72 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 113 ರನ್ ಕಲೆಹಾಕಿದರು. ಆದರೆ ಈ ಶತಕದ ಹೊರತಾಗಿಯೂ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

3 / 6
ವಾಸ್ತವವಾಗಿ ಈ ಪಂದ್ಯದಲ್ಲಿ ತಮ್ಮ ಶತಕ ಪೂರೈಸಲು ವಿರಾಟ್ ಕೊಹ್ಲಿ ಬರೋಬ್ಬರಿ 67 ಎಸೆತಗಳನ್ನು ತೆಗೆದುಕೊಂಡರು. ಈ ಮೂಲಕ ಕೊಹ್ಲಿ ಐಪಿಎಲ್​ ಇತಿಹಾಸದಲ್ಲಿ ಶತಕ ಪೂರೈಸಲು ಅತಿ ಹೆಚ್ಚು ಎಸೆತಗಳನ್ನು ತೆಗೆದುಕೊಂಡ ಆಟಗಾರರ ಪೈಕಿಯಲ್ಲಿ ಜಂಟಿ ಮೊದಲ ಸ್ಥಾನಕ್ಕೇರಿದ್ದಾರೆ.

4 / 6
ವಿರಾಟ್ ಕೊಹ್ಲಿಗೂ ಮುನ್ನ 2009 ರ ಐಪಿಎಲ್​ನಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ಮನೀಶ್ ಪಾಂಡೆ ಕೂಡ ತಮ್ಮ ಶತಕ ಪೂರೈಸಲು 67 ಎಸೆತಗಳನ್ನು ತೆಗೆದುಕೊಂಡಿದ್ದರು. ಅಂದಿನಿಂದ ಈ ಬೇಡದ ದಾಖಲೆ ಮನೀಶ್ ಹೆಸರಿನಲ್ಲಿತ್ತು.

5 / 6
ವಿರಾಟ್ ಕೊಹ್ಲಿಯ ಶತಕ ಎಷ್ಟು ನಿಧಾನವಾಗಿತ್ತು ಎಂಬುದಕ್ಕೆ ಆರ್​​ಸಿಬಿ ಇನ್ನಿಂಗ್ಸ್​ನ 19ನೇ ಓವರ್​ ಸಾಕ್ಷಿಯಾಗಿತ್ತು. ಈ ಓವರ್​ನಲ್ಲಿ ಆರ್​ಸಿಬಿ ಕೇವಲ ಮೂರೇ ಮೂರು ಕಲೆಹಾಕಿತು. ಇದೇ ಓವರ್​ನಲ್ಲಿ ಕೊಹ್ಲಿ ಶತಕದ ಸನಿಹದಲ್ಲಿದ್ದರು.

6 / 6
ಹೀಗಾಗಿ ಓವರ್​ ಆರಂಭದಲ್ಲಿ ಸ್ಟ್ರೈಕ್​ನಲ್ಲಿದ್ದ ಕೊಹ್ಲಿ ಬಿಗ್ ಶಾಟ್ ಆಡುವ ಮೊದಲು ಸಿಂಗಲ್ ಮೊರೆ ಹೋದರು. ಇದರಿಂದಾಗಿ ಮೊದಲ ಎರಡು ಎಸೆತಗಳಲ್ಲಿ ಕೇವಲ 1 ರನ್ ಮಾತ್ರ ಬಂತು. ಕೊಹ್ಲಿಯ ಈ ಆಟ ನೋಡಿದವರು ಕೊಹ್ಲಿ ಶತಕಕ್ಕಾಗಿ ನಿಧಾನವಾಗಿ ಬ್ಯಾಟಿಂಗ್ ಮಾಡಿದರು ಎಂದು ಆರೋಪಿಸುತ್ತಿದ್ದಾರೆ.

Published On - 10:32 pm, Sat, 6 April 24